Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ

Mutual Fund Investment:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.

Written by - Nitin Tabib | Last Updated : Jun 26, 2021, 02:16 PM IST
  • ನೀವೂ ಕೂಡ ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದೀರಾ?
  • ಹೂಡಿಕೆ ಮಾಡುವ ಮೊದಲು ಈ ಐದು ಸಂಗತಿಗಳನ್ನು ನೆನಪಿನಲ್ಲಿಡಿ.
  • ಈ ಸಂಗತಿಗಳನ್ನು ತಿಳಿದುಕೊಂಡು ಅವಶ್ಯಕತೆಗೆ ಅನುಗುಣವಾಗಿ ಹೂಡಿಕೆ ಮಾಡಿ
Mutual Fund Investment: ಮ್ಯೂಚವಲ್ ಫಂಡ್ ಹೂಡಿಕೆಗೂ ಮುನ್ನ ಈ 5 ಸಂಗತಿಗಳು ನಿಮಗೆ ತಿಳಿದಿರಲಿ, ಲಾಭ ನಿಮ್ಮದಾಗಲಿದೆ title=
Mutual Fund Investment (File Photo)

Mutual Fund Investment: ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಇಂದು ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ SIP ಮೂಲಕ ಹೂಡಿಕೆ ಮಾಡುವವರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ತಾಜಾ ಅಂಕಿ-ಅಂಶಗಳ ಪ್ರಕಾರ ಪ್ರತಿತಿಂಗಳು 1 ಲಕ್ಷ ಹೊಸ SIP ಖಾತೆಗಳನ್ನು ತೆರೆಯಲಾಗುತ್ತಿದೆ. ಒಂದು ವರ್ಷದ ಹಿಂದೆ ಈ ಸಂಖ್ಯೆ ಕೇವಲ 10 ಸಾವಿರರಷ್ಟಾಗಿತ್ತು. ಒಂದು ವೇಳೆ ನೀವೂ ಕೂಡ ಆರ್ಥಿಕ ಸಲಹೆಗಾರರ ಸಲಹೆಯನ್ನು ಪಡೆದರೆ ಅವರೂ ಕೂಡ SIP ಮೂಲಕ ಇಕ್ವಿಟಿ ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ.

ಮ್ಯೂಚವಲ್ ಫಂಡ್ (Mutual Fund) ಮೂಲಕ ಕೇವಲ ಷೇರುಮಾರುಕಟ್ಟೆಯಲ್ಲಿ  ಅಷ್ಟೇ ಅಲ್ಲ ಡೆಟ್ (Debt Fund), ಗೋಲ್ಡ್ (Gold Fund) ಹಾಗೂ ಕಮೊಡಿಟಿಯಲ್ಲಿಯೂ ಕೂಡ ಹೂಡಿಕೆ ಮಾಡಬಹುದಾಗಿದೆ. ಒಂದು ವೇಳೆ ನಿಮಗೆ ಷೇರು ಮಾರುಕಟ್ಟೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದಾದರೆ, ಅಥವಾ ಷೇರು ಮಾರುಕಟ್ಟೆಯಲ್ಲಿ ನೀವು ಮಾಡುವ ಹೂಡಿಕೆಯ ಮೇಲೆ ನಿಮ್ಮಿಂದ ನಿಗಾ ವಹಿಸಲು ಸಾಧ್ಯವಿಲ್ಲ ಎಂದಾದರೆ, ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ನಿಮಗೆ ಒಂದು ಉತ್ತಮ ಆಯ್ಕೆಯಾಗಿರಲಿದೆ.

ಹೀಗಿರುವಾಗ ಮ್ಯೂಚವಲ್ ಫಂಡ್ ಆಯ್ಕೆ ಹೇಗೆ ಮಾಡಬೇಕು? ಮಾರುಕಟ್ಟೆಯಲ್ಲೇಕೆ ನೂರಾರು ಕಂಪನಿಗಳ ಮ್ಯೂಚವಲ್ ಫಂಡ್ ಗಳಿವೆ? ಸರಿಯಾದ ಮ್ಯೂಚವಲ್ ಫಂಡ್ ಆಯ್ಕೆಯಲ್ಲಿ ಬರುವ ಈ ಸಂಗತಿಗಳ ಮೇಲೆ ನೀವು ಗಮನ ಕೇಂದ್ರೀಕರಿಸುವುದು ಅವಶ್ಯಕ.

