August 2024 Rule Changes: ಇತ್ತೀಚೆಗಷ್ಟೇ ಕೇಂದ್ರ ಬಜೆಟ್ ಮಂಡನೆಯಾಗಿದ್ದು ಇಂದಿನಿಂದ ಎಂದರೆ ಆಗಸ್ಟ್ 01, 2024ರಿಂದ ಕ್ರೆಡಿಟ್ ಕಾರ್ಡ್, ಫಾಸ್ಟ್‌ಟ್ಯಾಗ್, ಗೂಗಲ್ ಮ್ಯಾಪ್ ನಿಯಮಗಳಲ್ಲಿ ಭಾರೀ ಬದಲಾವಣೆಗಳು ಜಾರಿಗೆ ಬರಲಿವೆ.  ಇದಲ್ಲದೇ, ಪ್ರತಿ ತಿಂಗಳ ಮೊದಲ ದಿನ ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ. ಇವೆಲ್ಲ ನಿಮ್ಮ ಜೇಬಿನ ಮೇಲೆ ನೇರವಾಗಿ ಪರಿಣಾಮ ಬಿರುವುದರಿಂದ ಇಂದಿನಿಂದ ಯಾವೆಲ್ಲಾ ನಿಯಮಗಳು ಬದಲಾಗಲಿವೆ ಎಂದು ತಿಳಿಯುವುದು ಮುಖ್ಯವಾಗಿದೆ. 


COMMERCIAL BREAK
SCROLL TO CONTINUE READING

ಆಗಸ್ಟ್‌ನಲ್ಲಿ ಯಾವೆಲ್ಲಾ ನಿಯಮಗಳು ಬದಲಾಗಲಿವೆ (August 2024 Rule Changes). ಇದರಿಂದ ಸಾರ್ವಜನಿಕರ ಬಜೆಟ್ (Budget) ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ನೋಡುವುದಾದರೆ... 


* ಎಲ್‌ಪಿ‌ಜಿ ಬೆಲೆಗಳು (LPG Prices): 
ಪ್ರತಿ ತಿಂಗಳ ಮೊದಲನೆಯ ದಿನ ಎಲ್‌ಪಿ‌ಜಿ ಸಿಲಿಂಡರ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಕೇಂದ್ರ ಬಜೆಟ್ (Union Budget) ಮಂಡನೆ ವೇಳೆ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡಿರುವುದರಿಂದ ಆಗಸ್ಟ್‌ನಲ್ಲಿ, ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ ನಿರೀಕ್ಷಿಸಲಾಗಿದೆ.  


ಇದನ್ನೂ ಓದಿ- ಮಗಳ ಭವಿಷ್ಯಕ್ಕಾಗಿ ಎಲ್‌ಐ‌ಸಿಯ ಈ ಯೋಜನೆಯಲ್ಲಿ ₹ 3,447 ಪ್ರೀಮಿಯಂ ಪಾವತಿಸಿ, ₹ 22.5 ಲಕ್ಷ ಗಳಿಸಿ


* ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳು (HDFC Bank Credit Card Rules): 
ಆಗಸ್ಟ್ 01ರಿಂದ ಎಚ್‌ಡಿ‌ಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ (HDFC Bank Credit Card) ಸಂಬಂಧಿಸಿದಂತೆ ಪ್ರಮುಖ ನಿಯಮಗಳು ಬದಲಾಗಲಿವೆ. ಇಂದಿನಿಂದ PayTM, CRED, MobiKwik ಮತ್ತು Cheq ನಂತಹ ಥರ್ಡ್-ಪಾರ್ಟಿ ಪಾವತಿ ಅಪ್ಲಿಕೇಶನ್‌ಗಳ ಮೂಲಕ ನಡೆಸಲಾಗುವ ವಹಿವಾಟುಗಳಿಗೆ 1% ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದಾಗ್ಯೂ,  ₹15,000 ಕ್ಕಿಂತ ಕಡಿಮೆ ಮೊತ್ತದ ಇಂಧನ ವಹಿವಾಟುಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಹೆಚ್ಚುವರಿಯಾಗಿ, ಬಾಕಿ ಇರುವ ಬ್ಯಾಲೆನ್ಸ್‌ನ ಆಧಾರದ ಮೇಲೆ ವಿಳಂಬ ಪಾವತಿ ಶುಲ್ಕಗಳು ಈಗ ₹100 ರಿಂದ ₹1,300 ವರೆಗೆ ಇರುತ್ತದೆ.  


* ಇಂದಿನಿಂದ ಬದಲಾಗಲಿವೆ ಫಾಸ್ಟ್‌ಟ್ಯಾಗ್ ನಿಯಮಗಳು (Fastag Rules to Change): 
ಆಗಸ್ಟ್ 1 ರಿಂದ ಫಾಸ್ಟ್‌ಟ್ಯಾಗ್ (Fastag) ಸಂಬಂಧಿತ ಹೊಸ ನಿಯಮಗಳು ಜಾರಿಯಾಗಲಿವೆ. ಟೋಲ್ ಬೂತ್‌ಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ- ಎನ್‌ಪಿ‌ಸಿ‌ಐ ಇಂದಿನಿಂದ ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ಅಪ್ಡೇಟ್ ಕಡ್ಡಾಯ ಎಂದು ಮಾರ್ಗಸೂಚಿ ಹೊರಡಿಸಿದೆ. 


* ಫಾಸ್ಟ್‌ಟ್ಯಾಗ್ ಕೆ‌ವೈ‌ಸಿ ನಿಯಮ (Fastag KYC Rules): 
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಮಾರ್ಗಸೂಚಿ ಪ್ರಕಾರ, ಮೂರರಿಂದ ಐದು ವರ್ಷಗಳ ಹಿಂದೆ ನೀಡಲಾದ ಎಲ್ಲಾ ಫಾಸ್ಟ್‌ಟ್ಯಾಗ್‌ಗಳಿಗೆ ಅಕ್ಟೋಬರ್ 31ರೊಳಗೆ ಕೆ‌ವೈ‌ಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. 


ಇದನ್ನೂ ಓದಿ- ಆಗಸ್ಟ್‌ನಲ್ಲಿ 14 ದಿನ ಬ್ಯಾಂಕ್‌ಗಳಿಗೆ ರಜೆ: ಇಲ್ಲಿದೆ ಫುಲ್ ಲಿಸ್ಟ್


* ಗೂಗಲ್ ಮ್ಯಾಪ್ ಶುಲ್ಕ (Google Map Fees): 
ಇಂದಿನಿಂದ ಭಾರತದಲ್ಲಿ ಗೂಗಲ್ ಮ್ಯಾಪ್ (Google Map) ಶುಲ್ಕಗಳು ಕಡಿಮೆಯಾಗಲಿವೆ. ಗೂಗಲ್ ಮ್ಯಾಪ್ ದರ ಪರಿಷ್ಕರಿಸಿರುವ ಕಂಪನಿಯು  70% ರಷ್ಟು ಶುಲ್ಕವನ್ನು ಕಡಿಮೆ ಮಾಡುತ್ತಿದೆ. ಆದಾಗ್ಯೂ, ಈ ಬದಲಾವಣೆಯು ಸಾಮಾನ್ಯ ಬಳಕೆದಾರರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.