ನವದೆಹಲಿ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ್ದು, ಇಂದಿನಿಂದ 48 ದಿನಗಳ ಪರ್ಯಂತ ಬ್ರಹ್ಮಕಲಶಾಭಿಷೇಕೋತ್ಸವ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ 400 ಮಂದಿ ಋತ್ವಿಜರು ಭಾಗಿಯಾಗಲಿದ್ದು, ಈ ಪೈಕಿ 360 ಮಂದಿ ಕನ್ನಡಿಗರೇ ಇದ್ದಾರೆ. ಇದಲ್ಲದೇ ಅಯೋಧ್ಯೆಯ ಭವ್ಯಮಂದಿರದಿಂದಾಗಿ ದೇಶದ ಆರ್ಥಿಕತೆಗೆ ಎಷ್ಟು ಲಾಭ ಆಗಬಹುದು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
ಬ್ರಹ್ಮಕಲಶಾಭಿಷೇಕೋತ್ಸವ ಧಾರ್ಮಿಕ ವಿಧಿ-ವಿಧಾನಗಳು ಬುಧವಾರ(ಜನವರಿ 24 ) ಬೆಳಗ್ಗೆ 6ಗಂಟೆಯಿಂದ ಆರಂಭವಾಗಿದ್ದು, ಮಧ್ಯಾಹ್ನ 12 ಗಂಟೆವರೆಗೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಸಂಜೆ ಮತ್ತೆ ಧಾರ್ಮಿಕ ಕಾರ್ಯಕ್ರಮ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಬೆಳಗ್ಗೆ ಅರಣಿ ಮಥನದೊಂದಿಗೆ ಬ್ರಹ್ಮಕಲಶಾಭಿಷೇಕೋತ್ಸವದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮೊದಲ ದಿನ ಗಣಪತಿ ಹವನ, ಪೂಜೆ ಬಳಿಕ ತತ್ವ ಹವನ ನಡೆಯಲಿದೆ. ತತ್ವಕಲಶ ಪ್ರತಿಷ್ಠಾಪಿಸಿ ಬೆಳಗ್ಗೆ 10ಕ್ಕೆ ಸ್ವತಃ ಪೇಜಾವರ ಶ್ರೀಗಳು ರಾಮಲಲ್ಲಾನಿಗೆ ಅಭಿಷೇಕ ನೆರವೇರಿಸಲಿದ್ದಾರೆ. 4 ದಿನಗಳ ಕಾಲ ತಲಾ 2 ಕುಂಡಗಳಲ್ಲಿ ತತ್ವ ಹವನ ನಡೆಯಲಿದೆ. ಪ್ರತಿದಿನ ವಿವಿಧ ತಂತ್ರಗ್ರಂಥಗಳ ಮಹಾಹವನ ನೆರವೇರಲಿದೆ. ನವಗ್ರಹ, ಭೂವರಾಹ ಮಂತ್ರ ಮತ್ತು ಅಷ್ಟ ಮಹಾಮಂತ್ರ ಸೇರಿ 48 ದಿನ ವಿವಿಧ ಹವನಗಳು ನಡೆಯಲಿವೆ.
ಇದನ್ನೂ ಓದಿ-Ram Mandir: ರಾಮ್ ಲಲ್ಲಾ ಭಕ್ತರಿಗೊಂದು ಮಹತ್ವದ ಅಪ್ಡೇಟ್! ಮಂಗಳವಾರದಿಂದ ಬದಲಾಗಲಿದೆ ದರುಶನದ ವೇಳೆ
ಕೊನೆ 5 ದಿನದ ಮಹತ್ವವೇನು?
ಬ್ರಹ್ಮಕಲಶಾಭಿಷೇಕೋತ್ಸವ ಮಾರ್ಚ್ 10ರವರೆಗೆ 48 ದಿನ ನಿರಂತರವಾಗಿ ನಡೆಯಲಿದೆ. ಆದರೆ ಕೊನೆಯ 5 ದಿನ ಮಹತ್ವದ್ದಾಗಿದ್ದು, ಮಾ 6ರಿಂದ 10ರವರೆಗೆ ಪ್ರತಿದಿನ 250 ಕಲಶಗಳ ಪ್ರತಿಷ್ಠೆಯಾಗಿ ಅಭಿಷೇಕ ನಡೆಯಲಿದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಯೋಧ್ಯೆಯಿಂದ ಮಾಹಿತಿ ನೀಡಿದ್ದಾರೆ.
