ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಬುಧವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ (PNB) 1.8 ಕೋಟಿ ರೂ. ಮತ್ತು ಐಸಿಐಸಿಐ ಬ್ಯಾಂಕ್‌ಗೆ ನಿಯಂತ್ರಕ ಅನುಸರಣೆಯ ಕೊರತೆಯಿಂದಾಗಿ(Lack of Regulatory Compliance) 30 ಲಕ್ಷ ರೂ. ದಂಡ ವಿಧಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ದಂಡ
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (PNB) ಕಣ್ಗಾವಲು ಮೌಲ್ಯಮಾಪನ(Surveillance Valuation)ಕ್ಕೆ ಸಂಬಂಧಿಸಿದಂತೆ ಶಾಸನಬದ್ಧ ತನಿಖೆ ನಡೆಸಿದೆ ಎಂದು ಆರ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಈ ತನಿಖೆಯನ್ನು ಮಾರ್ಚ್ 31, 2019ರಂದು ಹಣಕಾಸಿನ ಸ್ಥಿತಿಯನ್ನು ಉಲ್ಲೇಖಿಸಿ ಮಾಡಲಾಗಿದೆ.
ಇದನ್ನೂ ಓದಿ: ನೋಟಿನ ಮೇಲೆ ಈ ಗೆರೆಗಳನ್ನು ಏಕೆ ಮುದ್ರಿಸಲಾಗುತ್ತದೆ? ಇದರ ಅರ್ಥವೇನು, ಅದು ಏಕೆ ಮುಖ್ಯ?
ಈ ತನಿಖೆಯ ಸಮಯದಲ್ಲಿ ಮತ್ತು ವಿವಿಧ ದಾಖಲೆಗಳನ್ನು ಪರಿಶೀಲಿಸಿದ ನಂತರ ಆರ್‌ಬಿಐ, PNBಯ ವಾಗ್ದಾನ ಮಾಡಿದ ಷೇರುಗಳಿಗೆ ಸಂಬಂಧಿಸಿದಂತೆ ತನ್ನ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂಬುದನ್ನು ಕಂಡುಹಿಡಿದಿದೆ.
ಮತ್ತೊಂದೆಡೆ ಐಸಿಐಸಿಐ ಬ್ಯಾಂಕ್(ICICI Bank) ವಿಷಯದಲ್ಲಿ ಮಾರ್ಚ್ 31, 2019ರಂತೆ ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಮಾನಿಟರಿಂಗ್ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಶಾಸನಬದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಆರ್‌ಬಿಐ ಹೇಳಿದೆ.
RBI imposes a penalty of Rs 1.80 crore on Punjab National Bank for contravention of sub-section (2) of section 19 of Banking Regulation Act, 1949: RBI pic.twitter.com/SM6myxanyn
— ANI (@ANI) December 15, 2021
ತನಿಖೆಯ ಸಂದರ್ಭದಲ್ಲಿ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್(Minimum Balance) ಅನ್ನು ನಿರ್ವಹಿಸದಿದ್ದಕ್ಕಾಗಿ ಶುಲ್ಕವನ್ನು ವಿಧಿಸುವ ಸೂಚನೆಗಳನ್ನು ಅನುಸರಿಸುತ್ತಿಲ್ಲ ಎಂದು ಆರ್‌ಬಿಐ ಕಂಡುಹಿಡಿದಿದೆ. ತನ್ನ ನಿಯಮಗಳನ್ನು ಪಾಲಿಸದ ಈ ಎರಡು ಬ್ಯಾಂಕುಗಳಿಗೆ ಆರ್‌ಬಿಐ ಒಟ್ಟು 2.10 ಕೋಟಿ ರೂ. ದಂಡ ವಿಧಿಸಿ ಚುರುಕು ಮುಟ್ಟಿಸಿದೆ.
ಇದನ್ನೂ ಓದಿ: SBI Base Rate : SBI ಗ್ರಾಹಕರಿಗೆ ಬಿಗ್ ಶಾಕ್! ಬಡ್ಡಿದರ ಹೆಚ್ಚಿಸಿದೆ ಬ್ಯಾಂಕ್, ಹೊಸ ದರ ಇಲ್ಲಿ ಪರಿಶೀಲಿಸಿ
ಈ ಹಿಂದೆಯೂ ಅನೇಕ ಬಾರಿ ಆರ್‌ಬಿಐ ಪಂಜಾಬ್ ನ್ಯಾಷನಲ್ ಬ್ಯಾಂಕ್(Punjab National Bank) ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಿತ್ತು. ಅದೇ ರೀತಿ ತನ್ನ ನಿಬಂಧನೆಗಳನ್ನು ಪಾಲಿಸದ ಅನೇಕ ಬ್ಯಾಂಕುಗಳ ವಿರುದ್ಧವೂ ಕ್ರಮ ಕೈಗೊಂಡಿದ್ದ ಆರ್‌ಬಿಐ ದಂಡ ವಿಧಿಸಿ ಬಿಸಿ ಮುಟ್ಟಿಸಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.