ಬೆಂಗಳೂರು : ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಉಚಿತ ಚಿಕಿತ್ಸೆಗಾಗಿ ಆಯುಷ್ಮಾನ್ ಕಾರ್ಡ್‌ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಆಯುಷ್ಮಾನ್ ಕಾರ್ಡ್ ಮಾಡಿಸುವ  ಸಲುವಾಗಿ ಜಿಲ್ಲಾ ಮತ್ತು ತಹಸಿಲ್ ಮಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವಿಶೇಷ ಅಭಿಯಾನವನ್ನು ನಡೆಸಲಾಗುವುದು. ಈ ಅಭಿಯಾನದ ಅಡಿಯಲ್ಲಿ, ಅಂತ್ಯೋದಯ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಿಸುವ ಗುರಿಯನ್ನು ಹೊಂದಲಾಗಿದೆ. 


COMMERCIAL BREAK
SCROLL TO CONTINUE READING

ಜುಲೈ 20ರವರೆಗೆ ನಡೆಯಲಿದೆ ಅಭಿಯಾನ :
ಜನ ಸುವಿಧಾ ಕೇಂದ್ರಗಳಲ್ಲೂ ಈ ಸೌಲಭ್ಯ ಆರಂಭಿಸಲು ಸರಕಾರ ಆದೇಶ ನೀಡಿದೆ. ಅಂತ್ಯೋದಯ ಪಡಿತರ ಚೀಟಿ ತೋರಿಸುವ ಮೂಲಕ ಇಲ್ಲಿಯೂ ಆಯುಷ್ಮಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.  ಉತ್ತರಪ್ರದೇಶದ ಯೋಗಿ ಸರ್ಕಾರ ಎಲ್ಲಾ ಅಂತ್ಯೋದಯ ಕಾರ್ಡ್ ಹೊಂದಿರುವವರ ಆಯುಷ್ಮಾನ್ ಕಾರ್ಡ್‌ಗಳನ್ನು ಮಾಡಲು ಆದೇಶಿಸಿದೆ. ಜುಲೈ 20ರವರೆಗೆ ಜಿಲ್ಲಾ ಮಟ್ಟದಲ್ಲಿ ಈ ಅಭಿಯಾನ ನಡೆಯಲಿದೆ.


ಇದನ್ನೂ ಓದಿ : Bumper Discount on Cars: ಈ ಕಾರುಗಳ ಮೇಲೆ ಸಿಗುತ್ತಿದೆ 94,000 ರೂ.ವರೆಗಿನ ಭರ್ಜರಿ ಡಿಸ್ಕೌಂಟ್


ಇಲ್ಲಿಯವರೆಗೆ ಎಲ್ಲಾ ಅಂತ್ಯೋದಯ ಕಾರ್ಡ್ ಹೊಂದಿರುವವರು ಜುಲೈ 20 ರೊಳಗೆ ತಮ್ಮ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಅರ್ಹ ಫಲಾನುಭವಿಗಳು ತಮ್ಮ ಸಾರ್ವಜನಿಕ ಸೇವಾ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಯುಷ್ಮಾನ್ ಪ್ಯಾನೆಲ್ ನಲ್ಲಿ ಹೇಳಲಾದ ಖಾಸಗಿ ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಭೇಟಿ ನೀಡುವ ಮೂಲಕ ಕುಟುಂಬದ ಆಯುಷ್ಮಾನ್ ಕಾರ್ಡ್ ಅನ್ನು  ಪಡೆಯಬಹುದು. 


ಯಾರಿಗೆ ಸಿಗಲಿದೆ ಅಂತ್ಯೋದಯ ಕಾರ್ಡ್ ? :
ಅಂತ್ಯೋದಯ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುತ್ತದೆ. ಈ ಕಾರ್ಡ್‌ನಲ್ಲಿ ಪ್ರತಿ ತಿಂಗಳು ಫಲಾನುಭವಿಗಳಿಗೆ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ. ಕಾರ್ಡುದಾರರಿಗೆ 35 ಕೆಜಿ ಗೋಧಿ ಮತ್ತು ಅಕ್ಕಿ ನೀಡಲಾಗುತ್ತದೆ. ಕೆಜಿಗೆ 2 ರೂಗೆ ಗೋಧಿ ಮತ್ತು ಕೆಜಿಗೆ 3 ರೂ.ಗೆ ಅಕ್ಕಿ ನೀಡಲಾಗುತ್ತೆ. 


ಇದನ್ನೂ ಓದಿ : Vegetable Price: ಮತ್ತೆ ಹೆಚ್ಚಳವಾಯ್ತ ತರಕಾರಿ ಬೆಲೆ? ಈರುಳ್ಳಿ, ಟೊಮೆಟೋ ದರ ವಿವರ ಹೀಗಿದೆ ನೋಡಿ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.