ATM Card ಬಳಸುವವರಿಗೆ ಉಚಿತವಾಗಿ ಸಿಗಲಿದೆ 5 ಲಕ್ಷ ರೂಪಾಯಿ .!
ATM Insurance : ಎಟಿಎಂ ಕಾರ್ಡ್‌ನೊಂದಿಗೆ ಲಭ್ಯವಿರುವ ಉಚಿತ ಸೇವೆಗಳಲ್ಲಿ ಪ್ರಮುಖವಾದದ್ದು ವಿಮೆ. ಬ್ಯಾಂಕ್ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡಿದ ತಕ್ಷಣ, ಗ್ರಾಹಕರು ಅಪಘಾತ ವಿಮೆಯನ್ನು ಪಡೆಯುತ್ತಾರೆ.
ATM Insurance : ಎಟಿಎಂ ಕಾರ್ಡ್ ಬಳಕೆದಾರರಿಗೆ ಬ್ಯಾಂಕ್ 5 ಲಕ್ಷದವರೆಗೆ ವಿಮೆ ನೀಡಬಹುದು. ಅನೇಕ ಗ್ರಾಹಕರಿಗೆ ಈ ಬಗ್ಗೆ ತಿಳಿದಿರುವುದಿಲ್ಲ. ಈ ವಿಮೆಗಾಗಿ ಕಾರ್ಡುದಾರರ ಕುಟುಂಬ ಸದಸ್ಯರು ಅರ್ಜಿ ಸಲ್ಲಿಸಬೇಕಾಗುತದೆ. ಒಂದು ವೇಳೆ ಕ್ಲೈಮ್ ಮಾಡದೆ ಹೋದರೆ ಈ ಮೊತ್ತವನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. ಹಾಗಿದ್ದರೆ ಈ ವಿಮೆಯ ಹಣವನ್ನು ಪಡೆಯಲು ಕ್ಲೈಮ್ ಮಾಡುವುದು ಹೇಗೆ ನೋಡೋಣ.
ಬ್ಯಾಂಕ್‌ಗಳು ಗ್ರಾಹಕರಿಗೆ ಮಾಹಿತಿ ನೀಡುವುದಿಲ್ಲ :
ಎಟಿಎಂ ಕಾರ್ಡ್‌ನೊಂದಿಗೆ ಲಭ್ಯವಿರುವ ಉಚಿತ ಸೇವೆಗಳಲ್ಲಿ ಪ್ರಮುಖವಾದದ್ದು ವಿಮೆ. ಬ್ಯಾಂಕ್ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡಿದ ತಕ್ಷಣ, ಗ್ರಾಹಕರು ಅಪಘಾತ ವಿಮೆಯನ್ನು ಪಡೆಯುತ್ತಾರೆ. ಆದರೆ, ಈ ವಿಮೆಯ ಬಗೆಗಿನ ಜ್ಞಾನದ ಕೊರತೆಯಿಂದಾಗಿ, ಬಹುತೇಕ ಜನರು ಈ ವಿಮೆಯಿಂದ ವಂಚಿತರಾಗುತ್ತಾರೆ. ಅವಿದ್ಯಾವಂತರು ಮಾತ್ರವಲ್ಲ ವಿದ್ಯಾವಂತರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಬ್ಯಾಂಕ್ ಕೂಡ ಈ ಮಾಹಿತಿಯನ್ನು ತನ್ನ ಗ್ರಾಹಕರಿಗೆ ಮೌಖಿಕವಾಗಿ ನೀಡುವುದಿಲ್ಲ.
ಇದನ್ನೂ ಓದಿ : Gas Prices : ಶೀಘ್ರದಲ್ಲೇ ಸಿಲಿಂಡರ್ ಬೆಲೆ ಕಡಿತ? ಸರ್ಕಾರದಿಂದ ಈ ಮಹತ್ವದ ಹೆಜ್ಜೆ!
