Hero Glamour Xtec Launch: ಬೈಕ್ ಸವಾರರಿಗೊಂದು ಸಂತಸದ ಸುದ್ದಿ

Hero Glamour Xtec Launch - ಹೊಸ ಆಕರ್ಷಕ ಲುಕ್ ಹಾಗೂ ಅಡ್ವಾನ್ಸ್ಡ್ ವೈಶಿಷ್ಟ್ಯಗಳೊಂದಿಗೆ ಹಿರೋ ಮೋಟೋಕಾರ್ಪ್ಸ್ ತನ್ನ Glamour Xtec ಬೈಕ್ ನ ಎರಡು ಹೊಸ ರೂಪಾಂತರಗಳನ್ನು ಬಿಡುಗಡೆಗೊಳಿಸಿದೆ. ಇದರಲ್ಲಿ ಡ್ರಮ್ ಬ್ರೇಕ್ ವೇರಿಯಂಟ್ ನ ಬೆಲೆ ರೂ. 78,900 ಗಳಾಗಿದ್ದರೆ, ಡಿಸ್ಕ್ ಬ್ರೇಕ್ ವೇರಿಯಂಟ್ ಬೆಲೆ ರೂ. 83,500 ಆಗಿದೆ.

Written by - Nitin Tabib | Last Updated : Jul 21, 2021, 09:54 PM IST
  • ಬೈಕ್ ಸವಾರರಿಗೊಂದು ಸಂತಸದ ಸುದ್ದಿ ಪ್ರಕಟ.
  • Hero Motocorp ವತಿಯಿಂದ Glamour Xtec ಎರಡು ಹೊಸ ರೂಪಾಂತರ ಬಿಡುಗಡೆ.
  • ಬೆಲೆ ಹಾಗೂ ಇತರೆ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಸುದ್ದಿ ಓದಿ.
Hero Glamour Xtec Launch: ಬೈಕ್ ಸವಾರರಿಗೊಂದು ಸಂತಸದ ಸುದ್ದಿ title=
Hero Glamour Xtec Launch (File Photo)

Hero Glamour Xtec Launch - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಹಿರೋ ಮೋಟೋಕಾರ್ಪ ತನ್ನ Glamour Xtec ಬೈಕ್ ನ ಎರಡು ಸುಧಾರಿತ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊಸ ಆಕರ್ಷಕ ಲುಕ್ ಹಾಗೂ ಸುಧಾರಿತ ವೈಶಿಷ್ಟ್ಯಗಳೊಂದಿಗೆ ನಿನ್ನೆ ಮಾರುಕಟ್ಟೆಗೆ ಈ ಬೈಕ್ ಗಳನ್ನೂ ಕಂಪನಿ ಪರಿಚಯಿಸಿದೆ. ಕಂಪನಿ ಇದನ್ನು ಡ್ರಮ್ ಬ್ರೇಕ್ ಹಾಗೂ ಡಿಸ್ಕ್ ಬ್ರೇಕ್ ಎಂಬ ಎರಡು ಆವೃತ್ತಿಗಳ ಮೂಲಕ ಮಾರುಕಟ್ಟೆಗೆ ಪರಿಚಯಿಸಿದೆ. ಹೀರೋ ಹೊಂಡಾ ಗ್ಲಾಮರ್ ಈ ಹಿಂದಿನ ಆವೃತ್ತಿ ಲೀಟರ್ ಗೆ 70 ಕಿ.ಮೀ ಮೈಲೇಜ್ ನೀಡುತ್ತಿದ್ದರೆ, ಈ ಬೈಕ್ ಶೇ.7ರಷ್ಟು ಹೆಚ್ಚು ಮೈಲೇಜ್ ನೀಡುತ್ತದೆ. 

