Income Tax Refund Status ಅನ್ನು ಪ್ಯಾನ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಹೀಗೆ ಪರಿಶೀಲಿಸಿ

ITR filing 2024: ಇನ್ಕಮ್ ಟ್ಯಾಕ್ಸ್ ರಿಫಂಡ್ ಸ್ಟೇಟಸ್ ಅನ್ನು ನಿಮ್ಮ ಆಧಾರ್ ಬಳಸಿಯೇ ಮಾಡಬಹುದು. 

Written by - Ranjitha R K | Last Updated : Jul 30, 2024, 03:50 PM IST
  • ITR ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.
  • ಈಗಾಗಲೇ ನಾಲ್ಕು ಕೋಟಿಗೂ ಹೆಚ್ಚು ಮಂದಿ ITR ಸಲ್ಲಿಕೆ
  • ಸ್ಟೇಟಸ್ ಅಪ್ಡೇಟ್ ಅನ್ನು ಸಾಮಾನ್ಯವಾಗಿ 10 ದಿನಗಳಲ್ಲಿ ನೋಡಬಹುದು.
Income Tax Refund Status ಅನ್ನು ಪ್ಯಾನ್ ಕಾರ್ಡ್ ಬಳಸಿ ಆನ್‌ಲೈನ್‌ನಲ್ಲಿ ಹೀಗೆ ಪರಿಶೀಲಿಸಿ  title=

ITR filing 2024 : ITR ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ. ಈಗಾಗಲೇ ನಾಲ್ಕು ಕೋಟಿಗೂ ಹೆಚ್ಚು ಮಂದಿ ITR ಸಲ್ಲಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ಸ್ಥಿತಿಯನ್ನು ಪರಿಶೀಲಿಸಲು, ಪ್ಯಾನ್ ಕಾರ್ಡ್ ಅನ್ನು ಬಳಸಬಹುದು.ಸ್ಟೇಟಸ್ ಅಪ್ಡೇಟ್ ಅನ್ನು ಸಾಮಾನ್ಯವಾಗಿ 10 ದಿನಗಳಲ್ಲಿ ನೋಡಬಹುದು.  

ನಿಮ್ಮ PAN ಕಾರ್ಡ್ ಅನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ನಿಮ್ಮ ಆದಾಯ ತೆರಿಗೆ ಮರುಪಾವತಿಯ ಸ್ಥಿತಿಯನ್ನು ಪರಿಶೀಲಿಸಲು,ನೀವು ಎರಡು ವಿಧಾನಗಳನ್ನು ಅನುಸರಿಸಬಹುದು.ಮೊದಲನೆಯದು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು ಮತ್ತು ಎರಡನೆಯದು NSDL TIN ವೆಬ್‌ಸೈಟ್ ಮೂಲಕ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವುದು.

ಇದನ್ನೂ ಓದಿ : Arecanut Price in Karnataka: ಚಿತ್ರದುರ್ಗ, ಶಿವಮೊಗ್ಗ & ಮಂಗಳೂರಿನಲ್ಲಿ ಇಂದಿನ ಅಡಿಕೆ ಧಾರಣೆ

ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಿಂದ ಮರುಪಾವತಿ ಸ್ಥಿತಿಯನ್ನು  ಪರಿಶೀಲಿಸುವುದು ಹೇಗೆ ? : 
1. ಆದಾಯ ತೆರಿಗೆ ಸಲ್ಲಿಕೆಗಾಗಿ ಅಧಿಕೃತ ಆನ್‌ಲೈನ್ ಪೋರ್ಟಲ್‌ಗೆ ಹೋಗಿ.
2. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ ಮತ್ತು ನಿಮ್ಮ ಪಾಸ್‌ವರ್ಡ್,ಪ್ಯಾನ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.
3. My Account’ ಗೆ ಹೋಗಿ  ಲಾಗ್ ಇನ್ ಆಗಿ.
4. ನಿಮ್ಮ ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ನೋಡಲು Refund/Demand Status” ಬಟನ್ ಮೇಲೆ ಕ್ಲಿಕ್ ಮಾಡಿ.

NSDL TIN ವೆಬ್‌ಸೈಟ್ ಮೂಲಕ ಮರುಪಾವತಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ? : 
1. NSDL TIN ವೆಬ್‌ಸೈಟ್‌ಗೆ ಭೇಟಿ ನೀಡಿ.
2. ಮೌಲ್ಯಮಾಪನ ವರ್ಷ ಮತ್ತು PAN ಅನ್ನು ನಮೂದಿಸಿ.
3. ನಿಮ್ಮ ಮರುಪಾವತಿಯ ಸ್ಥಿತಿಯನ್ನು ವೀಕ್ಷಿಸಲು, " “Proceed.” ಕ್ಲಿಕ್ ಮಾಡಿ.

ಇದನ್ನೂ ಓದಿ :  8ನೇ ತರಗತಿವರೆಗಷ್ಟೇ ಶಾಲೆ !ಪುಟ್ಟದೊಂದು ಗೂಡಿನಲ್ಲಿ ವ್ಯಾಪಾರ !ಆದರೆ ಇಂದು 78,000 ಕೋಟಿಯ ಸಾಮ್ರಾಜ್ಯದ ಒಡೆಯ !40 ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ

ಒಂದು ವೇಳೆ ಆದಾಯ ತೆರಿಗೆ ಮರುಪಾವತಿಯನ್ನು  ಸಮಯಕ್ಕೆ ಸ್ವೀಕರಿಸದಿದ್ದರೆ ಏನು ಮಾಡಬಹುದು ? : 
10 ದಿನಗಳ ನಿಗದಿತ ಅವಧಿಯೊಳಗೆ ಮರುಪಾವತಿಯನ್ನು ಸ್ವೀಕರಿಸದಿದ್ದರೆ, ಆದಾಯ ತೆರಿಗೆ ಇಲಾಖೆಯಿಂದ ಕಳುಹಿಸಲಾದ ಇಮೇಲ್‌ಗಳನ್ನು ಪರಿಶೀಲಿಸಿ ಅಥವಾ ನೀವು ಇ-ಫೈಲಿಂಗ್ ಪೋರ್ಟಲ್ ಮೂಲಕ ಏನಾಗಿದೆ ಎನ್ನುವುದರ  ಮೇಲ್ವಿಚಾರಣೆ ಮಾಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd

Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News