ಬೆಂಗಳೂರು : ಕಾಲಕಾಲಕ್ಕೆ, ಸರ್ಕಾರವು ಜನರ ಅನುಕೂಲಕ್ಕಾಗಿ ಕೆಲವೊಂದು ಯೋಜನೆಗಳನ್ನು ಜಾರಿ ಮಾಡುತ್ತಲೇ ಇರುತ್ತದೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಹಣ ಸುರಕ್ಷಿತವಾಗಿರುವುದು ಮಾತ್ರವಲ್ಲ, ಅತ್ಯುತ್ತಮ ಆದಾಯ ಪಡೆಯುವುದು ಕೂಡಾ ಸಾಧ್ಯವಾಗುತ್ತದೆ. ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಚಿಂತೆಯಿಂದ ಸಂಪೂರ್ಣ ಮುಕ್ತಿ ಹೊಂದಲು ಸರ್ಕಾರ ಹೆಣ್ಣು ಮಕ್ಕಳಿಗಾಗಿ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಯ ಹೆಸರು ಸುಕನ್ಯಾ ಸಮೃದ್ಧಿ ಯೋಜನೆ. ಈ ಯೋಜನೆಯಲ್ಲಿ ಕೇವಲ 250 ರೂಪಾಯಿಗಳ ಹೂಡಿಕೆಯಲ್ಲಿ 65 ಲಕ್ಷ ರೂಪಾಯಿಗಳನ್ನು ಪಡೆಯಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಎಂದರೇನು? :
ಸುಕನ್ಯಾ ಸಮೃದ್ಧಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸಬಹುದು. ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಖಾತೆಯನ್ನು ತೆರೆಯುವಾಗ, ನಿಮ್ಮ ಮಗಳ ಹೆಸರಿನಲ್ಲಿ ಹಣವನ್ನು ಠೇವಣಿ ಮಾಡಬಹುದು.
ಇದನ್ನೂ ಓದಿ : ಹಳೆ ಪಿಂಚಣಿ ಯೋಜನೆ ಬಗ್ಗೆ ಬಿಗ್ ನ್ಯೂಸ್! ಕೇಂದ್ರ ಸರ್ಕಾರ ನೀಡಿದ ಮಹತ್ವದ ಮಾಹಿತಿ !
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಯಾರು ಅರ್ಜಿ ಸಲ್ಲಿಸಬಹುದು ? :
10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಖಾತೆಯನ್ನು ಆಕೆಯ ಪೋಷಕರು ತೆರೆಯಬಹುದು. ಇದರಲ್ಲಿ ಕೇವಲ 250 ರೂಪಾಯಿ ಹೂಡಿಕೆಯಲ್ಲಿ ಖಾತೆ ತೆರೆಯಬಹುದು. ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಇದರಲ್ಲಿ ನೀವು ಶೇಕಡಾ 7.6 ರ ದರದಲ್ಲಿ ಬಡ್ಡಿಯನ್ನು ಪಡೆಯುತ್ತೀರಿ. ಹೆಣ್ಣು ಮಗುವಿನ ಹೆಸರಿನಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಒಂದು ಮನೆಯಲ್ಲಿ 2 ಹೆಣ್ಣು ಮಕ್ಕಳ ಖಾತೆಗಳನ್ನು ಮಾತ್ರ ತೆರೆಯಬಹುದು. ಅವಳಿ/ತ್ರಿವಳಿ ಹೆಣ್ಣು ಮಗುವಿದ್ದಲ್ಲಿ 2 ಕ್ಕಿಂತ ಹೆಚ್ಚು ಖಾತೆಗಳನ್ನು ತೆರೆಯಬಹುದು.
ಎಷ್ಟು ಬಡ್ಡಿ ಪಡೆಯಲಾಗುತ್ತಿದೆ ?:
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪಡೆಯುವ ಬಡ್ಡಿಯನ್ನು ಸರ್ಕಾರ ನಿರ್ಧರಿಸುತ್ತದೆ. ಇದರಲ್ಲಿ ಶೇಕಡಾ 7.6 ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ, ಗರಿಷ್ಠ 1.50 ಲಕ್ಷ ರೂ.ವರೆಗೆ ಠೇವಣಿ ಮಾಡಬಹುದು. ಮಗಳು 18 ವರ್ಷ ಪೂರೈಸಿದ ನಂತರ ಅಥವಾ 10ನೇ ತರಗತಿ ತೇರ್ಗಡೆಯಾದ ನಂತರವೇ ಈ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಇದರಲ್ಲಿ ಆದಾಯ ತೆರಿಗೆಯಲ್ಲೂ ವಿನಾಯಿತಿ ಸಿಗುತ್ತದೆ.
ಇದನ್ನೂ ಓದಿ : ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ ! 2,300 ರೂ.ಗಳಷ್ಟು ಅಗ್ಗವಾದ ಚಿನ್ನ !
65 ಲಕ್ಷ ರೂಪಾಯಿಗಳನ್ನು ಹೇಗೆ ಪಡೆಯುವುದು ? :
ಈ ಯೋಜನೆಯಲ್ಲಿ ನೀವು ಪ್ರತಿದಿನ 250 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಒಂದು ತಿಂಗಳಲ್ಲಿ 12,500 ರೂಪಾಯಿಗಳನ್ನು ಮತ್ತು ಒಂದು ವರ್ಷದಲ್ಲಿ 1.50 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. 15 ವರ್ಷಕ್ಕೆ ನೀವು ಮಾಡುವ ಹೂಡಿಕೆ 22.5 ಲಕ್ಷವಾಗಿರುತ್ತದೆ. ಮೆಚ್ಯೂರಿಟಿಯ ಅಂದರೆ 21ನೇ ವಯಸ್ಸಿನಲ್ಲಿ ನಿಮಗೆ 65 ಲಕ್ಷ ರೂಪಾಯಿ ಸಿಗುತ್ತದೆ. ಇದರಲ್ಲಿ ಸುಮಾರು 41.15 ಲಕ್ಷ ರೂಪಾಯಿ ಬಡ್ಡಿ ಸಿಗಲಿದೆ.
ಸುಕನ್ಯಾ ಸಮೃದ್ಧಿ ಯೋಜನೆಗೆ ಬೇಕಾಗಿರುವ ದಾಖಲೆಗಳು :
1. ತಾಯಿ ಮತ್ತು ತಂದೆಯ ಗುರುತಿನ ಚೀಟಿ
2. ಮಗಳ ಆಧಾರ್ ಕಾರ್ಡ್
3. ಮಗಳ ಹೆಸರಿನಲ್ಲಿ ತೆರೆಯಲಾದ ಬ್ಯಾಂಕ್ ಖಾತೆಯ ಪಾಸ್‌ಬುಕ್
4. ಮಗಳ ಪಾಸ್‌ಪೋರ್ಟ್ ಅಳತೆಯ ಫೋಟೋ
5. ಮೊಬೈಲ್ ಸಂಖ್ಯೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.