Auto Debit EMI Transaction - ಕರೋನಾದ ಎರಡನೇ  ಅಲೆಯು (Coronavirus Second Wave) ಆರ್ಥಿಕತೆಯ (Economy) ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಇದು ಜನರ ಜೇಬುಗಳ ಮೇಲೂ ಕೂಡ ಭಾರಿ ಪರಿಣಾಮ ಬೀರಿದೆ. ಕಳೆದ ಮೂರು ತಿಂಗಳುಗಳಲ್ಲಿ ಸ್ವಯಂಚಾಲಿತವಾಗಿ ಡೆಬಿಟ್ ಮಾಡಲಾದ ಇಎಂಐಗಳ (Auto Debit EMI Transaction Fail) ವೈಫಲ್ಯಗಳ ಸಂಖ್ಯೆಯೇ ಇದಕ್ಕೆ ಸಾಕ್ಷಿ ಎಂದರೆ ತಪ್ಪಾಗಲಾರದು. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಪ್ರಕಾರ, ಜೂನ್ ತಿಂಗಳಲ್ಲಿ ಆಟೋ ಡೆಬಿಟ್ ಇಎಂಐ ವೈಫಲ್ಯಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.


COMMERCIAL BREAK
SCROLL TO CONTINUE READING

ಶೇ.37ರಷ್ಟು ವಹಿವಾಟುಗಳು ವಿಫಲವಾಗಿವೆ
National Payments Corporation Of India ಅಂಕಿ-ಅಂಶಗಳ ಪ್ರಕಾರ, ಎಲ್ಲಾ ಬ್ಯಾಂಕ್ ಗಳ ಆಟೋ ಡೆಬಿಟ್ EMI ಸೆಕ್ಷನ್ ಸೇರಿಸಿದರೆ, ಜೂನ್ ತಿಂಗಳಿನಲ್ಲಿ ಒಟ್ಟು ಶೇ.37 ರಷ್ಟು ವಹಿವಾಟುಗಳು ವಿಫಲವಾಗಿವೆ. National Automated Clearing House (NACH) ಜೂನ್ ತಿಂಗಳಿನಲ್ಲಿ ಒಟ್ಟು 8.7 ಕೋಟಿ ರೂ. ಆಟೋ ಡೆಬಿಟ್ EMI ಕೋರಿಕೆಗಳನ್ನು ಸ್ವೀಕರಿಸಲಾಗಿದೆ. ಆದರೆ, ಇವುಗಳಲ್ಲಿ ಶೇ.37ರಷ್ಟು ಅಂದರೆ, 3.2 ಕೋಟಿ ರೂ. ಮೌಲ್ಯದ ವಹಿವಾಟುಗಳು ಬೌನ್ಸ್ ಅಥವಾ ವಿಫಲವಾಗಿವೆ. ಖಾತೆಗಳಲ್ಲಿ ಬೇಕಾಗುವಷ್ಟು ಬ್ಯಾಲೆನ್ಸ್ ಇಲ್ಲದೆ ಇರುವ ಕಾರಣ ಈ ವಹಿವಾಟುಗಳು ವಿಫಲವಾಗಿವೆ.


ಇದನ್ನೂ ಓದಿ- Retail Direct Gilt Account - ಇನ್ಮುಂದೆ ಜನಸಾಮಾನ್ಯರು ಕೂಡ ಸರ್ಕಾರಿ ಭದ್ರತೆಗಳಲ್ಲಿ ಹೂಡಿಕೆ ಮಾಡಬಹುದು, RBI ನೀಡುತ್ತಿದೆ ನಿಮಗೀ ಅವಕಾಶ


ಇನ್ನೊಂದೆಡೆ ಮೇ ತಿಂಗಳಿನಲ್ಲಿ ಒಟ್ಟು 8.5 ಕೋಟಿ ರೂ. ವಹಿವಾಟು ಕೋರಿಕೆಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ 3.08 ಕೋಟಿ ರೂ. ವಹಿವಾಟುಗಳು ಫೇಲ್ ಆಗಿವೆ. ಇದರರ್ಥ ಶೇ.36 ರಷ್ಟು ವಹಿವಾಟುಗಳು ಖಾತೆಗಳಲ್ಲಿ ಬೇಕಾಗುವಷ್ಟು ಹಣ ಬಾಕಿ ಇಲ್ಲದೆ ಇರುವ ಕಾರಣ ವಿಫಲವಾಗಿದ್ದವು ಹಾಗೂ ಏಪ್ರಿಲ್ ತಿಂಗಳಿನಲ್ಲಿ ಒಟ್ಟು ಶೇ.34 ರಷ್ಟು ಆಟೋ ಡೆಬಿಟ್ EMI ವಹಿವಾಟುಗಳು ವಿಫಲವಾಗಿದ್ದವು.


ಹಣದ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಕಳೆದ ಜೂನ್ ಹಾಗೂ ಮೇ ತಿಂಗಳಿನಲ್ಲಿ ಸತದ ಒಟ್ಟು ಆಟೋ ಡೆಬಿಟ್ ರಾಶಿಯ ಶೇ.30ರಷ್ಟು ವಹಿವಾಟುಗಳು ವಿಫಲವಾಗುತ್ತಿವೆ. ಏಪ್ರಿಲ್ ನಲ್ಲಿ ಶೇ.27.9 ರಷ್ಟು ವಹಿವಾಟುಗಳು ಫೇಲ್ ಆಗಿವೆ. 


ಇದನ್ನೂ ಓದಿ-SBI Alert! ನಿಮ್ಮ ಫೋನ್ ಗೂ ಈ ಸಂದೇಶ ಬಂದಿದೇಯಾ? ಹುಷಾರ್ ಕ್ಲಿಕ್ಕಿಸಬೇಡಿ


ಜನರ CIBIL Score ಹಾಳಾಗುತ್ತಿದೆ 
ಖಾತೆಗಳಲ್ಲಿ ಸಾಕಾಗುವಷ್ಟು ಹಣ ಇಲ್ಲದೆ ಇರುವ ಕಾರಣ ವಹಿವಾಟುಗಳಲ್ಲಿನ ವಿಫಲತೆ ಗ್ರಾಹಕರ CIBIL ಸ್ಕೋರ್ ಮೇಲೂ ಕೂಡ ಪ್ರಭಾವ ಬೀರುತ್ತದೆ. ಆನ್ಲೈನ್ ಹೊರತಾಗಿಯೂ ಕೂಡ ಜನರು ತಮ್ಮ EMI ಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡಲು ವಿಫಲರಾಗುತ್ತಿದ್ದಾರೆ. ಕಳೆದ ಮೂರು ತಿಂಗಳಿನಲ್ಲಿ ಹೆಚ್ಚಾಗುತ್ತಿರುವ ಆಟೋ ಡೆಬಿಟ್ ವಹಿವಾಟುಗಳ ವಿಫಲತೆಯ ಸಂಖ್ಯೆ, ಕೊರೊನಾ ಎರಡನೇ ಅಲೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ನೀಡಿದೆ ಎಂಬುದನ್ನು ಎತ್ತಿತೋರಿಸುತ್ತಿವೆ.


ಇದನ್ನೂ ಓದಿ-Just For First Time MF Investors: ನೂತನ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಇಲ್ಲಿವೆ ಕೆಲ ಸಲಹೆಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