Anil Ambani wife Tina Ambani : ರಿಲಯನ್ಸ್‌ಗೆ ಅಡಿಪಾಯ ಹಾಕಿದ್ದು ಧೀರೂಭಾಯಿ ಅಂಬಾನಿ.ಮುಖೇಶ್ ಅಂಬಾನಿ 1981ರಲ್ಲಿ ಮತ್ತು ಅನಿಲ್ ಅಂಬಾನಿ 1983 ರಲ್ಲಿ ರಿಲಯನ್ಸ್ ಸೇರಿದರು.ಜುಲೈ 2022ರಲ್ಲಿ ಧೀರೂಭಾಯಿ ಅಂಬಾನಿ ಅವರ ಮರಣದ ನಂತರ,ಮುಖೇಶ್ ಅಂಬಾನಿ ಅವರನ್ನು ರಿಲಯನ್ಸ್ ಗ್ರೂಪ್‌ನ ಅಧ್ಯಕ್ಷರನ್ನಾಗಿ ಮಾಡಲಾಯಿತು.ಹಾಗಾಗಿ ಅನಿಲ್ ಅಂಬಾನಿ ವ್ಯವಸ್ಥಾಪಕ ನಿರ್ದೇಶಕರಾದರು.ಕೆಲವೇ ವರ್ಷಗಳಲ್ಲಿ,ಇಬ್ಬರು ಸಹೋದರರ ನಡುವೆ ಮನಸ್ತಾಪ ಪ್ರಾರಂಭವಾಯಿತು. ಮುಖೇಶ್ ಮತ್ತು ಅನಿಲ್ ಅಂಬಾನಿ ರಿಲಯನ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡ ಸಮಯದಲ್ಲಿ,ಇಬ್ಬರು ಸಹೋದರರ ಜಂಟಿ ನಿವ್ವಳ ಮೌಲ್ಯವು 2.8 ಬಿಲಿಯನ್ ಡಾಲರ್ ಆಗಿತ್ತು.2004ರಲ್ಲಿ 6 ಬಿಲಿಯನ್ ಡಾಲರ್ ಮತ್ತು 2005 ರಲ್ಲಿ 7 ಬಿಲಿಯನ್ ಡಾಲರ್ ತಲುಪಿತು.2005ರಲ್ಲಿ,ರಿಲಯನ್ಸ್ ವ್ಯವಹಾರವು ಇಬ್ಬರ ನಡುವೆ ವಿಭಜನೆಯಾಯಿತು.ಆರ್‌ಕಾಮ್, ರಿಲಯನ್ಸ್ ಕ್ಯಾಪಿಟಲ್, ರಿಲಯನ್ಸ್ ಎನರ್ಜಿ, ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್‌ನಂತಹ ಕಂಪನಿಗಳು ಅನಿಲ್ ಅಂಬಾನಿ ಅಡಿಯಲ್ಲಿ ಬಂದವು. ಆದರೆ ಅನಿಲ್ ಅಂಬಾನಿ ತಾವು ಮಾಡಿದ ತಪ್ಪಿನಿಂದ ಸಾಲದ ಸುಳಿಯಲ್ಲಿ ಸಿಲುಕುವಂತಾಯಿತು. 


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ ಅನಿಲ್ ಅಂಬಾನಿ ಪತ್ನಿ ಟೀನಾ ಅಂಬಾನಿ ಅವರ ಆಸ್ತಿಯ  ನಿವ್ವಳ ಮೌಲ್ಯ ಸುಮಾರು 2331 ಕೋಟಿ ರೂಪಾಯಿಗಳು.ಟೀನಾ ಅಂಬಾನಿ ಮುಂಬೈ ಮೂಲದ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ,ಹಾರ್ಮನಿ ಫಾರ್ ಸಿಲ್ವರ್ ಫೌಂಡೇಶನ್ ಮತ್ತು ಹಾರ್ಮನಿ ಆರ್ಟ್ ಫೌಂಡೇಶನ್‌ನ ಅಧ್ಯಕ್ಷರಾಗಿದ್ದಾರೆ.ಇದಲ್ಲದೆ, ಅವರು ಅನೇಕ ಪ್ರತಿಷ್ಠಾನಗಳು ಮತ್ತು ದತ್ತಿಗಳಲ್ಲಿ ಸಕ್ರಿಯರಾಗಿದ್ದಾರೆ.ಮತ್ತೊಂದೆಡೆ,  ಅನಿಲ್ ಅಂಬಾನಿ ಇಂದು ಹಲವು ವ್ಯವಹಾರಗಳಲ್ಲಿ ದಿವಾಳಿಯಾಗಿದ್ದಾರೆ. 


ಇದನ್ನೂ ಓದಿ : Cheque ಹಿಂಭಾಗದಲ್ಲಿ ಯಾವಾಗ ಸಹಿ ಹಾಕಬೇಕು?


ಕಂಪನಿಯ ಮಾರಾಟ : 
ಹಿಂದುಜಾ ಗ್ರೂಪ್‌ನ ಇಂಡಸ್‌ಇಂಡ್ ಇಂಟರ್‌ನ್ಯಾಶನಲ್ ಹೋಲ್ಡಿಂಗ್ಸ್ (ಐಐಎಚ್‌ಎಲ್) ಸಾಲದ ಸುಳಿಯಲ್ಲಿ ಸಿಲುಕಿರುವ ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಅವರ ಕಂಪನಿ ರಿಲಯನ್ಸ್ ಕ್ಯಾಪಿಟಲ್‌ಗೆ ಅತಿ ಹೆಚ್ಚು ಬಿಡ್ ಮಾಡಿದೆ. ಬ್ಯಾಂಕ್‌ನಲ್ಲಿನ ತನ್ನ ಪಾಲನ್ನು 15% ರಿಂದ 26% ಕ್ಕೆ ಹೆಚ್ಚಿಸಲು ಕಂಪನಿಯು ಅಗತ್ಯ ನಿಯಂತ್ರಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿದೆ ಎಂದು IIHL ಅಧ್ಯಕ್ಷ ಅಶೋಕ್ ಹಿಂದುಜಾ ಹೇಳಿದ್ದಾರೆ. ಈ ಪಾಲುದಾರಿಕೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುವುದು.ವಿಮಾ ನಿಯಂತ್ರಕ ಐಆರ್‌ಡಿಎ ಒಪ್ಪಂದವನ್ನು ಅನುಮೋದಿಸಿದ ನಂತರ, ಬಾಕಿ ಮೊತ್ತವನ್ನು ಬ್ಯಾಂಕ್‌ಗಳಿಗೆ ಪಾವತಿಸಲಾಗುವುದು ಎಂದು ಕಂಪನಿ ಹೇಳಿದೆ.


ಇದನ್ನೂ ಓದಿ : ಒಂದು ಕಾಲದಲ್ಲಿ ವೈಟರ್ ಕೆಲಸ ಮಾಡುತ್ತಿದ್ದ ಈತ ಇಂದು ಅಂಬಾನಿ, ಅದಾನಿಗಿಂತಲೂ ಸಿರಿವಂತ!ಆಸ್ತಿ ವಿವರ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.