ನವದೆಹಲಿ: Atal Pension Yojana- ಪ್ರತಿಯೊಬ್ಬರೂ ತಮ್ಮ ವೃದ್ಧಾಪ್ಯವನ್ನು ಸುರಕ್ಷಿತವಾಗಿರಲು ಉತ್ತಮ ಯೋಜನೆಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಾರೆ. ನಿಮ್ಮ ನಿವೃತ್ತಿಯನ್ನು ಸುರಕ್ಷಿತವಾಗಿರಿಸಲು ನೀವು ಸುರಕ್ಷಿತ ಸ್ಥಳದಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ನೀವು ಹಣವನ್ನು ಸರ್ಕಾರದ ಅಟಲ್ ಪಿಂಚಣಿ ಯೋಜನೆ (ಎಪಿವೈ) ನಲ್ಲಿ ಹೂಡಿಕೆ ಮಾಡಬಹುದು. ಅಟಲ್ ಪಿಂಚಣಿ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಯಿತು. ಆ ಸಮಯದಲ್ಲಿ ಇದನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಜನರಿಗೆ ಪ್ರಾರಂಭಿಸಲಾಯಿತು. ಆದರೆ ಈಗ 18 ರಿಂದ 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಪಿಂಚಣಿ ಪಡೆಯಬಹುದು. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಖಾತೆ ಹೊಂದಿರುವವರು ಅದರಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ, ಠೇವಣಿದಾರರು 60 ವರ್ಷಗಳ ನಂತರ ಪಿಂಚಣಿ ಪಡೆಯಲು ಪ್ರಾರಂಭಿಸುತ್ತಾರೆ.


COMMERCIAL BREAK
SCROLL TO CONTINUE READING

ಅಟಲ್ ಪಿಂಚಣಿ ಯೋಜನೆ ಎಂದರೇನು?
ಅಟಲ್ ಪಿಂಚಣಿ ಯೋಜನೆ  (Atal Pension Scheme) ಅಂತಹ ಸರ್ಕಾರಿ ಯೋಜನೆಯಾಗಿದ್ದು, ಇದರಲ್ಲಿ ನೀವು ಮಾಡಿದ ಹೂಡಿಕೆ ನಿಮ್ಮ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ ಮಾಸಿಕ 1,000 ರೂ, 2000 ರೂ, 3000ರೂ., 4000 ರೂ. ಮತ್ತು ಗರಿಷ್ಠ 5,000 ರೂ. ಮಾಸಿಕ ಪಿಂಚಣಿ ಪಡೆಯಬಹುದು. ಇದು ಸುರಕ್ಷಿತ ಹೂಡಿಕೆಯಾಗಿದ್ದು, ಇದರಲ್ಲಿ ನೀವು ನೋಂದಾಯಿಸಲು ಬಯಸಿದರೆ ನೀವು ಉಳಿತಾಯ ಖಾತೆ, ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು.


ಇದನ್ನೂ ಓದಿ- EPFO Alert: ನೌಕರರೇ ಗಮನಿಸಿ, ಪಿಎಫ್ ಖಾತೆಗೆ ಸಂಬಂಧಿಸಿದಂತೆ ಎಂದಿಗೂ ಈ 5 ತಪ್ಪುಗಳನ್ನು ಮಾಡದಿರಿ


ಈ ಯೋಜನೆಯ ಲಾಭಗಳು ಯಾವುವು?
ಈ ಯೋಜನೆಯಡಿ, 18 ರಿಂದ 40 ವರ್ಷ ವಯಸ್ಸಿನ ಜನರು ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಹಲವು ಲಾಭಗಳನ್ನು (Atal Pension Yojana Benefits) ಪಡೆಯಬಹುದು. ಇದರಲ್ಲಿ ನೀವು ನಾಮನಿರ್ದೇಶನ ಮಾಡಬಹುದು. ಇದಕ್ಕಾಗಿ, ಅರ್ಜಿದಾರರು ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ನೀವು ಕೇವಲ ಒಂದು ಅಟಲ್ ಪಿಂಚಣಿ ಖಾತೆಯನ್ನು ಮಾತ್ರ ಹೊಂದಬಹುದು ಎಂಬುದನ್ನು ನೆನಪಿನಲ್ಲಿಡಿ. ಈ ಯೋಜನೆಯಡಿ ನೀವು ಎಷ್ಟು ಬೇಗನೆ ಹೂಡಿಕೆ ಮಾಡಿದರೆ, ಅಷ್ಟು ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ಒಬ್ಬ ವ್ಯಕ್ತಿಯು 18 ನೇ ವಯಸ್ಸಿನಲ್ಲಿ ಅಟಲ್ ಪಿಂಚಣಿ ಯೋಜನೆಗೆ ಸೇರ್ಪಡೆಗೊಂಡರೆ, 60 ವರ್ಷದ ನಂತರ, ಅವನು ಪ್ರತಿ ತಿಂಗಳು 5000 ರೂ.ಗಳ ಮಾಸಿಕ ಪಿಂಚಣಿಗೆ ತಿಂಗಳಿಗೆ ಕೇವಲ 210 ರೂ. ಹೂಡಿಕೆ ಮಾಡಬೇಕಾಗುತ್ತದೆ. ಈ ರೀತಿಯಾಗಿ, ಈ ಯೋಜನೆ ಉತ್ತಮ ಲಾಭದ ಯೋಜನೆಯಾಗಿದೆ.