ಕಂಪನಿಯ ಪ್ರಕಾರ,  Glamour Xtecಯಲ್ಲಿ 125ಸಿಸಿ ಕೆಪ್ಯಾಸಿಟಿಯ XSens ಪ್ರೋಗ್ರಾಮ್ಡ್ ಫ್ಯುಯೆಲ್ ಇಂಜೆಕ್ಟೆಡ್ ಇಂಜಿನ್ ನೀಡಲಾಗಿದೆ. ಇದು 10.7BHP ಪವರ್ ಹಾಗೂ 10.6Nm ಟಾರ್ಕ್ ಜನರೇಟ್ ಮಾಡುತ್ತದೆ. ಜೊತೆಗೆ  ಈ ಇಂಜಿನ್ ಆಟೋ ಸೆಲ್ ಟೆಕ್ನಾಲಾಜಿಯಿಂದ ನಿರ್ಮಿಸಲಾಗಿದೆ. ಈ ಬೈಕ್ ನ ಡ್ರಮ್ ಬ್ರೇಕ್ ವೇರಿಯಂಟ್ ನ ಬೆಲೆ ರೂ.78, 900 ಆಗಿದ್ದರೆ, ಡಿಸ್ಕ್ ಬ್ರೇಕ್ ವೇರಿಯಂಟ್ ಬೆಲೆ ರೂ. 83,500 ನಿರ್ಧರಿಸಲಾಗಿದೆ. ಹಾಗಾದರೆ ಬನ್ನಿ ಈ ಬೈಕ್ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

ಹಿರೋ ಮೋಟೋಕಾರ್ಪ್ ನ ನೂತನ XTEC ನಲ್ಲಿ ನಿಮಗೆ ಹಲವು ಉನ್ನತ ದರ್ಜೆಯ ನ್ಯಾವಿಗೇಶನ್ ವೈಶಿಷ್ಟ್ಯಗಳು ನಿಮಗೆ ಸಿಗಲಿವೆ. ಈ ಬೈಕ್ (Bike) ನಲ್ಲಿ ಕರೆ ಮತ್ತು SMS ಅಲರ್ಟ್ ಜೊತೆಗೆ ಗೂಗಲ್ ಮ್ಯಾಪ್ ಕನೆಕ್ಟಿವಿಟಿ ಸೌಲಭ್ಯ ಕೂಡ ನಿಮಗೆ ಸಿಗಲಿವೆ. ಇದಲ್ಲದೆ ಇದರಲ್ಲಿ ನಿಮಬೆ ಬ್ಲೂ ಟೂಥ್ ಕನೆಕ್ಟಿವಿಟಿ ಫಂಕ್ಷನ್, ಟರ್ನ್ ಬಾಯ್ ಟರ್ನ್ ನೇವಿಗೇಶನ್ ಸಿಸ್ಟಂ ಹಾಗೂ ಇಂಟಿಗ್ರೆಟೆಡ್ ಯುಎಸ್ಬಿ ಚಾರ್ಜಿಂಗ್ ಆಪ್ಶನ್ ಕೂಡ ಸಿಗುತ್ತದೆ. ಜೊತೆಗೆ ಈ ಹೊಸ ಗ್ಲಾಮರ್  ನಲ್ಲಿ ಹೈ ಲೆವೆಲ್ ಕ್ಲಸ್ಟರ್ ನಲ್ಲಿ ಗಿಯರ್ ಪೋಸಿಶನ್, ಇಂಡಿಕೇಟರ್, ಇಕೋ ಮೋಡ್, ಟ್ಯಾಕೋಮೀಟರ್ ಹಾಗೂ ರಿಯಲ್ ಟೈಮ್ ಮೈಲೇಜ್ ಇಂಡಿಕೆಟರ್ (RTMi) ಕೂಡ ನೀಡಲಾಗಿದೆ.

