ಕಾರುಗಳ ಮೇಲೆ ಭರ್ಜರಿ ರಿಯಾಯಿತಿ : ಆಷಾಢ ಮಾಸದಲ್ಲಿ ರೆನಾಲ್ಟ್ ಇಂಡಿಯಾ ತನ್ನ ಕಾರುಗಳ ಮೇಲೆ ತನ್ನ ಜನಪ್ರಿಯ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ರೆನಾಲ್ಟ್ ಇಂಡಿಯಾ ಜುಲೈ ತಿಂಗಳಿನಲ್ಲಿ ತನ್ನ ಟ್ರೈಬರ್ ಎಂಪಿವಿ, ಕ್ವಿಡ್ ಹ್ಯಾಚ್‌ಬ್ಯಾಕ್ ಮತ್ತು ಕಿಗರ್ ಎಸ್ಯುವಿ ಕಾರುಗಳ ಮೇಲೆ ಈ ಕೊಡುಗೆಗಳನ್ನು ನೀಡುತ್ತಿದೆ. ಈ ಕೊಡುಗೆಗಳು ನಗದು ರಿಯಾಯಿತಿಗಳು, ವಿನಿಮಯ ಬೋನಸ್, ಲಾಯಲ್ಟಿ ಪ್ರಯೋಜನಗಳು ಮತ್ತು ಸ್ಕ್ರ್ಯಾಪೇಜ್ ನೀತಿ ಕಾರ್ಯಕ್ರಮದ ಪ್ರಯೋಜನಗಳನ್ನು ಒಳಗೊಂಡಿವೆ. ಯಾವ ಕಾರಿನ ಮೇಲೆ ಎಷ್ಟು ರಿಯಾಯಿತಿ ಲಭ್ಯವಿದೆ ಎಂದು ತಿಳಿಯಿರಿ.
ರೆನಾಲ್ಟ್ ಟ್ರೈಬರ್‌ನಲ್ಲಿ ಒಟ್ಟು 94,000 ರೂಪಾಯಿಗಳ ರಿಯಾಯಿತಿ ಕೊಡುಗೆ:-
ರೆನಾಲ್ಟ್ ಟ್ರೈಬರ್ ಮೇಲೆ ಲಭ್ಯವಿರುವ ಡಿಸ್ಕೌಂಟ್ ಬಗ್ಗೆ ಹೇಳುವುದಾದರೆ, ಈ ಕಾರಿನ ಮೇಲೆ 40,000 ರೂಪಾಯಿಗಳ ನಗದು ರಿಯಾಯಿತಿ ಲಭ್ಯವಿದೆ. ಇದರಲ್ಲಿ 44,000 ರೂಪಾಯಿಗಳ ಲಾಯಲ್ಟಿ ಲಾಭ ಮತ್ತು ಸ್ಕ್ರ್ಯಾಪೇಜ್ ಪಾಲಿಸಿಯ ಅಡಿಯಲ್ಲಿ 10,000 ರೂಪಾಯಿಗಳ ಕೊಡುಗೆ ಇದೆ. ಇದೆಲ್ಲವನ್ನೂ ಒಳಗೊಂಡಂತೆ, ರೆನಾಲ್ಟ್ ಟ್ರೈಬರ್‌ನಲ್ಲಿ ಒಟ್ಟು 94,000 ರೂಪಾಯಿಗಳ ರಿಯಾಯಿತಿ ಕೊಡುಗೆ ಇದೆ. ರೆನಾಲ್ಟ್ ಟ್ರೈಬರ್ ಎಂಪಿವಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆಯುತ್ತದೆ, ಇದು 5-ಸ್ಪೀಡ್ ಮ್ಯಾನುವಲ್ ಅಥವಾ ಎಎಂಟಿ ಗೇರ್‌ಬಾಕ್ಸ್‌ಗೆ ಸಂಯೋಜಿತವಾಗಿದೆ.