1. ಮ್ಯೂಚವಲ್ ಫಂಡ್ ಆಯ್ಕೆ - ಎಲ್ಲಕ್ಕಿಂತ ಮೊದಲು ನಿಮ್ಮ ಹೂಡಿಕೆಯ ಮುಖ್ಯ ಉದ್ದೇಶ ಏನು ಎಂಬುದನ್ನು ನೀವು ನಿರ್ಧರಿಸಬೇಕು. ನಂತರ ಅದಕ್ಕಾಗಿ ಎಷ್ಟು ಹೂಡಿಕೆ ಮಾಡಬೇಕು ಮತ್ತು ಎಷ್ಟು ಅವಧಿಯವರೆಗೆ ಹೂಡಿಕೆ ಮಾಡಬೇಕು ಎಂಬುದು ತುಂಬಾ ಮುಖ್ಯವಾದ ಸಂಗತಿ. ಒಂದು ವೇಳೆ ನೀವು ಒಂದು ಅಥವಾ ಎರಡು ವರ್ಷಗಳ ಅವಧಿಗೆ ಹೂಡಿಕೆ ಮಾಡಬೇಕೆಂದು ಬಯಸುತ್ತಿದ್ದರೆ, ಅದಕ್ಕಾಗಿ ಬೇರೆ ಮ್ಯೂಚವಲ್ ಫಂಡ್ ಗಳಿವೆ. ಒಂದು ವೇಳೆ ನೀವು ಐದು , ಏಳು, ಹತ್ತು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗಾಗಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಅದಕ್ಕಾಗಿಯೇ ಪ್ರತ್ಯೇಕ ಮ್ಯೂಚವಲ್ ಫಂಡ್ ಗಳಿವೆ. ಅತಿ ಕಡಿಮೆ ಅವಧಿಗಾಗಿ ನೀವೂ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಅದಕ್ಕಾಗಿ ನಿಮ್ಮ ಬಳಿ ಡೆಟ್ ಅಥವಾ ಲಿಕ್ವಿಡ್ ಫಂಡ್ ಗಳ (Liquid Fund) ಆಯ್ಕೆ ನಿಮ್ಮ ಬಳಿ ಇದೆ. ದೀರ್ಘಾವಧಿಯ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವು ಇಕ್ವಿಟಿ ಫಂಡ್ (Equity Fund) ಗಳಲ್ಲಿ ಹೂಡಿಕೆ ಮಾಡಬಹುದು.

2. ಅಪಾಯ (Risk Factor) ಎದುರಿಸುವ ನಿಮ್ಮ ಕ್ಷಮತೆ -  ಹೂಡಿಕೆ ಮಾಡುವ ಮೊದಲು ನೀವು ಎಷ್ಟು ಅಪಾಯ ಎದುರಿಸಲು ಸಿದ್ಧರಾಗಿದ್ದೀರಿ ಎಂಬುದನ್ನು ಮೊದಲೇ ನಿರ್ಧರಿಸಿ. ಹೆಚ್ಚಿನ ರಿಟರ್ನ ಪಡೆಯಲು ಹೆಚ್ಚಿನ ರಿಸ್ಕ್ ಎದುರಿಸಬೇಕು. ಆದರೆ, ಹೂಡಿಕೆಯಲ್ಲಿ ನಿಮ್ಮ ಆದಾಯದ ಜೊತೆಗೆ ನಿಮ್ಮ ಅಸಲಿನ ರಕ್ಷಣೆ ಕೂಡ ಆಗಬೇಕು ಎಂಬುದನ್ನು ನೆನಪಿಡಿ. ಉದಾಹರಣೆಗೆ ಒಂದು ವೇಳೆ ನೀವು ಇಕ್ವಿಟಿ ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಹೂಡಿಕೆಯ ಒಟ್ಟು ಮೌಲ್ಯದಲ್ಲಿ ಇಳಿಕೆಯಾಗುವ ರಿಸ್ಕ್ ನೀವು ತೆಗೆದುಕೊಳ್ಳಬಾರದು. ಹೀಗಿರುವಾಗ ರಿಟರ್ನ್ ಹಾಗೂ ರಿಸ್ಕ್ ಸಮತೋಲನವಿರುವ ಮ್ಯೂಚವಲ್ ಫಂಡ್ ಗಳ ಆಯ್ಕೆ ನೀವು ಮಾಡಬೇಕು. 

