Bajaj Chetak E-scooter Booking - ಸ್ವದೇಶಿ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿ ಬಜಾಜ್ ನ ಹೊಸ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಅಂದರೆ ಜುಲೈ 22ರಿಂದ ಆರಂಭಗೊಳ್ಳುತ್ತಿದೆ. ಆದರೆ, ಪ್ರಸ್ತುತ ದೇಶದ ಮೂರು ನಗರಗಳ ಜನರಿಗಾಗಿ ಮಾತ್ರ ಈ ಬುಕಿಂಗ್ ತೆರೆದುಕೊಳ್ಳಲಿದೆ. ಮಾಹಿತಿಗಳ ಪ್ರಕಾರ ಮೈಸೂರು, ಮಂಗಳೂರು ಹಾಗೂ ಔರಂಗಾಬಾದ್ ನಗರಗಳಲ್ಲಿ ಇಂದಿನಿಂದ ಬುಕಿಂಗ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಅಂದರೆ, ಒಂದು ವೇಳೆ ನೀವು ಈ ಮೂರು ನಗರಗಳಲ್ಲಿ ಯಾವುದಾದರೊಂದು ನಗರಗಳಲ್ಲಿ ವಾಸಿಸುತ್ತಿದ್ದರೆ, ನೀವೂ ಕೂಡ ಈ ಇ-ಸ್ಕೂಟರ್ ಗಾಗಿ ಬುಕಿಂಗ್ (e-Scooter) ಮಾಡಬಹುದು. ಇದಕ್ಕಾಗಿ ನೀವು ಕಂಪನಿಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಲ್ಲಿ ಕೇಳಲಾಗುವ ಮಾಹಿತಿ ನೀಡಿ ನಿಮ್ಮ ಹೆಸರನ್ನು ನೊಂದಾಯಿಸಬಹುದು. ಬುಕಿಂಗ್ ತೆರೆದುಕೊಳ್ಳುವ ಮೊದಲು ಕೂಡ ನೀವು ಈ ಕೆಲಸ ಮಾಡಬಹುದು. ಇದರಿಂದ ಬುಕಿಂಗ್ ಟೈಮ್ ನಲ್ಲಿ ನಿಮಗೆ ಇನ್ನಷ್ಟು ಅನುಕೂಲವಾಗಲಿದೆ.


COMMERCIAL BREAK
SCROLL TO CONTINUE READING

ಬಜಾಜ್ ಚೇತಕ್ (Bajaj Chetak) ಹಾಗೂ ಇತರೆ ಪ್ರಿಮಿಯಂ ಇಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿ ಈಗಾಗಲೇ ಛಾಪು ಮೂಡಿಸಿರುವ ಓಲಾ ಸ್ಕೂಟರ್ (Ola e-Scooter) ಜೊತೆಗೆ ಪೈಪೋಟಿ ನಡೆಸಲಿವೆ. ಓಲಾ ಸ್ಕೂಟರ್ ನ ಮಾರುಕಟ್ಟೆಯ ಕ್ರೇಜ್ ಕುರಿತು ಹೇಳುವುದಾದರೆ, ಈ ಇ-ಸ್ಕೂಟರ್ ಬುಕಿಂಗ್ ಆರಂಭಗೊಂಡ ಕೇವಲ 24 ಗಂಟೆಯೊಳಗೆ ಸುಮಾರು 1 ಲಕ್ಷ ಆರ್ಡರ್ ಗಳು ದೊರೆತಿವೆ.


