New Bike 2023: ಸದ್ದಿಲ್ಲದೇ ಮಾರುಕಟ್ಟೆಗೆ ಅತ್ಯಂತ ಅಗ್ಗದ 110ಸಿಸಿ ಬೈಕ್ ಬಿಡುಗಡೆ ಮಾಡಿದೆ ಈ ಭಾರತೀಯ ಕಂಪನಿ
2023 Bajaj Platina 110 ABS Launched: ದೆಹಲಿಯಲ್ಲಿ ಕಂಪನಿಯ ಪ್ಲಾಟಿನಾ 110 ಎಬಿಎಸ್ ನ ಎಕ್ಸ್ ಶೋ ರೂಂ ಬೆಲೆ 72,224 ರೂ.ನಿಂದ ಪ್ರಾರಂಭವಾಗುತ್ತದೆ.
2023 Bajaj Platina 110 ABS Launched: ಬಜಾಜ್ ಆಟೋ ಸದ್ದಿಲ್ಲದೇ ತನ್ನ ಇತ್ತೀಚಿನ ಪ್ಲಾಟಿನಾ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ದೆಹಲಿಯಲ್ಲಿ ಹೊಸ ಪ್ಲಾಟಿನಾ 110 ಎಬಿಎಸ್ ಎಕ್ಸ್ ಶೋ ರೂಂ ಬೆಲೆ ರೂ.72,224 ರಿಂದ ಪ್ರಾರಂಭವಾಗುತ್ತದೆ. ಪ್ಲಾಟಿನಾ 110 ಎಬಿಎಸ್ 110 ಸಿಸಿ ವಿಭಾಗದಲ್ಲಿ ಕಂಪನಿಯ ಮೊದಲ ಬೈಕ್ ಆಗಿದೆ ಎಂಬುದು ಇಲ್ಲಿ ವಿಶೇಷ
ಬಜಾಜ್ ಪ್ಲಾಟಿನಾ 110 ಎಬಿಎಸ್: ಎಂಜಿನ್ ಮತ್ತು ಗೇರ್ ಬಾಕ್ಸ್
ಹೊಸ ಬಜಾಜ್ ಪ್ಲಾಟಿನಾ 110 ಎಬಿಎಸ್ ಸಿಂಗಲ್ ಸಿಲಿಂಡರ್ 115.45 ಸಿಸಿ ಎಂಜಿನ್ ಹೊಂದಿದೆ. ಈ ಏರ್ ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ 8.4 ಬಿಎಚ್‌ಪಿ ಪವರ್ ಮತ್ತು 9.81 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬಜಾಜ್‌ನ ಇತ್ತೀಚಿನ ಬೈಕ್‌ನಲ್ಲಿ ಅಳವಡಿಸಲಾಗಿರುವ ಎಂಜಿನ್ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಬರುತ್ತದೆ.
ಇದನ್ನೂ ಓದಿ-PF ಖಾತೆದಾರರಿಗೆ ಮಹತ್ವದ ಸೌಕರ್ಯ ಒದಗಿಸಿದ ಸರ್ಕಾರ, ಈ ರೀತಿ ಲಾಭ ಪಡೆಯಿರಿ
ಬಜಾಜ್ ಪ್ಲಾಟಿನಾ 110 ಎಬಿಎಸ್: ಹಾರ್ಡ್‌ವೇರ್ ಮತ್ತು ವೈಶಿಷ್ಟ್ಯಗಳು
ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳು ಹೊಸ ಪ್ಲಾಟಿನಾ 110 ಎಬಿಎಸ್‌ನ ವಿಶೇಷತೆಯಾಗಿದೆ. ಬೈಕ್‌ನ ಹಿಂಭಾಗದಲ್ಲಿ ಎರಡು ಸ್ಪ್ರಿಂಗ್ ಲೋಡ್ ಶಾಕ್ ಅಬ್ಸಾರ್ಬರ್‌ಗಳಿವೆ. ಇದು ಸಿಂಗಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಹೊಂದಿದೆ. ಬೈಕ್‌ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ. ವೈಶಿಷ್ಟ್ಯಗಳ ವಿಷಯದಲ್ಲಿ, ಬಜಾಜ್‌ನ ಇತ್ತೀಚಿನ ಬೈಕ್‌ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ನೀಡಲಾಗಿದೆ. ಇದರಲ್ಲಿ ಎಲ್ಲಾ ಅಗತ್ಯ ಮಾಹಿತಿಯು ಗೋಚರಿಸುತ್ತದೆ.
ನೂತನ ಪ್ಲಾಟಿನಾ 110 ಎಬಿಎಸ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಜಾಜ್ ಆಟೋ ಅಧ್ಯಕ್ಷ ಸಾರಂಗ್ ಕಾನಡೆ, ಭಾರತದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಇವುಗಳಲ್ಲಿ ಶೇ. 45ರಷ್ಟು ಅಪಘಾತಗಳು ದ್ವಿಚಕ್ರ ವಾಹನಗಳಿಂದ ಸಂಭವಿಸುತ್ತಿವೆ. ಗ್ರಾಹಕರ ಬಗ್ಗೆ ತಿಳುವಳಿಕೆ ವ್ಯಕ್ತಪಡಿಸಿದ ಅವರು, ದಿನನಿತ್ಯದ ಪ್ರಯಾಣಿಕರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಿದೆ. ಹೊಸ ಪ್ಲಾಟಿನಾ 110 ಎಬಿಎಸ್‌ನಲ್ಲಿ ಬೈಕ್ ಅನ್ನು ನಿಯಂತ್ರಿಸಲು ರೈಡರ್‌ಗೆ ಸೂಕ್ತ ಬ್ರೇಕಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಸಾರಂಗ್ ಕಾನಡೆ ತಿಳಿಸಿದ್ದಾರೆ. ಬೈಕ್ ನಲ್ಲಿ ನೀಡಿರುವ ಬ್ರೇಕಿಂಗ್ ವ್ಯವಸ್ಥೆ ಗ್ರಾಹಕರಿಗೆ ಇಷ್ಟವಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.