SBI Alert! ನಿಮ್ಮ ಫೋನ್ ಗೂ ಈ ಸಂದೇಶ ಬಂದಿದೇಯಾ? ಹುಷಾರ್ ಕ್ಲಿಕ್ಕಿಸಬೇಡಿ

SBI KYC Scam - ಪ್ರಸ್ತುತ ಹೊಸ ರೀತಿಯ ಬ್ಯಾಂಕ್ ವಂಚನೆಗಳು ಜನರನ್ನುಗುರಿಯಾಗಿಸುತ್ತಿವೆ. ಈ ವಂಚನೆಗಳಿಂದ ರಕ್ಷಿಸಿಕೊಳ್ಳಲು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI (State Bank Of India) ತನ್ನ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ನೀವು ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ನೀವು ಓದಲೇಬೇಕು.

Written by - Nitin Tabib | Last Updated : Jul 13, 2021, 03:23 PM IST
  • ಪ್ರಸ್ತುತ ಹೊಸ ರೀತಿಯ ಬ್ಯಾಂಕ್ ವಂಚನೆಗಳು ಜನರನ್ನುಗುರಿಯಾಗಿಸುತ್ತಿವೆ.
  • ಈ ವಂಚನೆಗಳಿಂದ ರಕ್ಷಿಸಿಕೊಳ್ಳಲು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI
    ತನ್ನ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ.
  • ನೀವು ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ನೀವು ಓದಲೇಬೇಕು.
SBI Alert! ನಿಮ್ಮ ಫೋನ್ ಗೂ ಈ ಸಂದೇಶ ಬಂದಿದೇಯಾ? ಹುಷಾರ್ ಕ್ಲಿಕ್ಕಿಸಬೇಡಿ  title=
SBI Alert (File Photo)

SBI OTP Scam - ಪ್ರಸ್ತುತ ಹೊಸ ರೀತಿಯ ಬ್ಯಾಂಕ್ ವಂಚನೆಗಳು ಜನರನ್ನುಗುರಿಯಾಗಿಸುತ್ತಿವೆ. ಈ ವಂಚನೆಗಳಿಂದ ರಕ್ಷಿಸಿಕೊಳ್ಳಲು ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ SBI (State Bank Of India) ತನ್ನ ಗ್ರಾಹಕರಿಗೆ ಪದೇ ಪದೇ ಎಚ್ಚರಿಕೆ ನೀಡುತ್ತಿದೆ. ನೀವು ಒಂದು ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದರೆ, ಈ ಸುದ್ದಿಯನ್ನು ನೀವು ಓದಲೇಬೇಕು. ಇತ್ತೀಚೆಗೆ ಎಸ್‌ಬಿಐ ತನ್ನ ಗ್ರಾಹಕರಿಗೆ ಕೆವೈಸಿ ಹಗರಣದ ಬಗ್ಗೆ ಮಾಹಿತಿ ನೀಡಿದೆ. ಸೈಬರ್‌ಪೀಸ್ ಫೌಂಡೇಶನ್‌ನ ವರದಿಯ ಪ್ರಕಾರ, KYC ಸ್ಕ್ಯಾಮ್ (KYC Scam) ಹೆಸರಿನಡಿ ಗ್ರಾಹಕರಿಗೆ SMS ಮೂಲಕ ಲಿಂಕ್ ವೊಂದನ್ನು ಕಳುಹಿಸಲಾಗುತ್ತಿದ್ದು, ಲಿಂಕ್ ಮೇಲೆ ಕ್ಲಿಕ್ಕಿಸುವ ಗ್ರಾಹಕರ ಆನ್ಲೈನ್ ಗೆ ಸಂಬಂಧಿಸಿದ ಮಾಹಿತಿಯನ್ನು ಕಳುವು ಮಾಡಲಾಗುತ್ತಿದೆ. ಹಾಗಾದರೆ ಬನ್ನಿ ಈ OTP ಸ್ಕ್ಯಾಮ್ ಗೆ ಸಂಬಂಧಿಸಿದ ಎಲ್ಲ ಮಾಹಿತಿ ಹಾಗೂ ಹೇಗೆ ಇದರಿಂದ ಪಾರಾಗಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