ಇದನ್ನೂ ಓದಿ- ಶುಭ ಸುದ್ದಿ: ಬೈಕ್ ಖರೀದಿಗೆ ಸರ್ಕಾರದಿಂದ ₹ 25 ಸಾವಿರ ಸಹಾಯಧನ

ಸೈಡ್ ಸ್ಟಾಂಡ್ ಇಂಜಿನ್ ಕಟ್ ಆಫ್ ಸಿಸ್ಟಂನಿಂದ ಕೂಡಿದೆ
ನೂತನ ಗ್ಲ್ಯಾಮರ್ Xtec ಮೋಟರ್ ಸೈಕಲ್ ಸೈಡ್ ಸ್ಟಾಂಡ್ ವಿಜುವಲ್ ಇಂಡಿಕೇಶನ್ ಜೊತೆಗೆ ಈ ಸೆಗ್ಮೆಂಟ್ ನ ಬೈಕ್ ನಲ್ಲಿ ಮೊಟ್ಟಮೊದಲ ಬಾರಿಗೆ 'ಸೈಡ್ ಸ್ಟಾಂಡ್ ಇಂಜಿನ್ ಕಟ್ ಆಫ್' ಸಿಸ್ಟಂನಿಂದ ಕೂಡಿದೆ. ಇದಲ್ಲದೆ ಇದರಲ್ಲಿ ಬ್ಯಾಕ್ ಆಂಗಲ್ ಸೆನ್ಸಾರ್ ವೈಶಿಷ್ಟ್ಯವನ್ನು ಕೂಡ ಜೋಡಿಸಲಾಗಿದೆ. ಇದು ಬೈಕ್ ಕೆಳಗೆ ಬೀಳುವ ವೇಳೆ ಇಂಜಿನ್ ಅನ್ನು ಬಂದ್ ಮಾಡಲಿದೆ. ಇದರ ಹಿಂಭಾಗದಲ್ಲಿ 5 ಸ್ಟೆಪ್ ಅಡ್ಜಸ್ಟೇಬಲ್ ಹೈಡ್ರೋಲಿಕ್ ಷಾಕ್ ಅಬ್ಸಾರ್ವರ್  ಸಸ್ಪೆನ್ಶನ್ ಹಾಗೂ ಮುಂಭಾಗದಲ್ಲಿ 240mm ಡಿಸ್ಕ್ ಬ್ರೇಕ್ ನೀಡಲಾಗಿದೆ.  ಇದಲ್ಲದೆ, 180 ಮಿಮಿ ಗ್ರೌಂಡ್ ಕ್ಲಿಯರೆನ್ಸ್ ಕೂಡ ನೀಡಲಾಗಿದೆ. 

ಇದನ್ನೂ ಓದಿ- ಬೈಕ್ ಮಾರುಕಟ್ಟೆಯಲ್ಲಿ 28 ನೂತನ ಮಾಡೆಲ್ ಗಳ ಮೂಲಕ ಅಬ್ಬರಿಸಲು ಮುಂದಾದ Bullet

LED ಹೆಡ್ ಲ್ಯಾಂಪ್ ಜೊತೆಗೆ ಉತ್ತಮ ಲೈಟಿಂಗ್ ಕೂಡ ಇದೆ
ಕಂಪನಿಯು ತನ್ನ ಸ್ಟೈಲಿಂಗ್ ಮತ್ತು ವಿನ್ಯಾಸದಲ್ಲಿ ಗ್ಲಾಮರ್ ಎಕ್ಸ್‌ಟೆಕ್‌ಗೆ ಹಲವಾರು ಬದಲಾವಣೆಗಳನ್ನು ಮಾಡಿದೆ. ಇದು ಎಲ್ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಉತ್ತಮ ಬೆಳಕಿನ ವೈಶಿಷ್ಟ್ಯವನ್ನು ಸಹ ಹೊಂದಿದೆ. ಗ್ಲಾಮರ್ ಎಕ್ಸ್‌ಟೆಕ್ ಈ ವಿಭಾಗದ ಇತರ ಬೈಕ್‌ಗಳಿಗಿಂತ ಸುಮಾರು 34% ಹೆಚ್ಚಿನ ಬೆಳಕನ್ನು ಇದು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೆ, ಬೈಕ್‌ನಲ್ಲಿರುವ 3 ಡಿ ಬ್ರ್ಯಾಂಡಿಂಗ್, ರಿಮ್ ಟೇಪ್ ಮತ್ತು ನೀಲಿ ಎಕ್ಸೆಂಟ್ ಅದರ ಲುಕ್ ಅನ್ನು ಇನ್ನಷ್ಟು ಆಕರ್ಷಕವಾಗಿ ಮಾಡುತ್ತದೆ.

ಇದನ್ನೂ ಓದಿ-ಕೇವಲ 24 ಗಂಟೆಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಗೆ ಸುಮಾರು 1 ಲಕ್ಷ ಬುಕಿಂಗ್ ಬೇಡಿಕೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News