ಇದನ್ನೂ ಓದಿ- ಶುಭ ಸುದ್ದಿ: ಬೈಕ್ ಖರೀದಿಗೆ ಸರ್ಕಾರದಿಂದ ₹ 25 ಸಾವಿರ ಸಹಾಯಧನ


ಒಂದು ಬಾರಿಯ ಚಾರ್ಜಿಂಗ್ ನಲ್ಲಿ 95 ಕಿ.ಮೀ ಓಟ
ಬಜಾಜ್ ಚೇತಕ್ ಸ್ಕೂಟರ್ 3.8 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್ ಮೂಲಕ ತನ್ನ ಶಕ್ತಿ ಪಡೆಯುತ್ತದೆ. ಈ ಮೋಟರ್‌ ಸಹಾಯದಿಂದ 5 ಅಶ್ವಶಕ್ತಿ ಶಕ್ತಿ ಮತ್ತು 16.2 ಎನ್ಎಂ ಟಾರ್ಕ್ ಉತ್ಪಾದಿಸಬಹುದು. ಈ ಮೋಟರ್‌ನ ಹೊರತಾಗಿ, ಬಜಾಜ್‌ನ ಇ-ಸ್ಕೂಟರ್ 3 ಕಿ.ವ್ಯಾ. ಲಿಥಿಯಂ-ಐಯಾನ್ ಬ್ಯಾಟರಿಅಳವಡಿಸಲಾಗಿದೆ, ಇದು ಪೂರ್ಣ ಚಾರ್ಜ್‌ನಲ್ಲಿ ಇಕೋ ಮೋಡ್‌ನಲ್ಲಿ 95 ಕಿ.ಮೀ.ವರೆಗೆ ಮೈಲೇಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗರಿಷ್ಠ 70 ಕಿ.ಮೀ ವೇಗವನ್ನು ಹೊಂದಿದೆ. ಮುಂದಿನ ವರ್ಷ 2022 ರ ವೇಳೆಗೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ದೇಶದ 24 ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಬಜಾಜ್ ಆಟೋ ಹೊಂದಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- ಬೈಕ್ ಮಾರುಕಟ್ಟೆಯಲ್ಲಿ 28 ನೂತನ ಮಾಡೆಲ್ ಗಳ ಮೂಲಕ ಅಬ್ಬರಿಸಲು ಮುಂದಾದ Bullet


ಇಲ್ಲಿದೆ ನಾಗ್ಪುರ್ ನಲ್ಲಿನ ಬೆಲೆ ಮತ್ತು ಟೋಕನ್ ಅಮೌಂಟ್
ಬಜಾಜ್ ಆಟೋ (Bajaj Auto) ಇತ್ತೀಚೆಗಷ್ಟೇ ನಾಗ್ಪುರ್ನಲ್ಲಿ ಚೇತಕ್ ಇ-ಸ್ಕೂಟರ್ ಬಿಡುಗಡೆ ಮಾಡಿತ್ತು. 2 ಸಾವಿರ ರೂ.ಗಳ ಟೋಕನ್ ಅಮೌಂಟ್ ಮೇಲೆ ಚೇತಕ್ ಬುಕಿಂಗ್ ತೆರೆದುಕೊಂಡಿದೆ. ನಾಗ್ಪುರ್ ಮಾರುಕಟ್ಟೆಯಲ್ಲಿ ಬಜಾಜ್ ಚೇತಕ್ ಅರ್ಬನ್ ವೇರಿಯಂಟ್ ಬೆಲೆಯನ್ನು ರೂ.1,42,988 ಹಾಗೂ ಪ್ರಿಮಿಯಂ ವೇರಿಯಂಟ್ ಬೆಲೆ 1,44,987 ರೂ. ನಿಗದಿಪಡಿಸಲಾಗಿದೆ. ಆದರೆ ಇವು ಎಕ್ಸ್-ಷೋರೂಮ್ ಬೆಳೆಗಳಾಗಿವೆ. ಇಂದು ಬುಕಿಂಗ್ ಆರಂಭಗೊಳ್ಳಲಿರುವ ಮೂರು ನಗರಗಳಲ್ಲಿಯೂ ಕೂಡ ಈ ಸ್ಕೂಟರ್ ಬೆಲೆ ಹಾಗೂ ಟೋಕನ್ ಅಮೌಂಟ್ ಇದೇ ಇರಲಿದೆ ಎಂದು ಅಂದಾಜಿಸಲಾಗುತ್ತಿದೆ. 


ಇದನ್ನೂ ಓದಿ-ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