5000 ರೂ. ಮಾಸಿಕ ಪಿಂಚಣಿ ಪಡೆಯುವುದು ಹೇಗೆ?
ಅಂದರೆ, ಈ ಯೋಜನೆಯಲ್ಲಿ ನೀವು ಪ್ರತಿದಿನ 7 ರೂಪಾಯಿಗಳನ್ನು ಜಮಾ ಮಾಡಿದರೆ, ನೀವು ತಿಂಗಳಿಗೆ 5000 ರೂಪಾಯಿಗಳ ಪಿಂಚಣಿ ಪಡೆಯಬಹುದು. ಅದೇ ಸಮಯದಲ್ಲಿ, ಪ್ರತಿ ತಿಂಗಳು 1000 ರೂ.ಗಳ ಮಾಸಿಕ ಪಿಂಚಣಿಗೆ, ತಿಂಗಳಿಗೆ ಕೇವಲ 42 ರೂ.ಗಳನ್ನು ಮಾತ್ರ ಜಮಾ ಮಾಡಬೇಕಾಗುತ್ತದೆ. ಪ್ರತಿ ತಿಂಗಳು 2000 ರೂ. ಪಿಂಚಣಿಗೆ 84 ರೂ., 3000 ರೂ.ಗೆ 126 ರೂ. ಮತ್ತು ಮಾಸಿಕ 4000 ರೂ. ಪಿಂಚಣಿಗೆ 168 ರೂ. ಠೇವಣಿ ಇಡಬೇಕಾಗುತ್ತದೆ.


ಇದನ್ನೂ ಓದಿ- PF Withdrawal ಲಾಭದಾಯಕ ವ್ಯವಹಾರವಲ್ಲ, ₹ 1 ಲಕ್ಷ ವಿತ್ ಡ್ರಾ ₹ 11.55 ಲಕ್ಷ ನಷ್ಟಕ್ಕೆ ಕಾರಣವಾಗುತ್ತೆ


ತೆರಿಗೆ ಲಾಭ:
ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಜನರು ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ಪ್ರಯೋಜನವನ್ನು ಪಡೆಯುತ್ತಾರೆ. ತೆರಿಗೆಯ ಆದಾಯವನ್ನು ಇದರಿಂದ ಕಡಿತಗೊಳಿಸಲಾಗುತ್ತದೆ. ಇದಲ್ಲದೆ, ಕೆಲವು ಸಂದರ್ಭಗಳಲ್ಲಿ 50,000 ರೂ.ಗಳ ಹೆಚ್ಚುವರಿ ತೆರಿಗೆ ಲಾಭ ಲಭ್ಯವಿದೆ. ಒಟ್ಟಾರೆಯಾಗಿ, ಈ ಯೋಜನೆಯಲ್ಲಿ 2 ಲಕ್ಷ ರೂ.ಗಳ ಕಡಿತ ಲಭ್ಯವಿದೆ.


ಹೂಡಿಕೆದಾರನು 60 ವರ್ಷಗಳ ಮೊದಲು ಸಾವನ್ನಪ್ಪಿದರೆ...
ಈ ಯೋಜನೆಯಲ್ಲಿ ಅಂತಹ ಒಂದು ನಿಬಂಧನೆ ಇದೆ, ಈ ಯೋಜನೆಗೆ ಸಂಬಂಧಿಸಿದ ವ್ಯಕ್ತಿಯು 60 ವರ್ಷಗಳ ಮೊದಲು ಸತ್ತರೆ, ಅವರ ಪತ್ನಿ / ಪತಿ ಈ ಯೋಜನೆಯಲ್ಲಿ ಹಣವನ್ನು ಠೇವಣಿ ಇಡುವುದನ್ನು ಮುಂದುವರಿಸಬಹುದು ಮತ್ತು 60 ವರ್ಷಗಳ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು. ಆ ವ್ಯಕ್ತಿಯ ಪತ್ನಿ ತನ್ನ ಗಂಡನ ಮರಣದ ನಂತರ ಒಟ್ಟು ಮೊತ್ತವನ್ನು ಪಡೆಯಬಹುದು ಎಂಬ ಆಯ್ಕೆಯೂ ಇದೆ. ಒಂದೊಮ್ಮೆ ಹೆಂಡತಿ ಹೂಡಿಕೆದರರಾಗಿದ್ದು ಅವರು 60 ವರ್ಷಗಳ ಮೊದಲು ಸತ್ತರೆ, ನಾಮಿನಿಗೆ ಒಂದು ದೊಡ್ಡ ಮೊತ್ತವನ್ನು ನೀಡಲಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.