Subsidy On Fruit Farming: ಭಾರತ ಸರ್ಕಾರದ ಕಲ್ಯಾಣ ಯೋಜನೆಗಳಿಂದಾಗಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ದಾಖಲೆಯ ಏರಿಕೆಯಾಗಿದೆ. 2020-21ರಲ್ಲಿ 102.48 ಮಿಲಿಯನ್ ಟನ್ಗಳಿಗೆ ಹೋಲಿಸಿದರೆ 2021-22ರಲ್ಲಿ ಹಣ್ಣುಗಳ ಉತ್ಪಾದನೆ 107.51 ಮಿಲಿಯನ್ ಟನ್ಗಳಿಗೆ ಹೆಚ್ಚಾಗಿದೆ, ಇದು ಶೇ.4.90% ರಷ್ಟು ಹೆಚ್ಚಳವಾಗಿದೆ. ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ (Business News In Kannada) ಮಾಡುವ ನಿಟ್ಟಿನಲ್ಲಿ ಜಿಲ್ಲಾ ತೋಟಗಾರಿಕೆ ಇಲಾಖೆಯು ಬಿಹಾರ ಸರ್ಕಾರದ ಸಹಯೋಗದಲ್ಲಿ ಮುಂದಾಗಿದೆ. ಇದರ ಅಡಿಯಲ್ಲಿ, ರೈತರು ಮಾವು, ಬಾಳೆ, ಸೀಬೆಹಣ್ಣು ಮತ್ತು ಪಪ್ಪಾಯಿಯ ತೋಟಗಾರಿಕೆಯಿಂದ ಉತ್ತಮ ಆದಾಯವನ್ನು ಪಡೆಯಬಹುದು.
ಮಾವು, ಸೀಬೆಹಣ್ಣು, ಬಾಳೆ ತೋಟಗಾರಿಕೆ ಮೂಲಕ ರಾಜ್ಯದ ರೈತರಿಗೆ ಆದಾಯ ಹೆಚ್ಚಿಸಿಕೊಳ್ಳಲು ಉತ್ತಮ ಅವಕಾಶವಿದೆ. ಮರಗಳನ್ನು ನೆಡಲು ಮತ್ತು ನಿರ್ವಹಿಸಲು ರೈತರಿಗೆ ಸಹಾಯಧನದ ರೂಪದಲ್ಲಿ ಬಿಹಾರ ಸರ್ಕಾರದಿಂದ ಹಣವನ್ನು ನೀಡಲಾಗುತ್ತಿದೆ. ರೈತರು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ನೆಟ್ಟು ಪ್ರಯೋಜನ ಪಡೆಯಬಹುದು.
ಸಹಾಯಧನದ ಲಾಭ ಸಿಗಲಿದೆ
ಯೋಜನೆಗೆ ಆಯ್ಕೆಯಾದ ರೈತರಿಗೂ ಸಹಾಯಧನ ನೀಡಲಾಗುವುದು. ಮಾವು, ಬಾಳೆ ಮತ್ತು ಸೀಬೆಹಣ್ಣು ಬೆಳೆಗಳಿಗೆ ಶೇ.90 ರಷ್ಟು ಸಹಾಯಧನ ನೀಡಿದರೆ, ಪಪ್ಪಾಯಿ ಬೆಳೆಗೆ ಶೇ.75 ಸಬ್ಸಿಡಿ ನೀಡುತ್ತಿದೆ.
ಮೊದಲು ಬಂದವರಿಗೆ ಆದ್ಯತೆ
ಮಾವು, ಬಾಳೆ, ಸೀಬೆಹಣ್ಣು ಮತ್ತು ಪಪ್ಪಾಯಿ ನಾಟಿ ಮಾಡಲು ಆಸಕ್ತಿ ಹೊಂದಿರುವ ರೈತರಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಪ್ರಾಶಸ್ತ್ಯದ ಆದಹರದ ಮೇಲೆ ಅರ್ಜಿಗಳಿಗೆ ಯೋಜನೆಯ ಲಾಭವನ್ನು ನೀಡಲಾಗುವುದು ಎನ್ನಲಾಗಿದೆ.
ಶೀಘ್ರ ತೋಟಗಾಗಿಕೆ ಮಿಷನ್ ಅಡಿಯಲ್ಲಿ ನವಾದಾ ಜಿಲ್ಲೆಯಲ್ಲಿ 30 ಹೆಕ್ಟೇರ್ನಲ್ಲಿ ಮಾವಿನ ತೋಟವನ್ನು ಸ್ಥಾಪಿಸಲು ಗುರಿ ನಿಗದಿಪಡಿಸಲಾಗಿದೆ. ಒಬ್ಬ ರೈತ ಕನಿಷ್ಠ 8 ಕಟ್ಟಾಗಳನ್ನು ಗರಿಷ್ಠ ಒಂದು ಹೆಕ್ಟೇರ್ನಲ್ಲಿ ನೆಡಬಹುದು. ಜಿಲ್ಲೆಯಲ್ಲಿ ಗರಿಷ್ಠ 80 ಹೆಕ್ಟೇರ್ ಪ್ರದೇಶದಲ್ಲಿ ಬಾಳೆತೋಟ ನೆಡುವ ಗುರಿ ನಿಗದಿಪಡಿಸಲಾಗಿದ್ದು, 5 ಹೆಕ್ಟೇರ್ನಲ್ಲಿ ಸೀಬೆಹಣ್ಣು ಮತ್ತು 10 ಹೆಕ್ಟೇರ್ನಲ್ಲಿ ಪಪ್ಪಾಯಿ ತೋಟಗಾರಿಕೆಗೆ ಸಹಾಯಧನ ನೀಡಲಾಗುವುದು ಎನ್ನಲಾಗಿದೆ.