>> ವಂಚನೆ SMS ಮೂಲಕ ಆರಂಭಗೊಳ್ಳುತ್ತದೆ. SMS ಮೂಲಕ ಬ್ಯಾಂಕ್ ನಿಮ್ಮ KYC ಮಾಹಿತಿಯನ್ನು ಅಪ್ಡೇಟ್ ಮಾಡುತ್ತಿದೆ ಎಂದು ಅದರಲ್ಲಿ ಹೇಳಲಾಗುತ್ತದೆ. ನಿಮ್ಮ SBI KYCಯ ಅವಧಿ ಪೂರ್ಣಗೊಂಡಿದೆ ಎಂದು ಹಿಮಗೆ ಮೊದಲು ಮಾಹಿತಿ ನೀಡಲಾಗುತ್ತದೆ. ಇದಕ್ಕಾಗಿ ನಿಮಗೆ ಇ-ಮೇಲ್ ಮೂಲಕವೂ ಕೂಡ ಇದೆ ಮಾಹಿತಿ ಬಂದಿರುತ್ತದೆ. ಹೀಗಿರುವಾಗ ಯಾವುದೇ ಇಂತಹ ಲಿಂಕ್ ಮೇಲೆ ಕ್ಲಿಕ್ಕಿಸುವ ಮೊದಲು ಆ ಮಾಹಿತಿಯ ಕುರಿತು ಚೆಕ್ ಮಾಡಿ .

>> ಲಿಂಕ್ ಮೇಲೆ ಕ್ಲಿಕ್ಕಿಸುತ್ತಿದ್ದಂತೆ ನಿಮಗೆ ಹೊಸದೊಂದು ನಕಲಿ ಬ್ಯಾಂಕ್ ವೆಬ್ ಸೈಟ್ ಗೆ ರೀಡೈರೆಕ್ಟ್ ಮಾಡಲಾಗುತ್ತದೆ. ಹೀಗಿರುವಾಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ ಸೈಟ್  URL "https://retail.onlinesbi.com/retail/login.htm" ಇದೆ ಎಂಬುದು ನಿಮಗೆ ತಿಳಿದಿರಲಿ. ಏಕೆಂದರೆ ನಕಲಿ ವೆಬ್ ಸೈಟ್ URLಇದಕ್ಕಿಂತ ವಿಭಿನ್ನವಾಗಿರುತ್ತದೆ ಮತ್ತು ಇದು https ಬದಲು http ಆಧಾರಿತ ವಾಗಿರಲಿದೆ. .

>> ಒಂದು ವೇಳೆ ನೀವು 'CONTINUE TO LOGIN' ಮೇಲೆ ಕ್ಲಿಕ್ಕಿಸಿದರೆ, ನಿಮಗೆ ನಿಮ್ಮ SBI ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ನಮೂದಿಸಲು ಸೂಚಿಸಲಾಗುತ್ತದೆ. ಇದರಲ್ಲಿ ಬಳಕೆದಾರರಿಂದ ಬಳಕೆದಾರರ ಹೆಸರು, ಪಾಸ್ವರ್ಡ್ ಹಾಗೂ ಕ್ಯಾಪ್ಚಾ ಕೋಡ್ ಗಳಂತಹ ಗೌಪ್ಯ ಮಾಹಿತಿ ಒಳಗೊಂಡಿರುತ್ತದೆ.

ಇದನ್ನೂ ಓದಿ-Business Opportunity: ನೀವೂ ವ್ಯಾಪಾರ ಆರಂಭಿಸಲು ಬಯಸಿದರೆ ಸರ್ಕಾರ ನೀಡಲಿದೆ 10 ಲಕ್ಷ ರೂ.ಗಳ ಧನ ಸಹಾಯ

