Atal Pension Scheme: ಚಿಕ್ಕ ವಯಸ್ಸಿನಿಂದಲೇ ಸಣ್ಣ ಮೊತ್ತವನ್ನು ಉಳಿಸಿದರೆ ನಿಮ್ಮ ವೃದ್ಧಾಪ್ಯವನ್ನು ಸಂತೋಷದಿಂದ ಕಳೆಯಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಪ್ರತಿದಿನ 7 ರೂಪಾಯಿ ಹೂಡಿಕೆ ಮಾಡಿದರೆ, ವೃದ್ಧಾಪ್ಯದಲ್ಲಿ 5 ಸಾವಿರದವರೆಗೆ ಪಿಂಚಣಿ ಪಡೆಯಬಹುದು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಶೀಘ್ರವೇ ಹೊಸ Mercedes-Benz GLS ಫೇಸ್‌ಲಿಫ್ಟ್ ಬಿಡುಗಡೆ; ಈ ದಿನ ಮಾರುಕಟ್ಟೆಗೆ ಎಂಟ್ರಿ! 


2015 ರಲ್ಲಿ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿತು. ಇದುವರೆಗೆ 6 ಕೋಟಿಗೂ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಲಾಭ ಪಡೆದಿದ್ದಾರೆ. ದೇಶದ ಪ್ರತಿಯೊಂದು ವರ್ಗಕ್ಕೂ ವೃದ್ಧಾಪ್ಯದಲ್ಲಿ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಮೋದಿ ಸರ್ಕಾರ ಈ ಯೋಜನೆಯನ್ನು ತಂದಿತು. ಇನ್ನು ಮುಂದೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ಪ್ರತಿ ತಿಂಗಳು ರೂ.1000 ರಿಂದ ರೂ.5000 ವರೆಗೆ ಪಿಂಚಣಿ ಪಡೆಯಬಹುದು. ಪಿಂಚಣಿ ಮೊತ್ತವು ನಿಮ್ಮ ಹೂಡಿಕೆಯನ್ನು ಅವಲಂಬಿಸಿರುತ್ತದೆ.


ಯಾರು ಹೂಡಿಕೆ ಮಾಡಬಹುದು..?


ಈ ಯೋಜನೆಯಲ್ಲಿ ಯಾವುದೇ ಭಾರತೀಯರು ಹೂಡಿಕೆ ಮಾಡಬಹುದು.


18 ರಿಂದ 40 ವರ್ಷದೊಳಗಿನವರು ಹೂಡಿಕೆ ಮಾಡಬಹುದು.


ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ಸರ್ಕಾರವು ಈ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 


ಆದಾಯ ತೆರಿಗೆ ಪಾವತಿದಾರರು ಅಟಲ್ ಪಿಂಚಣಿ ಯೋಜನೆ ಪ್ರಯೋಜನಗಳಿಗೆ ಅರ್ಹರಲ್ಲ.


ಗಂಡ ಮತ್ತು ಹೆಂಡತಿ ಇಬ್ಬರೂ ಈ ಪಿಂಚಣಿ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು. ಗಂಡ ತೀರಿ ಹೋದ ಬಳಿಕ ಹೆಂಡತಿಗೆ ಈ ಪಿಂಚಣಿ ಸಿಗುತ್ತದೆ.


ನೀವು 60 ವರ್ಷ ತಲುಪುವವರೆಗೆ ಹೂಡಿಕೆ ಮಾಡಬೇಕು.


ಚಂದಾದಾರರು ಮರಣ ಹೊಂದಿದರೆ, ಸಂಪೂರ್ಣ ಪಿಂಚಣಿಯನ್ನು ನಾಮಿನಿಗೆ ನೀಡಲಾಗುತ್ತದೆ. 


ಹೂಡಿಕೆ ಮಾಡುವುದು ಹೇಗೆ..?


ನೀವು ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್ ಹೊಂದಿದ್ದರೆ ನೀವು ಈ ಯೋಜನೆಯಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು. ಬ್ಯಾಂಕ್‌ಗೆ ಹೋಗಿ ಅಟಲ್ ಪಿಂಚಣಿ ಯೋಜನೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಫಾರ್ಮ್‌ನೊಂದಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ. KYC ನವೀಕರಣದ ನಂತರ ಪಿಂಚಣಿ ಖಾತೆಯನ್ನು ತೆರೆಯಲಾಗುತ್ತದೆ. 


ಇದನ್ನೂ ಓದಿ : ರೈಲ್ವೆ ಹೊಸ ನಿಯಮ: ಈಗ ಆರ್‌ಎಸಿ ಟಿಕೆಟ್ ಹೊಂದಿರುವವರಿಗೂ ಸಿಗುತ್ತೆ ಈ ಸರ್ವಿಸ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.