Ayushman Card: ಆಯುಷ್ಮಾನ್ ಭಾರತ್ ಕಾರ್ಡ್ನಲ್ಲಿ ಹಲವು ಸೌಲಭ್ಯಗಳು! ಸುಲಭವಾಗಿ ಡೌನ್ಲೋಡ್ ಮಾಡಿ
ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಕಾರ್ಡ್ ಆರಂಭಿಸಿತ್ತು. ಇದರಲ್ಲಿ ಪ್ರತಿಯೊಬ್ಬ ಕಾರ್ಡುದಾರರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ.
ನವದೆಹಲಿ: ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಲು ಕೇಂದ್ರ ಸರ್ಕಾರವು ‘ಆಯುಷ್ಮಾನ್ ಭಾರತ್ ಕಾರ್ಡ್’ ಯೋಜನೆ ಆರಂಭಿಸಿತ್ತು. ಇದರಲ್ಲಿ ಪ್ರತಿಯೊಬ್ಬ ಕಾರ್ಡುದಾರರಿಗೂ 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಸೌಲಭ್ಯ(Ayushman Card Benefits) ಕಲ್ಪಿಸಲಾಗಿದೆ. ಏತನ್ಮಧ್ಯೆ ಕಳೆದ ಕೆಲವು ದಿನಗಳಲ್ಲಿ ‘ಆಯುಷ್ಮಾನ್ ಕಾರ್ಡ್’ ಹೆಸರಿನಲ್ಲಿ ವಂಚನೆ ಪ್ರಕರಣಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಈ ಯೋಜನೆಯಲ್ಲಿ ವಂಚಕರು ಇನ್ನೊಬ್ಬರ ಹೆಸರಿಗೆ ಕಾರ್ಡ್ ನೀಡಿ ಸೌಲಭ್ಯಗಳ ಲಾಭ ಪಡೆಯುತ್ತಿದ್ದಾರೆ.
ನಿಮಗೂ ಈ ರೀತಿಯ ವಂಚನೆ(Ayushman Card Fraud) ನಡೆದಿದ್ದರೆ ಕೂಡಲೇ ಈ ಬಗ್ಗೆ ಪರಿಶೀಲಿಸಿ ದೂರು ನೀಡಬೇಕು. ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಹೆಸರಿನಲ್ಲಿ ಲಭ್ಯವಿರುವ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ, ತಕ್ಷಣವೇ ಆಯುಷ್ಮಾನ್ ಕಾರ್ಡ್‌ಗೆ ಸಂಬಂಧಿಸಿದ ದೂರು ನೀಡಿ.
ಇದನ್ನೂ ಓದಿ: SBI Base Rate : SBI ಗ್ರಾಹಕರಿಗೆ ಬಿಗ್ ಶಾಕ್! ಬಡ್ಡಿದರ ಹೆಚ್ಚಿಸಿದೆ ಬ್ಯಾಂಕ್, ಹೊಸ ದರ ಇಲ್ಲಿ ಪರಿಶೀಲಿಸಿ
ಈ ಸಂಖ್ಯೆಗೆ ದೂರು ನೀಡಿ
ನಿಮಗೆ ಅಥವಾ ನಿಮ್ಮಲ್ಲಿ ಯಾರಿಗಾದರೂ ಈ ರೀತಿಯ ಆಯುಷ್ಮಾನ್ ಕಾರ್ಡ್(Ayushman Bharat Yojna) ದುರ್ಬಳಕೆ ಆಗಿದ್ದರೆ ಇದರ ಬಗ್ಗೆ ನೀವು ದೂರು ನೀಡಬಹುದು. ಇಂತಹ ವಂಚನೆಗಳಿಗೆ ಸರ್ಕಾರ ಟೋಲ್ ಫ್ರೀ ಸಂಖ್ಯೆ ನೀಡಿದೆ. ನಿಮಗೂ ಈ ರೀತಿ ವಂಚನೆ ಆದಲ್ಲಿ ಕೂಡಲೇ ನೀವು ಟೋಲ್ ಫ್ರೀ ಸಂಖ್ಯೆ 180018004444ಗೆ ಕರೆ ಮಾಡುವ ಮೂಲಕ ನಿಮ್ಮ ದೂರನ್ನು ನೋಂದಾಯಿಸಬಹುದು. ದೂರು ಸಲ್ಲಿಸಲು ನೀವು ಪ್ರಮಾಣೀಕೃತ ದಾಖಲೆಯನ್ನು ಹೊಂದಿರಬೇಕು.
ಸುಲಭವಾಗಿ ‘ಆಯುಷ್ಮಾನ್ ಕಾರ್ಡ್’ ಡೌನ್‌ಲೋಡ್ ಮಾಡಿ
1) ನೀವು ಸಹ ‘ಆಯುಷ್ಮಾನ್ ಭಾರತ್ ಕಾರ್ಡ್’ನ್ನು ಡೌನ್‌ಲೋಡ್(Ayshman Bharat Card Download) ಮಾಡಲು ಬಯಸಿದರೆ, ಇದಕ್ಕಾಗಿ https://pmjay.gov.in/ ವೆಬ್ ಸೈಟ್ ಗೆ ಹೋಗಿ .
2) ಈಗ ಇಲ್ಲಿ ಲಾಗಿನ್ ಆಗಲು ನಿಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ.
3) ಈಗ ಹೊಸ ಪುಟ ತೆರೆಯುತ್ತದೆ. ಬಳಿಕ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಮುಂದುವರಿಯಿರಿ. ಮುಂದಿನ ಪುಟದಲ್ಲಿ ನಿಮ್ಮ ಹೆಬ್ಬೆರಳಿನ ಗುರುತನ್ನು ನೀವು ಪರಿಶೀಲಿಸಬೇಕು.
4) ಈಗ ‘ಅನುಮೋದಿತ ಫಲಾನುಭವಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
5) ಈಗ ನೀವು ಅನುಮೋದಿತ ಗೋಲ್ಡನ್ ಕಾರ್ಡ್‌ಗಳ ಪಟ್ಟಿಯನ್ನು ನೋಡುತ್ತೀರಿ.
6) ಈ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಿ ಮತ್ತು ಕನ್ಫರ್ಮ್ ಪ್ರಿಂಟ್ ಆಯ್ಕೆಯನ್ನು ಕ್ಲಿಕ್ ಮಾಡಿ.
7) ಈಗ ನೀವು CSC ವ್ಯಾಲೆಟ್ ಅನ್ನು ನೋಡುತ್ತೀರಿ. ಅದರಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಿ.
8) ಈಗ ಇಲ್ಲಿ ಪಿನ್ ನಮೂದಿಸಿ ಮತ್ತು ಮುಖಪುಟಕ್ಕೆ ಬನ್ನಿ.
9) ಡೌನ್‌ಲೋಡ್ ಕಾರ್ಡ್ ಆಯ್ಕೆಯು ಅಭ್ಯರ್ಥಿಯ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತದೆ.
10) ಇಲ್ಲಿಂದ ನೀವು ನಿಮ್ಮ ‘ಆಯುಷ್ಮಾನ್ ಕಾರ್ಡ್’ನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ: RBI: ಈ 2 ಬ್ಯಾಂಕುಗಳ ವಿರುದ್ಧ ಆರ್‌ಬಿಐ ಕ್ರಮ, 2.10 ಕೋಟಿ ರೂ. ದಂಡ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.