Ayushman Card: ಆಯುಷ್ಮಾನ್ ಕಾರ್ಡ್ ಸೌಲಭ್ಯ ಪಡೆಯಲು ನೀವು ಅರ್ಹರೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ...
Ayushman Card: ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು ಆಯುಷ್ಮಾನ್ ಕಾರ್ಡ್ ಅನ್ನು ಪ್ರಾರಂಭಿಸಿದೆ. ಕಾರ್ಡುದಾರರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ.
Ayushman Card: ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ (Ayushman Bharat Card) ಆರಂಭಿಸಿದೆ. ಆಯುಷ್ಮಾನ್ ಕಾರ್ಡ್ ಹೊಂದಿರುವವರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ತುಂಬಾ ಸುಲಭ. ಈ ಯೋಜನೆಯಡಿ ಅರ್ಹತೆಯನ್ನು ಪರಿಶೀಲಿಸುವ ಮಾರ್ಗವನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದಿಂದಲೇ ಹೇಳಲಾಗಿದೆ. ಆದರೆ, ಇದರ ದುರ್ಬಳಕೆಯ ದೂರುಗಳೂ ಮುನ್ನೆಲೆಗೆ ಬಂದಿವೆ. ಬೇರೆಯವರ ಹೆಸರಿನ ಕಾರ್ಡ್ ನೀಡಿ ಅನೇಕರು ಸೌಲಭ್ಯಗಳ ಲಾಭ ಪಡೆಯುತ್ತಿದ್ದಾರೆ. ನಿಮಗೂ ಈ ರೀತಿಯ ವಂಚನೆ ನಡೆದಿದ್ದರೆ ಅದರ ಬಗ್ಗೆ ದೂರು ದಾಖಲಿಸಬಹುದು.
ಈ ರೀತಿ ದೂರು ದಾಖಲಿಸಿ:
ನಿಮ್ಮೊಂದಿಗೆ ಅಥವಾ ನಿಮ್ಮ ಪರಿಚಯಸ್ಥರಲ್ಲಿ ಇಂತಹ ವಂಚನೆ ನಡೆದಿದ್ದರೆ, ನೀವು ಸರ್ಕಾರದಿಂದ ನೀಡಲಾದ ಈ ಟೋಲ್ ಫ್ರೀ ಸಂಖ್ಯೆ 180018004444 ಗೆ ಕರೆ ಮಾಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು. ಆದರೆ ಇದನ್ನು ಮಾಡಲು ನೀವು ಪ್ರಮಾಣೀಕೃತ ದಾಖಲೆಗಳನ್ನು ಹೊಂದಿರಬೇಕು.
ಇದನ್ನೂ ಓದಿ- 69 ವರ್ಷಗಳ ಮತ್ತೆ ಟಾಟಾ ತೆಕ್ಕೆಗೆ ಏರ್ ಇಂಡಿಯಾ, ಇಂದು ಪೂರ್ಣಗೊಳ್ಳಲಿದೆ ಹಸ್ತಾಂತರ ಪ್ರಕ್ರಿಯೆ
ಆಯುಷ್ಮಾನ್ ಕಾರ್ಡ್ ಪಡೆಯಲು ನೀವು ಅರ್ಹರೇ? ಈ ರೀತಿ ಪರಿಶೀಲಿಸಿ:
ಆಯುಷ್ಮಾನ್ ಕಾರ್ಡ್ (Ayushman Card) ಪಡೆಯಲು ನೀವು ಅರ್ಹರೇ ಎಂಬುದನ್ನು ನೀವು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ.
1. ಮೊದಲನೆಯದಾಗಿ PM Jan Arogya mera.pmjay.gov.in ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
2. ಇಲ್ಲಿ ನೀವು ಲಾಗಿನ್ ಮಾಡುವ ಆಯ್ಕೆಯನ್ನು ಪಡೆಯುತ್ತೀರಿ. ನಿಮ್ಮ ಮೊಬೈಲ್ ಸಂಖ್ಯೆಯಂತಹ ಸಾಮಾನ್ಯ ಮಾಹಿತಿಗಾಗಿ ನಿಮ್ಮನ್ನು ಕೇಳಲಾಗುತ್ತದೆ. ಅದನ್ನು ಭರ್ತಿ ಮಾಡಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
3. ಇದರ ನಂತರ ನೀವು ನಿಮ್ಮ ಪ್ರಾಂತ್ಯ ಮತ್ತು ಜಿಲ್ಲೆಯನ್ನು ನಮೂದಿಸಬೇಕು.
4. ನಂತರ ಕೆಲವು ದಾಖಲೆಗಳು ಮತ್ತು ID ಸಂಖ್ಯೆಯನ್ನು ಆಯ್ಕೆ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಹಾಗೆ ಮಾಡಿದ ನಂತರ, ಸರ್ಚ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ದಾಖಲೆಗಳ ಪರಿಶೀಲನೆ ಬಳಿಕ ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಆಯುಷ್ಮಾನ್ ಕಾರ್ಡ್ ಅನ್ನು PM ಆರೋಗ್ಯ ಯೋಜನೆಯಿಂದ ನೀಡಲಾಗುತ್ತದೆ.
ಇದನ್ನೂ ಓದಿ- Union Budget 2022: ಈ ಹಣಕಾಸು ಸಚಿವರ ಹೆಸರಿನಲ್ಲಿದೆ ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ದಾಖಲೆ ..!
ಯೋಜನೆಯಲ್ಲಿ ಏನಿದೆ ವಿಶೇಷ ?
1. ಈ ಯೋಜನೆಯನ್ನು ಕೇಂದ್ರ ಸರ್ಕಾರ (Central Govt) ನಿರ್ವಹಿಸುತ್ತದೆ, ಅದರ ಎಲ್ಲಾ ಹಣವನ್ನು ಸರ್ಕಾರವೇ ನೀಡುತ್ತದೆ.
2. ಈ ಯೋಜನೆಯ ಅಡಿಯಲ್ಲಿ, ನೀವು ಆಯುಷ್ಮಾನ್ ಯೋಜನೆಯಲ್ಲಿ ಪಟ್ಟಿ ಮಾಡಲಾದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಲಾಭವನ್ನು ಪಡೆಯಬಹುದು.
3. ಈ ಯೋಜನೆಯಡಿ, 5 ಲಕ್ಷ ರೂ.ವರೆಗಿನ ಚಿಕಿತ್ಸೆಯ ಸೌಲಭ್ಯವನ್ನು ಉಚಿತವಾಗಿ ನೀಡಲಾಗುತ್ತದೆ.
4. ಕುಟುಂಬವು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ, ಈ ಯೋಜನೆಯ ಲಾಭವನ್ನು ಸಮಾನವಾಗಿ ನೀಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.