3. ನೀವೂ ಹೂಡಿಕೆ ಮಾಡಬಯಸುವ ಫಂಡ್ ನ ಇತಿಹಾಸ ತಿಳಿದುಕೊಳ್ಳಿ - ಯಾವುದೇ ಒಂದು ಫಂಡ್ ಈ ಮೊದಲು ನೀಡಿದ ಪ್ರದರ್ಶನವನ್ನೇ ಮುಂದೆಯೂ ನೀಡಲಿದೆ ಎಂದು ಭಾವಿಸುವುದು ತಪ್ಪು. ಏಕೆಂದರೆ ಈ ಕುರಿತು ಯಾವುದೇ ಗ್ಯಾರಂಟಿ ಇರುವುದಿಲ್ಲ. ಆದರೆ ವಿಭಿನ್ನ ಫಂಡ್ ಗಳ ಹಿಂದಿನ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾವ ಫಂಡ್ ನಿರಂತರತೆಯನ್ನು ಕಾಯ್ದುಕೊಂಡಿದೆ ಎಂಬುದರ ಅಂದಾಜನ್ನು ನೀವು ವ್ಯಕ್ತಪಡಿಸಬಹುದು. ಫಂಡ್ ಗಳ ಏರಿಳಿತ ಮಾರುಕಟ್ಟೆ ಹಾಗೂ ಆರ್ಥಿಕತೆಯ ಏರಿಳಿತಗಳಿಂದ ವಿಭಿನ್ನವಾಗಿಲ್ಲ. ಇದರಿಂದ ನಿಮಗೆ ನಿಮ್ಮ ನೆಚ್ಚಿನ ಸ್ಕೀಮ್ ಹಾಗೂ ಮ್ಯೂಚವಲ್ ಫಂಡ್ ಆಯ್ಕೆಯಲ್ಲಿ ಸಹಾಯ ಸಿಗಲಿದೆ. ವಿಭಿನ್ನ ರೇಟಿಂಗ್ ಏಜೆನ್ಸಿಗಳು (Rating Agencies) ಈ ಫಂಡ್ ಗಳಿಗೆ ನೀಡಿರುವ ರೇಟಿಂಗ್ ಅನ್ನು ನೀವು ನೋಡಬಹುದು. 

ಇದನ್ನೂ ಓದಿ-7th Pay Commission : ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಇಂದು 'DA-DR' ಹೆಚ್ಚಳ ಸಾಧ್ಯತೆ!

4. ವೆಚ್ಚದ ಮೇಲೆ ಗಮನ ಕೇಂದ್ರೀಕರಿಸಿ - ಯಾವುದೇ ಒಂದು ಮ್ಯೂಚವಲ್ ಫಂಡ್ ನಲ್ಲಿ ಹೂಡಿಕೆ ಮಾಡುವ ಮೊದಲು ಅದರಲ್ಲಿರುವ ಹೂಡಿಕೆಗೆ ಸಂಬಂಧಿತ ವೆಚ್ಚಗಳ ಮೇಲೆ ಗಮನ ಕೇಂದ್ರೀಕರಿಸಿ. ಈ ವೆಚ್ಚಗಳಲ್ಲಿ, ಎಂಟ್ರಿ ಹಾಗೂ ಎಕ್ಸಿಟ್ ಲೋಡ್ (Entry And Exit Load), ಅಸೆಟ್ ಮ್ಯಾನೇಜ್ಮೆಂಟ್ ಚಾರ್ಜ್(Asset Managment Charge), ಎಕ್ಸ್ಪೆನ್ಸ್ ರೆಶ್ಯೋ (Expense Ratio) ಶಾಮೀಲಾಗಿವೆ. ಅಸೆಟ್ ಮ್ಯಾನೇಜ್ಮೆಂಟ್ ರೆಶ್ಯೋ ಹಾಗೂ ಎಕ್ಸ್ಪೆನ್ಸ್ ರೆಶ್ಯೋಗಳು ನಿಮ್ಮ ಲಾಭವನ್ನು ಕಡಿಮೆ ಮಾಡುತ್ತವೆ. ಶೇ.1.5ರಷ್ಟು ಎಕ್ಸ್ಪೆನ್ಸ್ ರೆಶ್ಯೋ ಯಾವುದೇ ಒಂದು ಮ್ಯೂಚವಲ್ ಫಂಡ್ ಗೆ ಸಾಮಾನ್ಯ ಎನ್ನಲಾಗುತ್ತದೆ. ಆದರೆ, ಇದಕ್ಕಿಂತ ಹೆಚ್ಚಾಗಿ ಎಕ್ಸ್ಪೆನ್ಸ್ ರೆಶ್ಯೂ ಇರುವ ಮ್ಯೂಚವಲ್ ಫಂಡ್ ಗಳ ಹೂಡಿಕೆಯಿಂದ ದೂರ ಉಳಿಯಿರಿ.

