ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್
Bal Jeevan Bima Yojana : ಈ ಯೋಜನೆಯಲ್ಲಿ, ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.
Post Office Scheme : ಮಕ್ಕಳು ಹುಟ್ಟಿದ ಕೂಡಲೇ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆ ಮಾಡುತ್ತಾರೆ.ಅನೇಕ ಪೋಷಕರು ತಮ್ಮ ಮಕ್ಕಳು ಜನಿಸಿದ ತಕ್ಷಣ, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಪ್ರಾರಂಭಿಸುತ್ತಾರೆ. ನೀವು ಕೂಡಾ ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ ಪೋಸ್ಟ್ ಆಫೀಸ್‌ನ ಮಕ್ಕಳ ಜೀವ ವಿಮಾ ಯೋಜನೆ (Bal Jeevan Bima Yojana) ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ, ಪ್ರತಿದಿನ ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.
ಬಾಲ ಜೀವ ವಿಮಾ ಯೋಜನೆ ಎಂದರೇನು? :
ಅಂಚೆ ಕಚೇರಿ ಬಾಲ ಜೀವ ವಿಮೆ (Bal Bima Yojana)ಯನ್ನು ನಡೆಸುತ್ತದೆ. ಇದು ಮಕ್ಕಳಿಗಾಗಿ ಇರುವ ವಿಶೇಷ ವಿಮಾ ಯೋಜನೆಯಾಗಿದೆ. ಮಕ್ಕಳ ಪೋಷಕರು ಈ ಯೋಜನೆಯನ್ನು ಖರೀದಿಸಬಹುದು.ಆದರೆ ಈ ಯೋಜನೆಯನ್ನು ಖರೀದಿಸಲು, ಮಕ್ಕಳ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.ಇದರರ್ಥ ನಿಮ್ಮ ವಯಸ್ಸು 45 ವರ್ಷಕ್ಕಿಂತ ಹೆಚ್ಚಿದ್ದರೆ ನೀವು ಈ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ. ಬಾಲ ಜೀವ ವಿಮಾ ಯೋಜನೆಯಲ್ಲಿ 5 ರಿಂದ 20 ವರ್ಷಗಳ ನಡುವಿನ ಮಕ್ಕಳ ಹೆಸರಿನಲ್ಲು ಹೂಡಿಕೆ ಮಾಡಬಹುದು.ಇದರ ಅಡಿಯಲ್ಲಿ,ಪಾಲಿಸಿದಾರರು ಅಂದರೆ ಮಕ್ಕಳ ಪೋಷಕರು ಈ ಯೋಜನೆಯಲ್ಲಿ ಇಬ್ಬರು ಮಕ್ಕಳನ್ನು ಮಾತ್ರ ಸೇರಿಸಬಹುದು.
ಇದನ್ನೂ ಓದಿ : ಮಿಡಲ್ ಕ್ಲಾಸ್ ಫ್ಯಾಮಿಲಿಗೆ ಸೇರಿದ ನೀತಾ! ಮುಖೇಶ್ ಅಂಬಾನಿಯವರನ್ನು ಮದುವೆಯಾಗುವ ಮುನ್ನ ಯಾವ ಕೆಲಸ ಮಾಡಿದ್ದರು ಗೊತ್ತಾ?
ನಿತ್ಯ 6 ರೂಪಾಯಿ ಠೇವಣಿ ಇಟ್ಟರೆ ಸಿಗುತ್ತದೆ 1 ಲಕ್ಷ ರೂಪಾಯಿ :
ಬಾಲ ಜೀವ ವಿಮಾ ಯೋಜನೆಯಡಿಯಲ್ಲಿ,ದಿನಕ್ಕೆ 6 ರೂಪಾಯಿಯಿಂದ 18 ರೂ.ವರೆಗಿನ ಪ್ರೀಮಿಯಂ ಅನ್ನು ಠೇವಣಿ ಮಾಡಬಹುದು.ಪಾಲಿಸಿದಾರರು 5 ವರ್ಷಗಳವರೆಗೆ ಈ ಪಾಲಿಸಿಯನ್ನು ಖರೀದಿಸಿದರೆ,ಪ್ರತಿದಿನ ರೂ 6 ಪ್ರೀಮಿಯಂ ಪಾವತಿಸಬೇಕಾಗುತ್ತದೆ.ಆದರೆ ಈ ಪಾಲಿಸಿಯನ್ನು 20 ವರ್ಷಗಳ ಅವಧಿಗೆ ಖರೀದಿಸಿದರೆ, ಪ್ರತಿದಿನ 18 ರೂ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಮಾಸಿಕ,ತ್ರೈಮಾಸಿಕ,ಅರ್ಧ ವಾರ್ಷಿಕ ಮತ್ತು ವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ಅನ್ನು ಠೇವಣಿ ಮಾಡಬೇಕು. ಈ ಪಾಲಿಸಿಯ ಮೆಚ್ಯೂರಿಟಿ ಅವಧಿಯ ನಂತರ, ನಿಮಗೆ 1 ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತದೆ.
ಬಾಲ ಬಿಮಾ ಯೋಜನೆ ಅಡಿಯಲ್ಲಿ ರೂ 1000 ವಿಮಾ ಮೊತ್ತದ ಮೇಲೆ ಬೋನಸ್ ಪ್ರಯೋಜನ :
ಈ ಯೋಜನೆಯಡಿಯಲ್ಲಿ, ಪಾಲಿಸಿದಾರರು ಅಂದರೆ ಪೋಷಕರು ಮೆಚ್ಯೂರಿಟಿಯ ಮೊದಲು ಮರಣಹೊಂದಿದರೆ,ಪ್ರೀಮಿಯಂ ಅನ್ನು ಮನ್ನಾ ಮಾಡಲಾಗುತ್ತದೆ.ಅಂತಹ ಪರಿಸ್ಥಿತಿಯಲ್ಲಿ, ಮಗುವಿನ ಹೆಸರಿನಲ್ಲಿ ಪಾಲಿಸಿ ಪ್ರೀಮಿಯಂ ಪಾವತಿಸಬೇಕಾಗಿಲ್ಲ.ಈ ಯೋಜನೆಯಡಿಯಲ್ಲಿ 1000 ರೂ. ವಿಮಾ ಮೊತ್ತದ ಮೇಲೆ ಪ್ರತಿ ವರ್ಷ 48 ರೂಪಾಯಿ ಬೋನಸ್ ನೀಡಲಾಗುತ್ತದೆ.
ಇದನ್ನೂ ಓದಿ : RBI ರೆಪೊ ದರದಲ್ಲಿ ಯಾವುದೇ ಬದಲಾವಣೆ ಇಲ್ಲ : ಸತತ ಎಂಟನೇ ಬಾರಿಗೆ ಶೇಕಡಾ 6.5ರ ಮಟ್ಟದಲ್ಲಿಯೇ ಮುಂದುವರಿಕೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.