Investment: ಸರ್ಕಾರದ ಈ ಯೋಜನೆಯಲ್ಲಿ ಇಂದೇ ಹೂಡಿಕೆ ಮಾಡಿ ನಿವೃತ್ತಿಯ ಬಳಿಕ 2.25 ಕೋಟಿ ಸಂಪಾದಿಸಿ

Best Retirement Investment Plan: ಇಲ್ಲಿ ನಾವು ನಿಮಗೆ ಹೂಡಿಕೆಯ ಅತ್ಯುತ್ತಮ ಆಯ್ಕೆಯೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಇದು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತವಾಗಿರುವುದರ ಜೊತೆಗೆ ನಿಮ್ಮ ಆದಾಯ ತೆರಿಗೆಯನ್ನು ಕೂಡ ಉಳಿತಾಯ ಮಾಡುತ್ತದೆ.  

Written by - Nitin Tabib | Last Updated : Dec 23, 2022, 08:48 PM IST
  • ನೀವು ಯಾವುದೇ ಹತ್ತಿರದ ಅಂಚೆ ಕಚೇರಿ ಅಥವಾ ಯಾವುದೇ
  • ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಖಾತೆಯನ್ನು ತೆರೆಯಬಹುದು.
  • ಇದರಲ್ಲಿ ಕನಿಷ್ಠ 500 ರಿಂದ 1,50,000 ರೂ. ಹೂಡಿಕೆಯನ್ನು ಮಾಡಬಹುದು.
Investment: ಸರ್ಕಾರದ ಈ ಯೋಜನೆಯಲ್ಲಿ ಇಂದೇ ಹೂಡಿಕೆ ಮಾಡಿ ನಿವೃತ್ತಿಯ ಬಳಿಕ 2.25 ಕೋಟಿ ಸಂಪಾದಿಸಿ title=
Best Investment Plan

Retirement Plans: ನೀವು ಸರ್ಕಾರಿ ನೌಕರರಾಗಿರಲಿ ಅಥವಾ ಖಾಸಗಿ ನೌಕರರಾಗಿರಲಿ, ಪ್ರತಿಯೊಬ್ಬರೂ ನಿವೃತ್ತಿ ಯೋಜನೆಯನ್ನು ಹೊಂದಿರಬೇಕು. ಸರಿಯಾದ ನಿವೃತ್ತಿ ಯೋಜನೆಯು ನಿವೃತ್ತಿಯ ನಂತರದ ನಿಮ್ಮ ಜೀವನವನ್ನು ಸುಲಭಗೊಳಿಸುತ್ತದೆ. ಇತ್ತೀಚೆಗೆ ಒಬ್ಬ ವ್ಯಕ್ತಿ ಸರ್ಕಾರಿ ನೌಕರಿಯಲ್ಲಿರಲಿ ಅಥವಾ ಖಾಸಗಿ ನೌಕರಿಯಲ್ಲಿರಲಿ, ಬಹುತೇಕರಿಗೆ ಪಿಂಚಣಿ ಯೋಜನೆಯ ಲಾಭ ಸಿಗುತ್ತಿಲ್ಲ. ಇಲ್ಲಿ ನಾವು ನಿಮಗೆ ಒಂದು ಅತ್ಯುತ್ತಮ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಯೋಜನೆ ನಿಮಗೆ ಸುರಕ್ಷಿತ ಭವಿಷ್ಯವನ್ನು ನೀಡುತ್ತದೆ. ಇದರೊಂದಿಗೆ ನಿಮ್ಮ ಆದಾಯ ತೆರಿಗೆ ಉಳಿತಾಯವೂ ಮಾಡುತ್ತದೆ .

ಈ ಯೋಜನೆ ಯಾವುದು?
ಪಿಪಿಎಫ್ ಯೋಜನೆ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂದರೆ ಪಿಪಿಎಫ್ ಯೋಜನೆಯಡಿ, ನೀವು ಯಾವುದೇ ಹತ್ತಿರದ ಅಂಚೆ ಕಚೇರಿ ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ ನಿಮ್ಮ ಖಾತೆಯನ್ನು ತೆರೆಯಬಹುದು. ಇದರಲ್ಲಿ ಕನಿಷ್ಠ 500 ರಿಂದ 1,50,000 ರೂ. ಹೂಡಿಕೆಯನ್ನು ಮಾಡಬಹುದು. ಅದರಲ್ಲಿ ಜಮೆಯಾದ ಹಣದ ಬಡ್ಡಿಯನ್ನು ವರ್ಷದ ಕೊನೆಯ ದಿನದಂದು ಖಾತೆಗೆ ಸೇರಿಸಲಾಗುತ್ತದೆ. ಪ್ರಸ್ತುತ, ಸರ್ಕಾರವು ಈ ಖಾತೆಯ ಮೇಲೆ ಶೇ. 7.1 ರ ದರದಲ್ಲಿ ಬಡ್ಡಿಯನ್ನು ನೀಡುತ್ತಿದೆ.