ಪಪ್ಪಾಯಿ ತೋಟಗಾರಿಕೆಗೆ 75% ಷರತ್ತುಬದ್ಧ ಅನುದಾನವನ್ನು ನೀಡಲಾಗುವುದು ಮತ್ತು ಇತರ ಮೂರು ಹಣ್ಣುಗಳ ತೋಟಗಾರಿಕೆಗೆ 90% ಸಹಾಯಧನನೀಡಲಾಗುವುದು. ಮೊದಲ ವರ್ಷದ ನಂತರ 80 ರಿಂದ 90 ರಷ್ಟು ಸಸ್ಯಗಳು ಬದುಕಬೇಕು ಎಂಬ ಷರತ್ತು ಕೂಡ ವಿಧಿಸಲಾಗಿದೆ. ಆಗ ಮಾತ್ರ ರೈತರ ನಾಮನಿರ್ದೇಶಿತ ಖಾತೆಗೆ ಮುಂದಿನ ಕಂತು ಸಹಾಯಧನ ಬಿಡುಗಡೆಯಾಗಲಿದೆ.
ಪ್ರತಿ ಹೆಕ್ಟೇರ್ ಬಾಳೆ ತೋಟಕ್ಕೆ 1.25 ಲಕ್ಷ ರೂ., ಮಾವಿನ ತೋಟಕ್ಕೆ 60,000 ರೂ., ಸೀಬೆಹಣ್ಣಿನ ತೋಟಕ್ಕೆ 60,000 ರೂ. ಮತ್ತು ಪಪ್ಪಾಯಿ ತೋಟದ ಘಟಕ ವೆಚ್ಚಕ್ಕೆ 60,000 ರೂ.ಗೆ ನಿಗದಿತ ಸಹಾಯಧನ ನೀಡಲಾಗುವುದು ಎನ್ನಲಾಗಿದೆ.
ಹೂವು ಮತ್ತು ಮೆಂತೆ ಕೃಷಿಗೆ ಶೇ.50 ಸಹಾಯಧನ
ಹೂವು ಮತ್ತು ಮೆಂತೆ ಬೆಳೆಯುವ ರೈತರಿಗೆ ಬಿಹಾರ ಸರ್ಕಾರವೂ ಸಹಾಯಧನ ನೀಡಲಿದೆ. ಪ್ರತಿ ಹೆಕ್ಟೇರ್ ಹೂವಿನ ಯೂನಿಟ್ ಬೆಲೆ 56,000 ರೂ., ಮೆಂತೆಗೆ 40,000 ರೂ. ನೀಡಲಾಗುವುದು ಎನ್ನಲಾಗಿದೆ. ಈ ಎರಡೂ ತೋಟಗಾರಿಕೆ ಬೆಳೆಗಳ ಕೃಷಿಗೆ ಶೇ.50ರಷ್ಟು ಸಹಾಯಧನದ ಲಾಭವನ್ನು ಆಯ್ದ ರೈತರಿಗೆ ನೀಡಲಾಗುವುದು. ಕೃಷಿ ಮಾಡಲು ಇಚ್ಛಿಸುವ ರೈತರು ಈ ಯೋಜನೆಯ ಲಾಭ ಪಡೆಯಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ-
ಅರ್ಜಿಗೆ ಈ ಅಗತ್ಯ ದಾಖಲೆಗಳನ್ನು ನೀಡಬೇಕು
ತೋಟಗಾರಿಕೆ ಇಲಾಖೆಯ www.horticulture.bihar.gov.in ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ತಮ್ಮ ಜಮೀನಿನಲ್ಲಿ ತೋಟಗಾರಿಕೆ ಬಯಸುವ ರೈತರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಇತ್ತೀಚಿನ ಜಮೀನಿನ ರಸೀದಿ, ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ ಮತ್ತು ಬ್ಯಾಂಕ್ ಪಾಸ್ಬುಕ್ನ ವಿವರಗಳನ್ನು ನೀಡಬೇಕು.
ಇದನ್ನೂ ಓದಿ-
ಮಾವು, ಬಾಳೆ ಮತ್ತು ಸೀಬೆಹಣ್ಣಿನ ತೋಟಕಾರಿಕೆಯ ಪ್ರಯೋಜನಗಳನ್ನು ತೆಗೆದುಕೊಳ್ಳುವ ಬಗೆಗಿನ ಮಾಹಿತಿಯು ಇಲಾಖೆಯ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಜಿಲ್ಲಾ ತೋಟಗಾರಿಕೆ ಕಚೇರಿಯಲ್ಲಿರುವ ಸಹಾಯಕ ನಿರ್ದೇಶನಾಲಯದಿಂದಲೂ ಮಾಹಿತಿಯನ್ನು ಪಡೆಯಬಹುದು.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.