ಇದನ್ನೂ ಓದಿ- ಬೆಂಗಳೂರಿನಿಂದ ಕಾಶಿಗೆ ತೆರಳಬೇಕೇ! ಕರ್ನಾಟಕ ಸರ್ಕಾರದಿಂದ ವಿಶೇಷ ವ್ಯವಸ್ಥೆ
ರೆನಾಲ್ಟ್ ಕ್ವಿಡ್ ಮೇಲೆ ಒಟ್ಟು 77,000 ರೂ.ಗಳ ರಿಯಾಯಿತಿ :
ರೆನಾಲ್ಟ್ ಕ್ವಿಡ್ ಬಗ್ಗೆ ಹೇಳುವುದಾದರೆ, ಇದು ಕಾರು ತಯಾರಕರಿಂದ ಪ್ರವೇಶ ಮಟ್ಟದ ಕೊಡುಗೆಯಾಗಿದೆ ಮತ್ತು 800cc ಎಂಜಿನ್, 1.0-ಲೀಟರ್ ಎಂಜಿನ್, ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಮತ್ತು ಎಎಂಟಿ ಆಯ್ಕೆಯನ್ನು ಒಳಗೊಂಡಿರುವ ಈ ಕಾರು ಬಹು ರೂಪಾಂತರಗಳಲ್ಲಿ ಹೆಚ್ಚು ಮಾರಾಟವಾಗಿರುವ ಜನಪ್ರಿಯಕಾರು. 2021 ಮಾಡೆಲ್ ರೆನಾಲ್ಟ್ ಕ್ವಿಡ್ ಅನ್ನು ರೂ 35,000 ನಗದು ರಿಯಾಯಿತಿ, ರೂ 37,000 ಲಾಯಲ್ಟಿ ಬೋನಸ್ ಮತ್ತು ರೂ 10,000 ಸ್ಕ್ರ್ಯಾಪೇಜ್ ಪಾಲಿಸಿಯ ಪ್ರಯೋಜನಗಳೊಂದಿಗೆ ನೀಡಲಾಗುತ್ತಿದೆ. ಈ ಮಾಡೆಲ್ ಒಟ್ಟು 82,000 ರೂ. ರಿಯಾಯಿತಿಯನು ಪಡೆಯುತ್ತಿದೆ.
2022 ಮಾಡೆಲ್ ರೆನಾಲ್ಟ್ ಕ್ವಿಡ್ ರೂ. 30,000 ನಗದು ರಿಯಾಯಿತಿ, ರೂ. 37000 ಲಾಯಲ್ಟಿ ಬೋನಸ್ ಮತ್ತು ರೂ. 10000 ಸ್ಕ್ರ್ಯಾಪೇಜ್ ಪಾಲಿಸಿಯ ಪ್ರಯೋಜನಗಳೊಂದಿಗೆ ಇದರ ಮೇಲೆ ಒಟ್ಟು 77,000 ರೂ.ಗಳ ರಿಯಾಯಿತಿ ಆಫರ್ ಲಭ್ಯವಿದೆ.
ಇದನ್ನೂ ಓದಿ- ಪಡಿತರ ಚೀಟಿದಾರರಿಗೆ ಸಿಗುತ್ತೆ ಉಚಿತ ಎಲ್‌ಪಿಜಿ ಸಿಲಿಂಡರ್!
ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಒಟ್ಟು 75,000ರೂ. ಕೊಡುಗೆ:
ಅದೇ ಸಮಯದಲ್ಲಿ, Renault Kieger SUV ಎರಡು ಎಂಜಿನ್ಗಳ ಆಯ್ಕೆಯನ್ನು ಪಡೆಯುತ್ತದೆ - 1.0-ಲೀಟರ್ ಟರ್ಬೊ ಪೆಟ್ರೋಲ್ ಮತ್ತು 1.0-ಲೀಟರ್ ನ್ಯಾಚುರಲ್ ಎಸ್ಪಿರೇಟೆಡ್. ಇದು ಮ್ಯಾನುವಲ್ ಮತ್ತು CVT ಗೇರ್‌ಬಾಕ್ಸ್ ಆಯ್ಕೆಯನ್ನು ಸಹ ಪಡೆಯುತ್ತದೆ. ಕಿಗರ್ ಕಾಂಪ್ಯಾಕ್ಟ್ ಎಸ್‌ಯುವಿಯಲ್ಲಿ ಒಟ್ಟು ರೂ 75,000 ಕೊಡುಗೆಗಳನ್ನು ನೀಡಲಾಗುತ್ತಿದೆ, ಇದರಲ್ಲಿ ರೂ. 55,000 ಲಾಯಲ್ಟಿ ಪ್ರಯೋಜನ, ರೂ. 10,000 ಕಾರ್ಪೊರೇಟ್ ಕೊಡುಗೆ ಮತ್ತು ರೂ. 10,000 ಸ್ಕ್ರ್ಯಾಪೇಜ್ ಪಾಲಿಸಿ ಪ್ರಯೋಜನವನ್ನು ಒಳಗೊಂಡಿದೆ.
ಗಮನಿಸಿ: ಈ ಕೊಡುಗೆಗಳು ನಗರ, ಪ್ರದೇಶ ಮತ್ತು ಶೋರೂಮ್‌ಗೆ ಅನುಗುಣವಾಗಿ ಬದಲಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.