ಇದನ್ನೂ ಓದಿ-Video: ಹೈದ್ರಾಬಾದ್ ನಲ್ಲಿ ಇದ್ದಕ್ಕಿದ್ದಂತೆ ಪಾತಾಳಕ್ಕೆ ಕುಸಿದ ರಸ್ತೆ, ವಿಡಿಯೋ ನೋಡಿ

ಈ ರೀತಿ ನೀವು 2 ಕೋಟಿ 26 ಲಕ್ಷ ರೂ ಸಂಪಾದಿಸಬಹುದು
ನೀವು 25 ನೇ ವಯಸ್ಸಿನಲ್ಲಿ ನಿಮ್ಮ ಪಿಪಿಎಫ್ ಖಾತೆಯನ್ನು ತೆರೆದರೆ ಮತ್ತು ಪ್ರತಿ ವರ್ಷ ಏಪ್ರಿಲ್ 1 ರಂದು ಖಾತೆಗೆ 1.5 ಲಕ್ಷ ರೂ.ಗಳನ್ನು ಠೇವಣಿ ಇರಿಸಿದರೆ, ಶೇ.7.1ರ ದರದಲ್ಲಿ ಮುಂದಿನ ವರ್ಷದ ಮಾರ್ಚ್ 31 ರಂದು ನಿಮ್ಮ ಖಾತೆಗೆ ರೂ. 10,650 ರೂ. ಬಡ್ಡಿ ಪಾವತಿಯಾಗುತ್ತದೆ ಇದರ ನಂತರ, ಆರ್ಥಿಕ ವರ್ಷದ ಮೊದಲ ದಿನದಂದು, ನಿಮ್ಮ ಖಾತೆಯಲ್ಲಿ ಒಟ್ಟು ಮೊತ್ತ 1,60,650 ರೂ.ಆಗುತ್ತದೆ. ಮುಂದಿನ ವರ್ಷ, ನೀವು ಮತ್ತೆ 1.5 ಲಕ್ಷ ರೂ.ಗಳನ್ನು ಠೇವಣಿ ಮಾಡಿದರೆ, ಈ ಮೊತ್ತವು 3,10,650 ರೂ.ಗೆ ಏರಿಕೆಯಾಗುತ್ತದೆ, ಅದರಲ್ಲಿ ನೀವು ರೂ.22,056 ಬಡ್ಡಿಯ ಲಾಭವನ್ನು ಪಡೆಯುವಿರಿ. ಇದೆ ರೀತಿ, ನೀವು 15 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಿದರೆ, ಮುಕ್ತಾಯದ ನಂತರ ನಿಮ್ಮ ಖಾತೆಯಲ್ಲಿ  ಒಟ್ಟು 40,68,209 ರೂ. ಜಮೆಯಾಗುತ್ತದೆ. ಇದನ್ನು ನೀವು ಮತ್ತೆ 5 ವರ್ಷಗಳ ಅವಧಿಗೆ ವಿಸ್ತರಿಸಬಹುದು. ನಿಮ್ಮ ಖಾತೆಯು 20 ವರ್ಷಗಳನ್ನು ಪೂರ್ಣಗೊಳಿಸಿದಾಗ, ಖಾತೆಯಲ್ಲಿನ ಒಟ್ಟು ಮೊತ್ತವು ರೂ 66,58,288 ಆಗುತ್ತದೆ. ಅದೇ ರೀತಿ, ನಿಮ್ಮ ಖಾತೆಯು 35 ವರ್ಷಗಳವರೆಗೆ ನೀವು ಮುಂದುವರೆಸಿದರೆ, ನಿವೃತ್ತಿಯ ಬಳಿಕ ನೀವು 2 ಕೋಟಿ 26 ಲಕ್ಷ ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುವಿರಿ.

ಇದನ್ನೂ ಓದಿ-PM Kisan 13ನೇ ಕಂತಿಗೂ ಮುನ್ನವೇ ರೈತ ಬಾಂಧವರಿಗೊಂದು ಭಾರಿ ಸಂತಸದ ಸುದ್ದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ) 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News