ರಾಮಮಂದಿರದಿಂದ ಆರ್ಥಿಕತೆಗೆ ಎಷ್ಟು ಲಾಭ ಗೊತ್ತಾ..?
ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣದಿಂದ ಉತ್ತರ ಪ್ರದೇಶ ಸೇರಿದಂತೆ ದೇಶದ ಆರ್ಥಿಕತೆಗೆ ಭಾರೀ ಲಾಭವಾಗಲಿದೆ. ಜಾಗತಿಕ ಬ್ರೋಕರೇಜ್ ಸಂಸ್ಥೆಯಾದ ಜೆಫ್ರೀಸ್ ಪ್ರಕಾರ, ಅಯೋಧ್ಯೆಯ ರಾಮಮಂದಿರವು ಭಾರತದ ಪ್ರವಾಸೋದ್ಯಮಕ್ಕೆ ಪುಷ್ಟಿ ಕೊಡಲಿದೆ. ಅದರಲ್ಲೂ ಬಹಳಷ್ಟು ದಶಕಗಳಿಂದ ಏಳಿಗೆಯನ್ನೇ ಸಾಧಿಸದ ಉತ್ತರಪ್ರದೇಶ ರಾಜ್ಯಕ್ಕೆ ರಾಮ ಮಂದಿರ ಗೇಮ್ ಚೇಂಜರ್ ಎನಿಸಬಹುದು. ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ರಾಮಮಂದಿರಕ್ಕೆ ಪ್ರತಿದಿನ ೧ ಲಕ್ಷ ಪ್ರವಾಸಿಗರು ಬರಬಹುದು. ಮುಂದಿನ ೬ ತಿಂಗಳಲ್ಲಿ 2 ಕೋಟಿ ಪ್ರವಾಸಿಗರು ಅಯೋಧ್ಯೆಗೆ ಬರಬಹುದು ಎಂಬ ನಿರೀಕ್ಷೆ ಇದೆ.
ಜೆಫ್ರೀಸ್ ಸಂಸ್ಥೆ ಪ್ರಕಾರ, ವರ್ಷಕ್ಕೆ 5-10 ಕೋಟಿ ಪ್ರವಾಸಿಗರು ಅಯೋಧ್ಯೆಗೆ ಭೇಟಿ ನೀಡಬಹುದು.‘ಭಾರತದ ಪ್ರವಾಸೋದ್ಯಮದಲ್ಲಿ ಧಾರ್ಮಿಕ ಸ್ಥಳಗಳೇ ಹೆಚ್ಚು ಆದಾಯ ತರುತ್ತಿರುವುದು. ಭಾರತದ ಹಲವು ಜನಪ್ರಿಯ ಧಾರ್ಮಿಕ ಸ್ಥಳಗಳಲ್ಲಿ ಸೀಮಿತ ಇನ್ಫ್ರಾಸ್ಟ್ರಕ್ಚರ್ ಇದ್ದರೂ ವರ್ಷಕ್ಕೆ ಒಂದರಿಂದ ಮೂರು ಕೋಟಿವರೆಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಈಗ ಉತ್ತಮ ಸಂಪರ್ಕ ವ್ಯವಸ್ಥೆ ಮತ್ತು ಇನ್ಫ್ರಾಸ್ಟ್ರಕ್ಚರ್ ಇರುವ ಅಯೋಧ್ಯೆಯು ಉತ್ತಮ ಆರ್ಥಿಕ ಪರಿಣಾಮಗಳನ್ನು ಸೃಷ್ಟಿಸಬಲ್ಲುದು’ ಎಂದು ಜಾಗತಿಕ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ-ಅಯೋಧ್ಯೆಯಲ್ಲಿ ರಾಮಲಲ್ಲಾನಿಗೆ ಜೀವ ಪ್ರತಿಷ್ಟಾನ- ಬೆಂಗಳೂರಿನಲ್ಲಿ ಎಲ್ಲೆಲ್ಲೂ ರಾಮನಾಮ..!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.