Amul Milk Price Hike: ಪ್ರಸಿದ್ಧ ಡೈರಿ ಅಮುಲ್ ಸದ್ದಿಲ್ಲದೇ ಹಾಲಿನ ದರವನ್ನು ಹೆಚ್ಚಿಸಿದೆ. ಇದರಿಂದ ಹಬ್ಬ ಹರಿದಿನಗಳ ಸಮಯದಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಶನಿವಾರ, ಕಂಪನಿಯು ಗ್ರಾಹಕರಿಗೆ ಬಿಗ್‌ ಶಾಕ್‌ ನೀಡಿದೆ. ವಾಸ್ತವವಾಗಿ, ಅಮುಲ್ ಮಾರುಕಟ್ಟೆಯಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಿಸಿದೆ. ಇಂದಿನಿಂದಲೇ ಹೊಸ ಬೆಲೆಗಳು ಜಾರಿಗೆ ಬಂದಿವೆ. ಈ ಹಿಂದೆ ಆಗಸ್ಟ್ 17ರಿಂದ ಅಮುಲ್ ಹಾಲಿನ ದರವನ್ನು ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Reliance Jio ಬಳಕೆದಾರರಿಗೆ ಬಿಗ್‌ ಶಾಕ್! Free OTT ಸದಸ್ಯತ್ವ ನೀಡುತ್ತಿದ್ದ ಈ 12 ಪ್ಲಾನ್‌ಗಳು ಸ್ಥಗಿತ!


ಬೆಲೆ ಎಷ್ಟು ಹೆಚ್ಚಾಗಿದೆ?


ಇದಕ್ಕೂ ಮುನ್ನ ಅಮುಲ್ ಹಾಲಿನ ದರವನ್ನು ಆಗಸ್ಟ್ 17ರಿಂದ ಲೀಟರ್‌ಗೆ 2 ರೂ. ಹಚ್ಚಿಸಿತ್ತು. ಹೊಸ ದರದ ಪ್ರಕಾರ ಅಮುಲ್ ತಾಜಾ ಹಾಲು ಲೀಟರ್‌ಗೆ 50 ರೂ., ಅಮುಲ್ ಗೋಲ್ಡ್ ಲೀಟರ್‌ಗೆ 62 ರೂ. ಮತ್ತು ಅಮುಲ್ ಶಕ್ತಿ ಲೀಟರ್‌ಗೆ 56 ರೂ.ಗೆ ಲಭ್ಯವಿದೆ.  


ಮದರ್ ಡೈರಿ ಉತ್ಪನ್ನಗಳ ದರವನ್ನು ಹೆಚ್ಚಿಸಿದೆ : 


ಮದರ್ ಡೈರಿ ಕೂಡ ಆಗಸ್ಟ್‌ನಲ್ಲಿ ಹಾಲಿನ ದರವನ್ನು ಹೆಚ್ಚಿಸಿತ್ತು. ಮದರ್ ಡೈರಿಯು ದೆಹಲಿ-ಎನ್‌ಸಿಆರ್‌ನಲ್ಲಿ ಹಾಲಿನ ದರವನ್ನು ಲೀಟರ್‌ಗೆ 2 ರೂ. ಹೆಚ್ಚಿಸಿತ್ತು. ಹೊಸ ದರಗಳು ಆಗಸ್ಟ್ 17 ರಿಂದ ಅನ್ವಯವಾಗುತ್ತವೆ. ಈ ವರ್ಷದ ಮಾರ್ಚ್‌ನಲ್ಲಿ ಮದರ್ ಡೈರಿ ಹಾಲಿನ ದರವನ್ನು ಹೆಚ್ಚಿಸಿತ್ತು. ದರ ಏರಿಕೆಯನ್ನು ಉಲ್ಲೇಖಿಸಿ, ಮದರ್ ಡೈರಿ ಇತ್ತೀಚೆಗೆ ಹಾಲು-ಮೊಸರು, ಮಜ್ಜಿಗೆ ಇತ್ಯಾದಿಗಳ ದರವನ್ನು ಹೆಚ್ಚಿಸಿದೆ. ದರ ಹೆಚ್ಚಳದ ಕುರಿತು ಕಂಪನಿಯು ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ ಎಂದು ಹೇಳಿದೆ. ಇದರಿಂದಾಗಿ ದರ ಹೆಚ್ಚಿಸದೆ ಬೇರೆ ದಾರಿಯಿಲ್ಲ. ಹಾಲು ಮತ್ತು ಮೊಸರು ಮುಂತಾದ ಡೈರಿ ಉತ್ಪನ್ನಗಳ ಬೆಲೆ ಏರಿಕೆಯ ಲಾಭವು ಮದರ್ ಡೈರಿಯಿಂದ ಸರಕುಗಳನ್ನು ತೆಗೆದುಕೊಳ್ಳುವ ರೈತರಿಗೆ ಹೋಗುತ್ತದೆ ಎಂದು ಕಂಪನಿ ಹೇಳುತ್ತದೆ.


ಇದನ್ನೂ ಓದಿ :  Top Selling MPV: ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಸೃಷ್ಟಿಸಿದ 3 ಬಹು ಉದ್ದೇಶಿತ ಕಾರುಗಳು, ಮತ್ತೆ ನಂ.1 ಪಟ್ಟಕ್ಕೇರಿದೆ ಈ ಕಾರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