Insurance Agents: ಲಕ್ಷಾಂತರ ವಿಮಾ ಏಜೆಂಟರ ಪಾಲಿಗೊಂದು ಭಾರಿ ಸಂತಸದ ಸುದ್ದಿ

Good News for Insurance Agents: ದೇಶಾದ್ಯಂತ ಇರುವ ಜೀವ ವಿಮೆ ಮತ್ತು ಸಾಮಾನ್ಯ ಪಾಲಸಿಗಳನ್ನು ಮಾರಾಟ ಮಾಡುವ ಏಜೆಂಟರ ಪಾಲಿಗೆ ಭಾರಿ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಸ್ತುತ ಭಾರತದಲ್ಲಿ ಸುಮಾರು 25 ಲಕ್ಷಕ್ಕೂ ಅಧಿಕ ವಿಮಾ ಏಜಂಟಗಳಿದ್ದಾರೆ. ಆರೋಗ್ಯ ಮತ್ತು ಸಾಮಾನ್ಯ ವಿಮಾ ಏಜೆಂಟ್ಗಳ ಸಂಖ್ಯೆ ಸುಮಾರು 15 ಲಕ್ಷ ಸಮೀಪದಲ್ಲಿದೆ.  

Written by - Nitin Tabib | Last Updated : Sep 6, 2022, 04:34 PM IST
  • ದೇಶಾದ್ಯಂತ ಇರುವ ಲಕ್ಷಾಂತರ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಏಜೆಂಟ್‌ಗಳಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ.
  • ಈಗ ಮುಂದಿನ ದಿನಗಳಲ್ಲಿ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಕಂಪನಿಗಳ ಏಜೆಂಟ್‌ಗಳು ಒಂದಕ್ಕಿಂತ ಹೆಚ್ಚು ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ.
Insurance Agents: ಲಕ್ಷಾಂತರ ವಿಮಾ ಏಜೆಂಟರ ಪಾಲಿಗೊಂದು ಭಾರಿ ಸಂತಸದ ಸುದ್ದಿ title=
Insurance Agents Good News

Insurance  Policies: ದೇಶಾದ್ಯಂತ ಇರುವ ಲಕ್ಷಾಂತರ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಏಜೆಂಟ್‌ಗಳಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಈಗ ಮುಂದಿನ ದಿನಗಳಲ್ಲಿ ಜೀವ ವಿಮೆ ಮತ್ತು ಸಾಮಾನ್ಯ ವಿಮಾ ಕಂಪನಿಗಳ ಏಜೆಂಟ್‌ಗಳು ಒಂದಕ್ಕಿಂತ ಹೆಚ್ಚು ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ. ಮೂಲಗಳಿಂದ ದೊರೆತ ಮಾಹಿತಿಯ ಪ್ರಕಾರ, ಶೀಘ್ರದಲ್ಲೇ ವಿಮಾ ನಿಯಂತ್ರಕ ಒಂದು ವಿಭಾಗದಲ್ಲಿ ಮೂರು ಏಜೆಂಟ್ಗಳ ನಿಯಮಕ್ಕೆ  ಅನುಮೋದನೆ ನೀಡುವ ಸಾಧ್ಯತೆ ಇದೆ.

ವಿಮಾ ಕಂಪನಿಗಳು ಮತ್ತು ಏಜೆಂಟ್ಸ್ ಅಸೋಸಿಯೇಷನ್ ​​ಕೂಡ ಅಸ್ತಿತ್ವದಲ್ಲಿರುವ ಒಂದು ಕಂಪನಿ ಏಜೆಂಟ್ ನಿಯಮದಿಂದ ಹೆಚ್ಚಳದ ಪರವಾಗಿವೆ. ಇತ್ತೀಚೆಗಷ್ಟೇ, ವಿಮಾ ನಿಯಂತ್ರಕ IRDAI ಕಾರ್ಪೊರೇಟ್ ಏಜೆಂಟ್‌ಗಳು ಮತ್ತು ಬ್ರೋಕರ್‌ಗಳಿಗೆ ನಿಯಮಾವಳಿಗಳನ್ನು ಸಡಿಲಗೊಳಿಸಿದೆ ಮತ್ತು 9 ಕಂಪನಿಗಳೊಂದಿಗೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅನುಮೋದನೆ ನೀಡಿದೆ.

ಒಂದಕ್ಕಿಂತ ಹೆಚ್ಚು ವಿಮಾ ಕಂಪನಿಗಳೊಂದಿಗೆ ವೈಯಕ್ತಿಕ ಏಜೆಂಟ್ ಅನ್ನು ಲಿಂಕ್ ಮಾಡುವ ದೊಡ್ಡ ಉದ್ದೇಶವೆಂದರೆ, ವಿಮೆಯ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ಹೆಚ್ಚಿನ ಕಂಪನಿಗಳು ಉತ್ಪನ್ನಗಳನ್ನು ಹೊಂದಿರುವಾಗ, ಏಜೆಂಟರು ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಲು ಸಾಧ್ಯವಾಗಲಿದೆ. ಆದಾಗ್ಯೂ, ವಿಮಾ ನಿಯಂತ್ರಕ IRDAI ಜೀವೇತರ ವಿಮೆಯ ಎಲ್ಲಾ ವಿಭಾಗಗಳ ಕಮಿಷನ್ ಅನ್ನು 20% ಕ್ಕೆ ಇಳಿಸಲು ಪ್ರಸ್ತಾಪಿಸಿದೆ ಎಂಬ ಆತಂಕವೂ ಇದೆ, ಇದರಿಂದಾಗಿ ವಿವಿಧ ಕಂಪನಿಗಳು ಅವರ ವಹಿವಾಟಿನ ಪ್ರಕಾರ ಒಂದೇ ರೀತಿಯ ಉತ್ಪನ್ನಗಳ ಮೇಲೆ ಕಮಿಷನ್ ಅನ್ನು ನಿಗದಿಪಡಿಸುವ ಸಾಧ್ಯತೆಯಿದೆ. ಇದಲ್ಲದೆ ಏಜೆಂಟರು ಕೂಡ ಹೆಚ್ಚು ಕಮಿಷನ್ ಹೊಂದಿರುವ ಪಾಲಿಸಿಯಲ್ಲಿ ಗ್ರಾಹಕರಿಗೆ ಉತ್ಪನ್ನವನ್ನು ನೀಡುವ ಸಾಧ್ಯತೆ ಇದೆ.