ಇದನ್ನೂ ಓದಿ-EPFO Rules: ಇಪಿಎಫ್ಒಗೆ ಸಂಬಂಧಿಸಿದ ಈ ಅಗತ್ಯವಾದ ನಿಯಮಗಳನ್ನು ತಪ್ಪದೇ ತಿಳಿಯಿರಿ

5. ಫಂಡ್ ಹೌಸ್ (Fund House) ಹಾಗೂ ಫಂಡ್ ಮ್ಯಾನೇಜರ್ (Fund Manager) ಅನುಭವ ಪರಿಗಣಿಸಿ - ಯಾವ ಮ್ಯೂಚವಲ್ ಫಂಡ್ ನಲ್ಲಿ ನೀವು ಹೂಡಿಕೆ ಮಾಡಲು ಬಯಸುತ್ತಿರುವಿರೋ ಆ ಸ್ಕೀಮ್ ಅನ್ನು ಪಡೆಯುತ್ತಿರುವ ಕಂಪನಿ ಹಾಗೂ ಅದನ್ನು ನೋಡಿಕೊಳ್ಳುವ ಮ್ಯಾನೇಜರ್ ಅನುಭವ ಅಥವಾ ರಿಕಾರ್ಡ್ ಒಮ್ಮೆ ಪರಿಶೀಲಿಸಿ. ಫಂಡ್ ಹೌಸ್ ಎಷ್ಟು ಅವಧಿಯಿಂದ ಕಾರ್ಯನಿರ್ವಹಿಸುತ್ತಿದೆ, ಅದರ ಬೇರೆ ಸ್ಕೀಮ್ ಗಳ ಪರ್ಮಾರ್ಮೆನ್ಸ್ ಹೇಗಿದೆ ಹಾಗೂ ಮಾರುಕಟ್ಟೆಯಲ್ಲಿ ಕಂಪನಿಯ ಪ್ರತಿಷ್ಠೆ ಹೇಗಿದೆ ಎಂಬುದನ್ನು ಪರಿಶೀಲಿಸಲು ಮರೆಯದಿರಿ. ಈ ಎಲ್ಲಾ ಮಾಹಿತಿಗಳು ಕಂಪನಿಗಳ ವೆಬ್ ಸೈಟ್ ಮೇಲೆ ದೊರೆಯಲಿದೆ. ಇದಲ್ಲದೆ ಹಲವು ವೆಬ್ಸೈಟ್ ಗಳಿದ್ದು, ಅವುಗಳ ಮೇಲೆ ನಿಮಗೆ ಯಾವುದೇ ಮ್ಯೂಚವಲ್ ಫಂಡ್ ಪರ್ಫಾರ್ಮೆನ್ಸ್, ರೇಟಿಂಗ್, ಪೋರ್ಟ್ಫೋಲಿಯೋಗಳ ಮಾಹಿತಿ ಸಿಗಲಿದೆ. ಆದರೆ, ಇದಕ್ಕಾಗಿ ನೀವು ಸ್ವಲ್ಪ ಸಮಯ ನೀಡಬೇಕು. ಆವಶ್ಯಕತೆಗೆ  ಅನುಗುಣವಾಗಿ ನೀವು ಮ್ಯೂಚವಲ್ ಫಂಡ್ ಆಯ್ಕೆ ಮಾಡಿ ಹೂಡಿಕೆ ಆರಂಭಿಸಬಹುದು.

ಇದನ್ನೂ ಓದಿ-Finance Ministry Big Announcement: Corona ಪೀಡಿತರಿಗೆ ಭಾರಿ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News