ನವದೆಹಲಿ:  Bank Alert! ಮೇ 31 ರ ಮೊದಲು, ಎಲ್ಲಾ ಬ್ಯಾಂಕುಗಳು ತಮ್ಮ ಕೆಲ ಆಯ್ದ ಉಳಿತಾಯ ಖಾತೆದಾರರ ಖಾತೆಯಿಂದ 12 ರೂಪಾಯಿಗಳನ್ನು ಕಡಿತಗೊಳಿಸುತ್ತವೆ. ಆದರೆ ಈ 12 ರೂಪಾಯಿಗಳ ಬದಲು ಗ್ರಾಹಕರಿಗೆ 2 ಲಕ್ಷ ರೂಪಾಯಿ ಲಾಭ ಸಿಗಲಿದೆ. ಅದು ಹೇಗೆ ಅಂತಿರಾ? ಹಾಗಾದರೆ ಬನ್ನಿ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಹಣ ಏಕೆ ಕಡಿತಗೊಳ್ಳಲಿದೆ?
ವಾಸ್ತವದಲ್ಲಿ ಈ ಹಣವನ್ನು ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)ಯ ಪ್ರೀಮಿಯಂ ಆಗಿ ಕಡಿತಗೊಳಿಸಲಾಗುತ್ತದೆ, ಇದರ ಬಗ್ಗೆ ನಿಮಗೆ ಎಸ್‌ಎಂಎಸ್ ಮೂಲಕವೂ ಮೂಲಕ ಮಾಹಿತಿ ಕೂಡ ಸಿಗುತ್ತದೆ. ಈ ಯೋಜನೆಗೆ ದಾಖಲಾದವರು  ಮಾತ್ರ ಈ ಪ್ರೀಮಿಯಂ ಪಾವತಿಸಬೇಕು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. ಇದಲ್ಲದೆ, ಈ ಹಣವನ್ನು ಯಾವುದೇ ಗ್ರಾಹಕರ ಖಾತೆಯಿಂದ ಕಡಿತಗೊಳಿಸಲಾಗುವುದಿಲ್ಲ.


ಇದನ್ನೂ ಓದಿ-ಕೇವಲ ಒಂದು ಮೊಬೈಲ್ ನಂಬರ್ ಮೂಲಕ ಮನೆಯ ಎಲ್ಲಾ ಸದಸ್ಯರ PVC Aadhaar Card ಮಾಡಿಸಬಹುದು


ಏನಿದು BMSBY ಯೋಜನೆ?
ಪ್ರಧಾನ್ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಎಂಬುದು ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯದ ವಿಮೆಯನ್ನು ಒದಗಿಸುವ ಒಂದು ಯೋಜನೆಯಾಗಿದೆ. ಇದು ಒಂದು ವರ್ಷದ ಕವರ್ ಹೊಂದಿದ್ದು ಇದನ್ನು ಪಡೆದ ವ್ಯಕ್ತಿಗಳು ವಾರ್ಷಿಕವಾಗಿ ತನ್ನ ಪಾಲಸಿಯನ್ನು ನವಿಕರಿಸುತ್ತಾರೆ. ಆಟೋ ಡೆಬಿಟ್ ಸೌಲಭ್ಯದ ಮೂಲಕ ಈ ಯೋಜನೆಗೆ ಈಗಾಗಲೇ ದಾಖಲಾದವರ ಖಾತೆಯಿಂದ 12 ರೂಪಾಯಿಗಳ (ಜಿಎಸ್‌ಟಿ ಸೇರಿದಂತೆ) ಪ್ರೀಮಿಯಂ ಅನ್ನು ಕಡಿತಗೊಳಿಸಲಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯಿಂದ ಸಾಮಾನ್ಯವಾಗಿ ಈ ಹಣವನ್ನು  ಪ್ರತಿ ವರ್ಷ ಮೇ 25 ರಿಂದ ಮೇ 31 ರವರೆಗೆ ಡೆಬಿಟ್ ಮಾಡಲಾಗುತ್ತದೆ.


ಇದನ್ನೂ ಓದಿ- State Bank Of India: ಕೊರೊನಾ ಕಾಲದಲ್ಲಿ ತನ್ನ ಗ್ರಾಹಕರಿಗೆ ಬಿಗ್ ಶಾಕ್ ನೀಡಿದ SBI


18 ರಿಂದ 70 ವರ್ಷ ವಯಸ್ಸಿನವರು ಈ ರೀತಿ ಅಪ್ಲೈ ಮಾಡಬಹುದು
ನೀವು ಸಹ ಈ ಯೋಜನೆಗೆ ಸೇರಲು ಬಯಸಿದರೆ, ನಿಮ್ಮ ಬ್ಯಾಂಕ್ ನಲ್ಲಿ ಈ ಕುರಿತಾದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಇದಲ್ಲದೆ, ನೀವು ನೆಟ್‌ಬ್ಯಾಂಕಿಂಗ್‌ಗೆ ಲಾಗ್ ಇನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ PMSBY ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಗಾಗಿ, ನೀವು 18-70 ವರ್ಷ ವಯಸ್ಸಿನವರಾಗಿರಬೇಕು. ಈ ಯೋಜನೆಯಡಿ, ವಿಮೆ ತೆಗೆದುಕೊಳ್ಳುವವರ ಸಾವು, ಅಪಘಾತ ಅಥವಾ ಸಂಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ 2 ಲಕ್ಷ ರೂ.ವರೆಗಿನ ವಿಮಾ ಲಾಭ ಸಿಗುತ್ತದೆ. 


ಇದನ್ನೂ ಓದಿ-Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.