Gold Rate: ಹಬ್ಬ ಸಮೀಪಿಸುತ್ತಿದ್ದಂತೆ ಇಳಿಮುಖವಾಗಿದ್ದ ಬಂಗಾರದ ಬೆಲೆ! 10 ಗ್ರಾಂ ಚಿನ್ನದ ದರ ಇಂದು ಎಷ್ಟಿದೆ ಗೊತ್ತಾ?
10 gram gold Price today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿನ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,840 ರೂ. ಇತ್ತು. ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ, ಅದೇ ರೀತಿ ಮುಂದುವರೆದಿದೆ.
10 gram gold Price today: ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಇಳಿಮುಖವಾಗುತ್ತಿದೆ. ದೇಶದಲ್ಲಿ ಬಂಗಾರದ ದರ 6 ಸಾವಿರ ಸಮೀಪಕ್ಕೆ ಬಂದಿದ್ದರೂ ಸಹ, ರೂಪಾಯಿ ವ್ಯತ್ಯಾಸ ಕಾಣುತ್ತಿತ್ತು, ಇನ್ನೊಂದೆಡೆ ದೇಶದ ಪ್ರಮುಖ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿ ಬರುತ್ತಿದೆ. ಈ ಸಂದರ್ಭದಲ್ಲಿ ಬಂಗಾರದ ಬೆಲೆ ಇಳಿಕೆ ಕಂಡಿರುವುದು ಜನತೆಗೆ ಸಂತಸ ನೀಡಿತ್ತು.
ಇಂದು ಅಂದರೆ ಸೆಪ್ಟೆಂಬರ್ 13ರಂದು 10 ಗ್ರಾಂ ಚಿನ್ನದ ಬೆಲೆ ವಿವಿಧ ರಾಜ್ಯಗಳಲ್ಲಿ ಯಾವ ರೀತಿ ಇದೆ ಎಂದು ತಿಳಿಯೋಣ.
ಇದನ್ನೂ ಓದಿ: ಈ ರಾಶಿಯವರಿಗೆ ಗಣೇಶನ ಅನುಗ್ರಹ: ಇಂದು ಈಡೇರಲಿದೆ ಬಹುದಿನದ ಕನಸು, ಜೇಬು ತುಂಬಾ ದುಡ್ಡೋ ದುಡ್ದು
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿನ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 54,840 ರೂ. ಇತ್ತು. ಇಂದು ಸ್ಥಿರತೆ ಕಾಯ್ದುಕೊಂಡ ಚಿನ್ನದ ಬೆಲೆ, ಅದೇ ರೀತಿ ಮುಂದುವರೆದಿದೆ.
ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಈ ವರದಿ ಬಂದಿದೆ. ಇಂದು ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡುಬಂದಿಲ್ಲ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಹೀಗಿವೆ:
ದೆಹಲಿಯಲ್ಲಿ, 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 59,990 ರೂ ಆಗಿದ್ದರೆ, 22 ಕ್ಯಾರೆಟ್ (10 ಗ್ರಾಂ) ರೂ 54,990 ಇದೆ. ಕೋಲ್ಕತ್ತಾದಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ದರ 59,830 ರೂ ಇದ್ದರೆ, 22 ಕ್ಯಾರೆಟ್ (10 ಗ್ರಾಂ) 54,840 ರೂ. ಆಗಿದೆ. ಅದೇ ರೀತಿ ಮುಂಬೈನಲ್ಲಿ 24 ಕ್ಯಾರೆಟ್ (10 ಗ್ರಾಂ) ಚಿನ್ನದ ಬೆಲೆ 59,830 ರೂ.ಗಳಾಗಿದ್ದರೆ, 22 ಕ್ಯಾರೆಟ್ ಚಿನ್ನದ (10 ಗ್ರಾಂ) 54,840 ರೂ. ಇದೆ. ಚೆನ್ನೈನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ (10 ಗ್ರಾಂ) ರೂ 52,285 ಆಗಿದ್ದು, 22 ಕ್ಯಾರೆಟ್ (10 ಗ್ರಾಂ) ರೂ 47,927 ಇದೆ.
ಇದನ್ನೂ ಓದಿ: ಭಾರತದ 5 ವಿಕೆಟ್ ಕಬಳಿಸಿದ 20 ವರ್ಷದ ಸ್ಪಿನ್ನರ್ ದುನಿತ್ ವೆಲ್ಲಲಾಗೆ ಯಾರು ಗೊತ್ತಾ?
ಭಾರತದಲ್ಲಿ ಬೆಳ್ಳಿ ದರ ಇಂದು ರೂ ಕೆಜಿಗೆ 71,100 ರೂ ಆಗಿದ್ದು, ಕಳೆದ 24 ಗಂಟೆಗಳಲ್ಲಿ 200 ರೂಪಾಯಿ ಇಳಿಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.