ನವದೆಹಲಿ: Auto Debit Payments- ವಿದ್ಯುತ್ ಬಿಲ್, ಮೊಬೈಲ್ ಬಿಲ್ ಅಥವಾ ಇತರೆ ಯುಟಿಲಿಟಿ ಬಿಲ್ ಸ್ವಯಂ ಡೆಬಿಟ್ ಆಗುವಂತೆ ಮಾಡುವ ಕೋಟಿಗಟ್ಟಲೆ ಗ್ರಾಹಕರಿಗೆ ಮಹತ್ವದ ಮಾಹಿತಿ ಇದೆ. ಹೆಚ್ಚುವರಿ ಫ್ಯಾಕ್ಟರ್ ದೃಢೀಕರಣಕ್ಕಾಗಿ (AFA) ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ, ಅದರ ಪ್ರಕಾರ ಅಕ್ಟೋಬರ್ 1 ರಿಂದ ಆಟೋ ಡೆಬಿಟ್ ಪಾವತಿ ವ್ಯವಸ್ಥೆಯು ಬದಲಾಗುತ್ತದೆ. 


COMMERCIAL BREAK
SCROLL TO CONTINUE READING

ಅಕ್ಟೋಬರ್ 1 ರಿಂದ ಆಟೋ ಡೆಬಿಟ್ ಪಾವತಿಗಳು ಸಿಕ್ಕಿಹಾಕಿಕೊಳ್ಳಬಹುದು!
ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು (Digital Payments) ಹೆಚ್ಚು ಸುರಕ್ಷಿತಗೊಳಿಸುವ ಉದ್ದೇಶದಿಂದ ಹೆಚ್ಚುವರಿ ಫ್ಯಾಕ್ಟರ್ ದೃಢೀಕರಣವನ್ನು (AFA) ಜಾರಿಗೆ ತರಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಮಾರ್ಗಸೂಚಿ ಹೊರಡಿಸಿದೆ. ಪುನರಾವರ್ತಿತ ಆನ್‌ಲೈನ್ ಪಾವತಿಗಳಲ್ಲಿ ಗ್ರಾಹಕರ ಹಿತಾಸಕ್ತಿ ಮತ್ತು ಅನುಕೂಲತೆಯನ್ನು ಗಮನದಲ್ಲಿಟ್ಟುಕೊಂಡು, ವಂಚನೆಗಳಿಂದ ಅವರನ್ನು ರಕ್ಷಿಸಲು ಎಎಫ್‌ಎ ಬಳಸಿ ಚೌಕಟ್ಟನ್ನು ತಯಾರಿಸಲು ನಿರ್ದೇಶಿಸಲಾಯಿತು. ಆದರೆ IBA ಯ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಅದರ ಅನುಷ್ಠಾನದ ಗಡುವು ಮಾರ್ಚ್ 31, 2021 ರಿಂದ ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲ್ಪಟ್ಟಿತು, ಇದರಿಂದ ಬ್ಯಾಂಕುಗಳು ಈ ಚೌಕಟ್ಟನ್ನು ಕಾರ್ಯಗತಗೊಳಿಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು ಎನ್ನಲಾಗಿದೆ.


ಎರಡನೇ ಬಾರಿಗೆ ಗಡುವು ವಿಸ್ತರಿಸಲಾಗಿತ್ತು: 
ಆದಾಗ್ಯೂ, ಈ ಮೊದಲು ರಿಸರ್ವ್ ಬ್ಯಾಂಕ್ 2020 ರ ಡಿಸೆಂಬರ್ 31 ರಲ್ಲಿ ಬ್ಯಾಂಕ್‌ಗಳಿಗೆ ಮಾರ್ಚ್ 31, 2021 ರೊಳಗೆ ಫ್ರೇಮ್‌ವರ್ಕ್ ಅನ್ನು ಕಾರ್ಯಗತಗೊಳಿಸಲು ಸಿದ್ಧಪಡಿಸುವಂತೆ ಸೂಚಿಸಿತ್ತು. ಪದೇ ಪದೇ ಅವಕಾಶಗಳನ್ನು ನೀಡಿದ ನಂತರವೂ ಈ ಚೌಕಟ್ಟನ್ನು ಕಾರ್ಯಗತಗೊಳಿಸಲಾಗಿಲ್ಲ. ಇದು ಬಹಳ ಕಳವಳಕಾರಿ ವಿಷಯವಾಗಿದೆ, ಇದನ್ನು ಪ್ರತ್ಯೇಕವಾಗಿ ಚರ್ಚಿಸಲಾಗುವುದು ಎಂದು ರಿಸರ್ವ್ ಬ್ಯಾಂಕ್ (Reserve Bank) ಹೇಳಿತ್ತು. ಆದರೆ ಬ್ಯಾಂಕುಗಳ ಸಿದ್ಧತೆಯಲ್ಲಿನ ವಿಳಂಬದಿಂದಾಗಿ ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ಬ್ಯಾಂಕುಗಳು ಚೌಕಟ್ಟಿಗೆ ಬದಲಿಸಲು ಆರ್‌ಬಿಐ ಮತ್ತೆ 30 ಸೆಪ್ಟೆಂಬರ್ 2021 ರವರೆಗೆ ಗಡುವು ವಿಸ್ತರಿಸಿತ್ತು. ಅದಾಗ್ಯೂ, ಇದರ ನಂತರವೂ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು. 


