ನವದೆಹಲಿ : ಕೇಂದ್ರ ಸರ್ಕಾರ ಇಂದು ಏರ್ ಇಂಡಿಯಾವನ್ನು (Air India) ಟಾಟಾ ಗ್ರೂಪ್ಗೆ ಹಸ್ತಾಂತರಿಸುವ ಎಲ್ಲಾ ಸಾಧ್ಯತೆಗಳಿವೆ. ಸುಮಾರು 69 ವರ್ಷಗಳ ಹಿಂದೆ ಭಾರತ ಸರ್ಕಾರವು ವಿಮಾನಯಾನವನ್ನು ಸಮೂಹದಿಂದ ತನ್ನ ಅಧೀನಕ್ಕೆ ತೆಗೆದುಕೊಂಡಿತ್ತು. ಇದೀಗ ಮತ್ತೆ ಏರ ಇಂಡಿಯಾವನ್ನು ಟಾಟಾ ಸಮೂಹಕ್ಕೆ (Tata Group) ಹಸ್ತಾಂತರಿಸಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್ 8 ರಂದು, ನಡೆದ ಹರಾಜು ಪ್ರಕ್ರಿಯೆಯಲ್ಲಿ, ಕೇಂದ್ರ ಸರ್ಕಾರ ಏರ್ ಇಂಡಿಯಾವನ್ನು ಟೇಲ್ಸ್ ಪ್ರೈವೇಟ್ ಲಿಮಿಟೆಡ್ಗೆ (Tales private limited) 18,000 ಕೋಟಿ ರೂ.ಗೆ ಮಾರಾಟ ಮಾಡಿತ್ತು. ಇದು ಟಾಟಾ ಗ್ರೂಪ್ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಹಸ್ತಾಂತರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ವಿಮಾನಯಾನವನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೈಲಟ್ ಅಸೋಸಿಯೇಷನ್ ಪ್ರತಿಭಟನೆ :
ಈ ನಡುವೆ, ಎರಡು ಏರ್ಲೈನ್ ಪೈಲಟ್ ಯೂನಿಯನ್ಗಳಾದ ಇಂಡಿಯನ್ ಪೈಲಟ್ಸ್ ಗಿಲ್ಡ್ (IPG) ಮತ್ತು ಇಂಡಿಯನ್ ಕಮರ್ಷಿಯಲ್ ಪೈಲಟ್ಸ್ ಅಸೋಸಿಯೇಷನ್ (ICPA), ಏರ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿಕ್ರಮ್ ದೇವ್ ದತ್ (Vikram Dev Dutt) ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿವೆ. ಪೈಲಟ್ಗಳ ಬಾಕಿ ಮೊತ್ತವನ್ನು ತಕ್ಷಣವೇ ಪಾವತಿಸುವಂತೆ ಒತ್ತಾಯಿಸಿವೆ. ಇದಲ್ಲದೇ, ವಿಮಾನ ಹಾರಾಟಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಪೈಲಟ್ಗಳ ಬಾಡಿ ಮಾಸ್ ಇಂಡೆಕ್ಸ್ (BMI) ಅಳೆಯುವ ಕಂಪನಿಯ ಆದೇಶವನ್ನು ಇತರ ಎರಡು ಒಕ್ಕೂಟಗಳು ವಿರೋಧಿಸಿವೆ. ಏರ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್ (AIEU) ಮತ್ತು ಆಲ್ ಇಂಡಿಯಾ ಕ್ಯಾಬಿನ್ ಕ್ರೂ ಅಸೋಸಿಯೇಷನ್ (ಎಐಸಿಸಿಎ) ಈ ಆದೇಶವನ್ನು ವಿರೋಧಿಸಿ ದತ್ ಅವರಿಗೆ ಪತ್ರ ಬರೆದಿದೆ. ಇದು ಅಮಾನವೀಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅದು ಹೇಳಿದೆ.
ಇದನ್ನೂ ಓದಿ : Union Budget 2022: ಈ ಹಣಕಾಸು ಸಚಿವರ ಹೆಸರಿನಲ್ಲಿದೆ ನಿಮಿಷಗಳಲ್ಲಿ ಬಜೆಟ್ ಮಂಡಿಸಿದ ದಾಖಲೆ ..!
ಇದು ಟಾಟಾ ಸಮೂಹದ ಮೂರನೇ ವಿಮಾನಯಾನ ಸಂಸ್ಥೆಯಾಗಲಿದೆ :
ಕಳೆದ ವರ್ಷ ಅಕ್ಟೋಬರ್ 8 ರಂದು, ಏರ್ ಇಂಡಿಯಾದ (Air India) ಮಾರಾಟದ ಘೋಷಣೆಯ ಮೂರು ದಿನಗಳ ನಂತರ, ಟಾಟಾ ಸಮೂಹಕ್ಕೆ LOI ಜಾರಿ ಮಾಡಲಾಗಿದೆ. ಅದರಲ್ಲಿ ಸರ್ಕಾರವು ತನ್ನ 100 ಪ್ರತಿಶತ ಪಾಲನ್ನು ಮಾರಾಟ ಮಾಡಿರುವುದನ್ನು ದೃಢಪಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ (Central government) ಅಕ್ಟೋಬರ್ 25ರಂದು ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದದ ಅಡಿಯಲ್ಲಿ, ಟಾಟಾ ಸಮೂಹಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ ಮತ್ತು ಗ್ರೌಂಡ್ ಹ್ಯಾಂಡ್ಲಿಂಗ್ ಆರ್ಮ್ ಏರ್ ಇಂಡಿಯಾ ಎಸ್ಎಟಿಎಸ್ನಲ್ಲಿ ಶೇಕಡಾ 50 ರಷ್ಟು ಪಾಲನ್ನು ನೀಡಲಾಗುವುದು. 2003-04ರ ನಂತರ ಕೇಂದ್ರ ಸರ್ಕಾರ ಮಾಡುತ್ತಿರುವ ಮೊದಲ ಖಾಸಗೀಕರಣ ಇದಾಗಿದೆ. ಏರ್ ಇಂಡಿಯಾ, ಟಾಟಾ ಸಮೂಹದ ಮೂರನೇ ಏರ್ಲೈನ್ ಬ್ರ್ಯಾಂಡ್ ಆಗಿರುತ್ತದೆ. ಈಗಾಗಲೇ ಕಂಪನಿಯು ಏರ್ ಏಷ್ಯಾ ಇಂಡಿಯಾ (Air Asia India) ಮತ್ತು ವಿಸ್ತಾರಾದಲ್ಲಿ ಪಾಲನ್ನು ಹೊಂದಿದೆ.
ಇದನ್ನೂ ಓದಿ : ನಿಮ್ಮ ಬಳಿ 2 ರೂಪಾಯಿಯ ಈ ನಾಣ್ಯ ಇದ್ದರೆ ಕುಳಿತಲ್ಲೇ ಗಳಿಸಬಹುದು 5 ಲಕ್ಷ ರೂಪಾಯಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.