ಬೆಂಗಳೂರು: ನೀವು ವಿಶ್ವಾಸಾರ್ಹ ದೀರ್ಘಾವಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾದ  ಸಾರ್ವಜನಿಕ ಭವಿಷ್ಯ ನಿಧಿ-ಪಿಪಿಎಫ್ ಅತ್ಯುತ್ತಮ ಯೋಜನೆ ಆಗಿದೆ. ಒಂದೊಮ್ಮೆ ಈಗಾಗಲೇ ನೀವು ಪಿಪಿಎಫ್‌ನಲ್ಲಿ ಹಣ ಹೂಡಿಕೆ ಮಾಡಿದ್ದರೆ ಅಥವಾ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ನಿಮಗಾಗಿ ಇಲ್ಲಿದೆ ಬಹುಮುಖ್ಯ ಮಾಹಿತಿ.


COMMERCIAL BREAK
SCROLL TO CONTINUE READING

ಈ ಯೋಜನೆಯಲ್ಲಿ ವಾರ್ಷಿಕ ಎಷ್ಟು ಹೂಡಿಕೆ ಮಾಡಬಹುದು? 
ಸಾರ್ವಜನಿಕ ಭವಿಷ್ಯ ನಿಧಿ-ಪಿಪಿಎಫ್ ಯೋಜನೆಯಲ್ಲಿ ಜನರು ವಾರ್ಷಿಕವಾಗಿ ಮಿನಿಮಂ 500ರೂ.ಗಳಿಂದ ಗರಿಷ್ಠ 1,50,000ರೂ.ಗಳವರೆಗೆ ಹೂಡಿಕೆ ಮಾಡಬಹುದು. ಮಾತ್ರವಾಲ್ಲ್, ಈ ಹೂಡಿಕೆಯ ಮೇಲೆ ನೀವು ಫಾರ್ಮ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದಾಗಿದೆ. 


ಬಡ್ಡಿದರ ಎಷ್ಟಿದೆ?
ಪ್ರಸ್ತುತ ಕೇಂದ್ರ ಸರ್ಕಾರವು ಪಿಪಿಎಫ್‌ನಲ್ಲಿ ವಾರ್ಷಿಕವಾಗಿ 7.1 ಪ್ರತಿಶತದಷ್ಟು ಬಡ್ಡಿಯನ್ನು ನೀಡುತ್ತಿದೆ. 


ಇದನ್ನೂ ಓದಿ- 12,000 ದಷ್ಟು ಹೆಚ್ಚಾಗುವುದು ಸರ್ಕಾರಿ ನೌಕರರ ವೇತನ ! 24 ಗಂಟೆಯಲ್ಲಿ ನಿರ್ಧಾರ ಪ್ರಕಟ


ಮೆಚ್ಯೂರಿಟಿ ಅವಧಿ:
ಮೊದಲೇ ತಿಳಿಸಿದಂತೆ ಪಿಪಿಎಫ್ ದೀರ್ಘಾವಧಿ ಹೂಡಿಕೆ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಗ್ರಾಹಕರು ಕನಿಷ್ಠ 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಅರ್ಥಾತ್ ನೀವು ಪಿಪಿಎಫ್‌ನಲ್ಲಿ ಒಮ್ಮೆ ಹೂಡಿಕೆ ಮಾಡಿದ ಮೇಲೆ ಆ ಹಣವು 15 ವರ್ಷಗಳ ವರೆಗೆ ಲಾಕ್ ಇನ್  ಆಗಿರಲಿದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. 


ಇದನ್ನೂ ಓದಿ- ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಪಡಿತರ ತೂಕದಲ್ಲಿನ ವಂಚನೆಗೆ ಕಡಿವಾಣ ಹಾಕಲು ಸರ್ಕಾರದ ನ್ಯೂ ಪ್ಲಾನ್


ಪಿಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೊದಲು ಈ ಅಂಶಗಳ ಬಗ್ಗೆ ಗಮನಹರಿಸಿ:
>> ಪಿಪಿಎಫ್ ದೀರ್ಘಾವಧಿಯ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಉತ್ತಮ ಆಯ್ಕೆಯೇ ಹೊರತು ಅಲ್ಪಾವಧಿ ಹೂಡಿಕೆಗೆ ಅಲ್ಲ. 
>> ಈ ಯೋಜನೆಯಲ್ಲಿ ಹಣ ಹೂಡುವ ಮುನ್ನ ನೀವು 15 ವರ್ಷಗಳವರೆಗೆ ಹೂಡಿಕೆ ಮಾಡಲು ಸಿದ್ಧರಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನೀವೇ ನಿರ್ಧರಿಸಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.