ಇದನ್ನೂ ಓದಿ- UPI Payment Without Internet: ಇಂಟರ್ನೆಟ್ ಇಲ್ಲದೆ ಯುಪಿಐ ಪಾವತಿ ಮಾಡಲು ಸುಲಭ ಮಾರ್ಗ


ಗಮನಿಸಬೇಕಾದ ಸಂಗತಿಯೆಂದರೆ ಈ ಆರ್‌ಬಿಐ (RBI) ಮಾರ್ಗಸೂಚಿಗಳನ್ನು ಏಪ್ರಿಲ್ 1 ರಿಂದ ಜಾರಿಗೊಳಿಸಿದರೆ, ದೇಶದ ಕೋಟ್ಯಂತರ ಗ್ರಾಹಕರು ತೊಂದರೆಗೆ ಸಿಲುಕುತ್ತಿದ್ದರು. ಏಕೆಂದರೆ ಡೆಬಿಟ್ ಕಾರ್ಡ್ (Debit Card) ಅಥವಾ ಕ್ರೆಡಿಟ್ ಕಾರ್ಡ್ (Credit Card) ಆಟೋ ಡೆಬಿಟ್ ಪಾವತಿಗಳನ್ನು ಹೊಂದಿರುವ ಗ್ರಾಹಕರಿಗೆ ಇದರಿಂದ ತೊಂದರೆ ಆಗುತ್ತಿತ್ತು.


ಆರ್‌ಬಿಐನ ಹೊಸ ಮಾರ್ಗಸೂಚಿಗಳು ಇಲ್ಲಿವೆ: 
ಆರ್‌ಬಿಐನ ಹೊಸ ನಿಯಮಗಳ ಪ್ರಕಾರ, ಬ್ಯಾಂಕ್ ಪಾವತಿ ದಿನಾಂಕಕ್ಕಿಂತ 5 ದಿನಗಳ ಮೊದಲು ಅಧಿಸೂಚನೆಯನ್ನು ಕಳುಹಿಸಬೇಕಾಗುತ್ತದೆ, ಗ್ರಾಹಕರು ಅನುಮೋದನೆ ನೀಡಿದಾಗ ಮಾತ್ರ ಪಾವತಿಯನ್ನು ಅನುಮೋದಿಸಲಾಗುತ್ತದೆ. ಮರುಕಳಿಸುವ ಪಾವತಿ 5000 ರೂ. ಮೀರಿದರೆ ಬ್ಯಾಂಕ್‌ಗಳು ಗ್ರಾಹಕರಿಗೆ ಒಂದು ಬಾರಿ ಪಾಸ್‌ವರ್ಡ್ (OTP) ಕಳುಹಿಸಬೇಕು. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ಕ್ರಮ ಕೈಗೊಂಡಿದೆ. 


ಇದನ್ನೂ ಓದಿ-  Card Tokenisation Rules: ಆರ್‌ಬಿಐ ಕಾರ್ಡ್ ಟೋಕನೈಸೇಶನ್ ನಿಯಮ, ಜನವರಿ 1 ರಿಂದ ಬದಲಾಗಲಿದೆ Card Payment Method


ಈ ಹಿಂದೆ, ರಿಸರ್ವ್ ಬ್ಯಾಂಕ್ ಎಲ್ಲಾ ಬ್ಯಾಂಕ್‌ಗಳು, ಪಾವತಿ ಗೇಟ್‌ವೇಗಳು ಮತ್ತು ಇತರ ಸೇವಾ ಪೂರೈಕೆದಾರರಿಗೆ ಕಾರ್ಡ್ ವಿವರಗಳನ್ನು ಶಾಶ್ವತವಾಗಿ ಸಂಗ್ರಹಿಸದಂತೆ ಕೇಳಿದ್ದು, ಮರುಕಳಿಸುವ ಪಾವತಿಗಳನ್ನು ಹೆಚ್ಚು ಕಷ್ಟಕರವಾಗಿಸಿತ್ತು. ಆದಾಗ್ಯೂ, Juspay ಮತ್ತು ನಿಯೋ ಬ್ಯಾಂಕಿಂಗ್ ಸ್ಟಾರ್ಟ್ಅಪ್ Chqbook ನಲ್ಲಿ ಡೇಟಾ ಸೋರಿಕೆಯಾದ ನಂತರ RBI ಈ ಕ್ರಮ ಕೈಗೊಂಡಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