ಇದನ್ನೂ ಓದಿ-EPFO Big Update: ನೌಕರರ ನಿವೃತ್ತಿ ವಯಸ್ಸಿನ ಕುರಿತು ಬಿಗ್ ಅಪ್ಡೇಟ್ ಪ್ರಕಟ! EPFO ಹೇಳಿದ್ದೇನು?

2021 ರವರೆಗಿನ ವಿಮಾ ನಿಯಂತ್ರಕ IRDAI ಯ ವಾರ್ಷಿಕ ವರದಿಯ ಪ್ರಕಾರ, ಜೀವ ವಿಮಾ ಕ್ಷೇತ್ರದಲ್ಲಿ 24 ಲಕ್ಷ 55 ಸಾವಿರ ಏಜೆಂಟ್‌ಗಳಿದ್ದು, ಆರೋಗ್ಯ ಮತ್ತು ಸಾಮಾನ್ಯ ವಿಮೆಯಲ್ಲಿ ಒಟ್ಟು ಏಜೆಂಟ್‌ಗಳ ಸಂಖ್ಯೆ 14 ಲಕ್ಷ 22 ಸಾವಿರ ಇದೆ

ಇದನ್ನೂ ಓದಿ-Car Offers: ಮಾರುತಿ ಸುಜುಕಿ ಕಂಪನಿಯ ಈ ಅಗ್ಗದ ಕಾರುಗಳ ಮೇಲೆ ಸಿಗ್ತಿದೆ ಬಂಪರ್ ಡಿಸ್ಕೌಂಟ್, ಯಾವ ಕಾರಿನ ಮೇಲೆ ಎಷ್ಟು?

ವಿಮಾ ಏಜೆಂಟ್‌ಗಳಿಗೆ ಇಲ್ಲಿವೆ ಕೆಲ ಮಹತ್ವದ ವಿಷಯಗಳು...

>> ವಿಮಾ ಏಜೆಂಟ್‌ಗಳು ಒಂದಕ್ಕಿಂತ ಹೆಚ್ಚು ವಿಮಾ ಕಂಪನಿಗಳ ಪಾಲಿಸಿಗಳನ್ನು ಮಾರಾಟ ಮಾಡಲು ಸಾಧ್ಯವಾಗಲಿದೆ
>> ನಿಯಂತ್ರಕರು ಒಂದು ವಿಭಾಗದ ಮೂರು ವಿಮಾ ಕಂಪನಿಗಳ ಏಜೆಂಟ್‌ಗಳನ್ನು ಅನುಮೋದಿಸಬಹುದು
>> ಪ್ರಸ್ತುತ ಒಬ್ಬ ವೈಯಕ್ತಿಕ ಏಜೆಂಟ್ ಕೇವಲ ಒಂದು ಜೀವ ವಿಮೆ ಮತ್ತು ಒಂದು ಸಾಮಾನ್ಯ ವಿಮೆಗೆ ಸೇರಬಹುದು
>> ಪ್ರಸ್ತುತ, ಕೇವಲ ಒಂದು ವಿಮಾ ಕಂಪನಿಯು ಒಂದು ವಿಭಾಗದಲ್ಲಿ ಏಜೆಂಟ್ ನಿಯಮಗಳನ್ನು ಹೊಂದಿದೆ
>> ಪ್ರತ್ಯೇಕ ಏಜೆಂಟ್‌ಗಳು ಗ್ರಾಹಕರಿಗೆ ವಿವಿಧ ಕಂಪನಿಗಳ ಪಾಲಿಸಿಗಳನ್ನು ನೀಡಲು ಸಾಧ್ಯವಾಗಲಿದೆ
>> ಕಾರ್ಪೊರೇಟ್ ಏಜೆಂಟ್‌ಗಳು, ಬ್ರೋಕರ್‌ಗಳ ಮಿತಿಯನ್ನು ಹೆಚ್ಚಿಸಿದ ನಂತರ ವೈಯಕ್ತಿಕ ಏಜೆಂಟ್‌ಗಳು ರಿಯಾಯಿತಿಯನ್ನು ಪಡೆಯುತ್ತಿದ್ದಾರೆ
>> ವಿಮಾ ಕಂಪನಿಗಳು ಮತ್ತು ಏಜೆಂಟ್‌ಗಳು ಸಹ ಈಗಿರುವ ಮಿತಿಯನ್ನು ಹೆಚ್ಚಿಸುವ ಪರವಾಗಿವೆ.
>> ಪ್ರಸ್ತುತ ದೇಶದಲ್ಲಿ ಸುಮಾರು 25 ಲಕ್ಷ ಜೀವ ವಿಮಾ ಏಜೆಂಟ್‌ಗಳಿದ್ದಾರೆ.
>> ಆರೋಗ್ಯ ಮತ್ತು ಸಾಮಾನ್ಯ ವಿಮಾ ಏಜೆಂಟ್‌ಗಳ ಸಂಖ್ಯೆ 15 ಲಕ್ಷದ ಸಮೀಪದಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News