>> ಒಂದೊಮ್ಮೆ ಗ್ರಾಹಕರು ಬಳಕೆದಾರರ ಐಡಿ ಹಾಗೂ ಪಾಸ್ವರ್ಡ್ ನಮೂದಿಸುತ್ತಿದ್ದಂತೆ, SBI ಗ್ರಾಹಕರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗಿರುವ OTP ನಮೂದಿಸಲು ಸೂಚಿಸಲಾಗುತ್ತದೆ ಮತ್ತು ನಂತರ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಈ ಹೊಸ ಪುಟದಲ್ಲಿ ಬಳಕೆದಾರರಿಗೆ ಖಾತೆದಾರಣ ಹೆಸರು, ಮೊಬೈಲ್ ಸಂಖ್ಯೆ, ಜನನ ತಿಥಿ ನಮೂದಿಸಲು ಸೂಚಿಸಲಾಗುತ್ತದೆ. ಒಂದೊಮ್ಮೆ ಖಾತೆದಾರರು ಅಥವಾ ಬಳಕೆದಾರರು ಈ ಮಾಹಿತಿಯನ್ನು ಹಂಚಿಕೊಂಡ ಬಳಿಕ, ಮತ್ತೆ OTP ಪುಟಕ್ಕೆ ರೀಡೈರೆಕ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ-Jan Dhan Account Update : ಈ 6 ಬ್ಯಾಂಕುಗಳಲ್ಲಿ Jan Dhan ಖಾತೆ ಇದೆಯಾ? ಹಾಗಿದ್ರೆ ಮನೆಯಲ್ಲಿ ಕುಳಿತು 'ಬ್ಯಾಲೆನ್ಸ್ ಚೆಕ್' ಮಾಡಬಹುದು!

SBI OTP Scam ಹಿಂದಿನ ಉದ್ದೇಶವೇನು? 
ಸೈಬರ್ ಫೌಂಡೇಶನ್ ರಿಸರ್ಚ್ ವಿಂಗ್ ಹಾಗೂ ಆಟೋಬೊಟ್ ಸಂಶೋಧನೆಯ ಪ್ರಕಾರ ವಂಚಕರು ಬಳಕೆದಾರರ ಹೆಸರು, ಪಾಸ್ವರ್ಡ್, ಅಕೌಂಟ್ ಹೋಲ್ಡರ್ ನೇಮ್, ಮೊಬೈಲ್ ಸಂಖ್ಯೆ, ಜನನ ದಿನಾಂಕಗಳಂತಹ ಗೌಪ್ಯ ಮಾಹಿತಿಯನ್ನು ಕಳೆಹಾಕುವುದಾಗಿದೆ. ಪ್ರತಿ ಬಾರಿ ಬಳಕೆದಾರರು ಎಸ್‌ಬಿಐನ ಅಧಿಕೃತ ವೆಬ್‌ಸೈಟ್‌ನಲ್ಲಿ ವಹಿವಾಟು ನಡೆಸಿದಾಗ ಅಥವಾ ಅವರ ಪ್ರೊಫೈಲ್ ಅನ್ನು ಬದಲಾಯಿಸಿದಾಗ, ಒಟಿಪಿ ಅನ್ನು ಬಳಕೆದಾರರಿಗೆ ಕಳುಹಿಸಲಾಗುತ್ತದೆ. ಇಂತಹ ಮಾಹಿತಿಯನ್ನು ಪಡೆಯುವ ಮೂಲಕ ಸ್ಕ್ಯಾಮರ್‌ಗಳು ನಿಮ್ಮನ್ನು ನಂತರ ಆರ್ಥಿಕ ವಂಚನೆಗೆ ಗುರಿಯಾಗಿಸಬಹುದು. ಇದಕ್ಕಾಗಿ ನೀವು ಯಾವುದೇ ಅಪರಿಚಿತ ಲಿಂಕ್‌ನಲ್ಲಿ ಯಾವುದೇ ರೀತಿಯ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳದಿರುವುದು ಅವಶ್ಯಕ. ಈ ರೀತಿ ಮಾಡುವ ಮೂಲಕ ಮಾತ್ರ ನೀವು ನಂತರ ಎಸಗಲಾಗುವ ವಂಚನೆಯನ್ನು ತಪ್ಪಿಸಬಹುದು.

ಇದನ್ನೂ ಓದಿ-Earn Money Idea : ಈ ₹1 ನೋಟು ನಿಮ್ಮಲಿದ್ರೆ ನೀವು ನಿಮಿಷಗಳಲ್ಲಿ ಗಳಿಸಬಹುದು ₹7 ಲಕ್ಷ : ಹೇಗೆ ಇಲ್ಲಿ ನೋಡಿ 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News