ಯಾರು ವಿಮೆ ಪಡೆಯುತ್ತಾರೆ? :
ಆರ್‌ಬಿಐ ನಿಯಮಗಳ ಪ್ರಕಾರ, ಕನಿಷ್ಠ 45 ದಿನಗಳ ಹಿಂದೆ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್‌ಗಳ ಎಟಿಎಂ ಕಾರ್ಡ್ ಅನ್ನು ಬಳಸುತ್ತಿರುವ ಕಾರ್ಡ್‌ದಾರರು ವಿಮೆಗೆ ಅರ್ಹರಾಗಿರುತ್ತಾರೆ. ಎಟಿಎಂನ ವಿಮೆಯಲ್ಲಿ ಎಷ್ಟು ಮೊತ್ತವು ಲಭ್ಯವಿರುತ್ತದೆ. ಇದು ಎಟಿಎಂ ಕಾರ್ಡ್ ವರ್ಗವನ್ನು ಅವಲಂಬಿಸಿರುತ್ತದೆ.
ಪ್ರತಿ ವರ್ಗಕ್ಕೆ ವಿಮೆ :
ಬ್ಯಾಂಕ್ ವಿವಿಧ ವರ್ಗಗಳ ಪ್ರಕಾರ ಕಾರ್ಡುದಾರರಿಗೆ ವಿಮೆಯನ್ನು ನೀಡುತ್ತದೆ. ಕ್ಲಾಸಿಕ್, ಪ್ಲಾಟಿನಂ ಮತ್ತು ಸಾಮಾನ್ಯ ಎಂಬ ಮೂರು ವಿಭಾಗಗಳಿರುತ್ತವೆ. ಸಾಮಾನ್ಯ ಮಾಸ್ಟರ್ ಕಾರ್ಡ್‌ನಲ್ಲಿ 50,000 ರೂಪಾಯಿ, ಕ್ಲಾಸಿಕ್ ಎಟಿಎಂ ಕಾರ್ಡ್‌ನಲ್ಲಿ 1 ಲಕ್ಷ ರೂಪಾಯಿ, ವೀಸಾ ಕಾರ್ಡ್‌ನಲ್ಲಿ 1.5 ರಿಂದ 2 ಲಕ್ಷ ರೂಪಾಯಿ ಮತ್ತು ಪ್ಲಾಟಿನಂ ಕಾರ್ಡ್‌ನಲ್ಲಿ 5 ಲಕ್ಷ ರೂಪಾಯಿ.ವರೆಗೆ ವಿಮೆ ಸಿಗುತ್ತದೆ.
ಇದನ್ನೂ ಓದಿ : SBI Customers Alert: QR ಕೋಡ್ ಅನ್ನು ಈ ರೀತಿ ಸ್ಕ್ಯಾನ್ ಮಾಡಿದರೆ ಖಾಲಿಯಾಗುತ್ತೆ ಖಾತೆ
ಸಾವಿನ ನಂತರ 5 ಲಕ್ಷದವರೆಗೆ ಕ್ಲೈಮ್ ಮಾಡಬಹುದು :
ಎಟಿಎಂ ಕಾರ್ಡ್ ಬಳಸುವವರು ಅಪಘಾತದಲ್ಲಿ ಮೃತಪಟ್ಟರೆ 1 ರಿಂದ 5 ಲಕ್ಷ ರೂಪಾಯಿವರೆಗೆ ವಿಮೆ ದೊರೆಯುತ್ತದೆ. ಮತ್ತೊಂದೆಡೆ, ಒಂದು ಕೈ ಅಥವಾ ಒಂದು ಕಾಲಿಗೆ ಹಾನಿಯಾದರೆ, 50000 ರೂ.ವರೆಗಿನ ವಿಮಾ ಮೊತ್ತವು ಸಿಗುತ್ತದೆ. ಇದಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಬೇಕು. ಕಾರ್ಡುದಾರರ ನಾಮಿನಿ ಅರ್ಜಿಯನ್ನು ಬ್ಯಾಂಕ್‌ಗೆ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದರೆ ಕಾರ್ಡ್ ಗೆ ಅನುಗುಣವಾಗಿ ವಿಮೆಯ ಮೊತ್ತ ಸಿಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.