ಆಂಧ್ರಪ್ರದೇಶ: ಸರಿಯಾಗಿ 6 ತಿಂಗಳ ಹಿಂದೆ ಟೊಮೇಟೊಗೆ ಅಷ್ಟೇನೂ ಡಿಮ್ಯಾಂಡ್ ಇರಲಿಲ್ಲ. ಆದರೆ ದಿಢೀರ್ ಏರಿಕೆ ಕಂಡ ಟೊಮೇಟೊಗೆ ಚಿನ್ನದ ರೇಟು ಬಂತು. ದೇಶದಲ್ಲಿ ಟೊಮೇಟೊ ಬೆಲೆ ದಿಢೀರ್​ ಏರಿಕೆ ಕಂಡ ಬಳಿಕ ಅನೇಕ ರೈತರು ಲಕ್ಷದಿಂದ ಕೋಟಿ ಕೋಟಿ ಲಾಭ ಮಾಡಿದ್ರು.


COMMERCIAL BREAK
SCROLL TO CONTINUE READING

ಇಷ್ಟುವರ್ಷ ತಾಳ್ಮೆಯಿಂದ ಇದ್ದ ಅನ್ನದಾತರಿಗೆ ಟೊಮೇಟೊದಿಂದ ಬಂಪರ್ ಲಾಟರಿ ಹೊಡೆಯಿತು. ಕೇವಲ 1-2 ಎಕರೆ ಹೊಲದಲ್ಲಿ ಟೊಮೇಟೊ ಬೆಳೆದು ರೈತರು ಕೋಟಿ ಕೋಟಿ ಲಾಭ ಮಾಡಿದ್ದಾರೆ. ಈ ಸಾಲಿಗೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತರೊಬ್ಬರು ಸೇರಿದ್ದಾರೆ. ತಮ್ಮ ಜಮೀನಿನಲ್ಲಿ ಬೆಳೆದ 40 ಸಾವಿರ ಬಾಕ್ಸ್ ಟೊಮೇಟೊ ಮಾರಾಟ ಮಾಡಿ ಕೇವಲ 45 ದಿನಗಳಲ್ಲಿ ಬರೋಬ್ಬರಿ 4 ಕೋಟಿ ರೂ. ಆದಾಯ ಗಳಿಸಿದ್ದಾರೆ.


ಇದನ್ನೂ ಓದಿ: ಈ ಹಣ್ಣುಗಳ ತೋಟಗಾರಿಕೆಗೆ ಸರ್ಕಾರ ನೀಡುತಿದೆ ಶೇ.90 ರಷ್ಟು ಸಬ್ಸಿಡಿ!


22 ಎಕರೆ ಕೃಷಿ ಭೂಮಿ ಹೊಂದಿರುವ ಕೃಷಿಕ ಚಂದ್ರಮೌಳಿ ಅವರು, ಏಪ್ರಿಲ್​ನ ಮೊದಲ ವಾರದಲ್ಲಿ ಟೊಮೇಟೊ ಗಿಡಗಳನ್ನು ನೆಟ್ಟಿದ್ದರು. ಅಲ್ಪಾವಧಿಯಲ್ಲಿ  ಉತ್ತಮ ಇಳುವರಿ ಪಡೆಯಲು ಸೂಕ್ಷ್ಮ ನೀರಾವರಿ ವಿಧಾನಗಳನ್ನು ಅನುಸರಿಸಿದ ಅವರಿಗೆ ಬಂಪರ್ ಲಾಭ ಸಿಕ್ಕಿದೆ. ಜೂನ್ ಅಂತ್ಯದ ವೇಳೆಗೆ ತಾವು ನಿರೀಕ್ಷಿಸಿದಂತೆ ಲಾಭದಾಯಕ ಇಳುವರಿ ಪಡೆಯುವ ಮೂಲಕ ಅವರು ಯಶಸ್ವಿಯಾಗಿದ್ದಾರೆ.


ಚಂದ್ರಮೌಳಿಯವರು ಕರ್ನಾಟಕದ ಕೋಲಾರ ಮಾರುಕಟ್ಟೆಯಲ್ಲಿ ತಮ್ಮ ಟೊಮೇಟೊ ಮಾರಾಟ ಮಾಡಿದ್ದಾರೆ. ಕಳೆದ 45 ದಿನಗಳಲ್ಲಿ 40 ಸಾವಿರ ಬಾಕ್ಸ್‌ಗಳನ್ನು ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್ ಟೊಮೇಟೊ ಬೆಲೆ 1,000- 1,500 ರೂ. ಇತ್ತು ಎಂದು ಖುಷಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಇಲ್ಲಿಯವರೆಗೆ ನಾನು ಬೆಳೆದ ಬೆಳೆಯಿಂದ 4 ಕೋಟಿ ಆದಾಯ ಬಂದಿದೆ. ಅದರಲ್ಲಿ 1 ಕೋಟಿ ಕಮಿಷನ್ ಮತ್ತು ಸಾರಿಗೆ ಶುಲ್ಕ ಕಡಿತಗೊಂಡಿದೆ. ಹೀಗಾಗಿ ನನಗೆ 3 ಕೋಟಿ ಲಾಭ ಸಿಕ್ಕಿದೆ’ ಎಂದು ಹೇಳಿದ್ದಾರೆ.


ಇದನ್ನೂ ಓದಿ: ರೈತರಿಗೊಂದು ಗುಡ್ ನ್ಯೂಸ್! ಈ ತಂತ್ರಜ್ಞಾನದ ಮೂಲಕ ಕೃಷಿ ಮಾಡಲು ಸಿಗಲಿದೆ ಉಚಿತ ತರಬೇತಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.