Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ

Income Tax - ನೀವು ಮಾಡುವ ಪ್ರತಿಯೊಂದು ವಹಿವಾಟು ಸೇರಿದಂತೆ, ಆಸ್ತಿ-ಪಾಸ್ತಿ ಖರೀದಿಯ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ತಲುಪುತ್ತದೆ. ಏಕೆಂದರೆ ಈ ಎಲ್ಲ ವಹಿವಾಟುಗಳ ಮೇಲೆ ಭಾರಿ ಆದಾಯ ತೆರಿಗೆ (Income Tax) ನೀಡಬೇಕಾಗುತ್ತದೆ. ಒಂದು ವೇಳೆ ನೀವು ಖುದ್ದಾಗಿ ಈ ಮಾಹಿತಿಯನ್ನು ಆದಾಯ ತೆರಿಗೆ ವಿಭಾಗಕ್ಕೆ ನೀಡದೆ ಹೋದಲ್ಲಿ, ತೆರಿಗೆ ವಿಭಾಗಕ್ಕೆ ಇದರ ಮಾಹಿತಿ ಇದ್ದೆ ಇರುತ್ತದೆ. ಹಾಗಾದರೆ ಬನ್ನಿ ಹೇಗೆ ತಿಳಿದುಕೊಳ್ಳೋಣ.

Written by - Nitin Tabib | Last Updated : May 24, 2021, 08:56 PM IST
  • ತೆರಿಗೆ (Taxes) ಉಳಿತಾಯ ಮಾಡಲು ಜನ ಏನೆಲ್ಲಾ ಕಸರತ್ತು ಮಾಡುವುದಿಲ್ಲ.
  • ಆದರೆ ನಾವು ಮಾಡುವ ಪ್ರತಿ ವೆಚ್ಚ ಅಥವಾ ಹಣಕಾಸಿನ ವಹಿವಾಟಿನ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣಿರುತ್ತದೆ.
  • ನಮ್ಮ ಯಾವ ವಹಿವಾಟುಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣಿರುತ್ತದೆ ತಿಳಿಯೋಣ ಬನ್ನಿ.
Income Tax: ನೀವು ಮಾಡುವ ಈ ವೆಚ್ಚದ ಮೇಲೆ ಆದಾಯ ತೆರಿಗೆ ಇಲಾಖೆ ಕಣ್ಣಿಡುತ್ತದೆ, ಅಪ್ಪಿ-ತಪ್ಪಿಯೂ ಮರೆಮಾಚಬೇಡಿ  title=
Income Tax (File Photo)

ನವದೆಹಲಿ: Income Tax - ತೆರಿಗೆ (Taxes) ಉಳಿತಾಯ ಮಾಡಲು ಜನ ಏನೆಲ್ಲಾ ಕಸರತ್ತು ಮಾಡುವುದಿಲ್ಲ. ಆದರೆ, ಅವರು ತಮ್ಮ ಎಲ್ಲ ಖರ್ಚು-ವೆಚ್ಚಗಳ ಮೇಲೆ ಆದಾಯ ತೆರಿಗೆ  (Income Tax) ಇಲಾಖೆಯ ಕಣ್ಣಿರುತ್ತದೆ ಎಂಬುದನ್ನು ಮರೆತಿರುತ್ತಾರೆ. ಹೀಗಾಗಿ ತೆರಿಗೆ ಉಳಿತಾಯಕ್ಕಾಗಿ ಯಾವುದೇ ಒಂದು ಆರ್ಥಿಕ ವರ್ಷದಲ್ಲಿ ದೊಡ್ಡ ವಹಿವಾಟಿನ ಕುರಿತು ಮರೆಮಾಚಿದರೆ, ಅಥವಾ ಮರೆಮಾಚುವ ಪ್ರಯತ್ನ ನಡೆಸಿದರೆ, ಆದಾಯ ತೆರಿಗೆ ಇಲಾಖೆಗೆ ಇದರ ಮಾಹಿತಿ ಸಿಗುವುದಂತೂ ಖಚಿತ. ಬಳಿಕ ತೆರಿಗೆ ಪಾವತಿದಾರರು ಹಲವು ತೊಂದರೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. 

ಈ ಕುರಿತು ತಜ್ಞರು ಹೇಳುವ ಪ್ರಕಾರ, ಇಂತಹ ಹಲವು ರೀತಿಯ ವಹಿವಾಟುಗಳ ಕುರಿತು ಬ್ಯಾಂಕುಗಳು (Bank), ಮ್ಯೂಚವಲ್ ಫಂಡ್ ಹೌಸ್ ಗಳು (Mutual Fund Houses), ಬ್ರೋಕರೆಜ್ ಫರ್ಮ್ (Broakerage Firms) ಗಳು ಹಾಗೂ ಪ್ರಾಪರ್ಟಿ ರಜಿಸ್ಟ್ರಾರ್ (Property Registrar) ಗಳು ಖುದ್ದಾಗಿ ಆದಾಯ ತೆರಿಗೆ ವಿಭಾಗಗಳಿಗೆ ಮಾಹಿತಿ ನೀಡುತ್ತಾರೆ. ಏಕೆಂದರೆ, ಕಾನೂನಾತ್ಮಕವಾಗಿ ಅವರಿಗೂ ಕೂಡ ಈ ಅನಿವಾರ್ಯತೆ ಇರುತ್ತದೆ. ನಿರ್ಧಾರಿತ ಮಿತಿಗಿಂದ ಹೆಚ್ಚಿನ ವಹಿವಾಟಿನ ಕುರಿತು ಅವರು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಲೇಬೇಕು.

10 ಲಕ್ಷಕ್ಕಿಂತ ಹೆಚ್ಚಿನ FD
ಕಾನೂನಾತ್ಮಕವಾಗಿ ಯಾವುದೇ ಓರ್ವ ವ್ಯಕ್ತಿ ಒಂದು ಆರ್ಥಿಕ ವರ್ಷದಲ್ಲಿ ತನ್ನ FD (Fixed Deposit) ಖಾತೆಯಲ್ಲಿ 10 ಲಕ್ಷ ರೂ.ಗಳಿಗೂ ಹೆಚ್ಚು ಹಣ ಡಿಪಾಸಿಟ್ ಮಾಡಿದರೆ, ಬ್ಯಾಂಕುಗಳು ಅಂತಹ ಖಾತೆಯ ಕುರಿತು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಒದಗಿಸಬೇಕು. ಏಕೆಂದರೆ ಇದಕ್ಕಾಗಿಯೇ ಒಂದು ಅಗ್ರಿಗೆಟ್ ಲಿಮಿಟ್ ನಿರ್ಧರಿಸಲಾಗಿದೆ. ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು FD ಖಾತೆಗಳನ್ನು ತೆರೆದರೂ ಕೂಡ ನೀವು ತೆರಿಗೆ ಪಾವತಿಸಬೇಕು. ಆದರೆ, ಹಳೆ ಫಿಕ್ಸಡ್ ಡಿಪಾಸಿಟ್ ರಿನ್ಯೂ ಮಾಡಿದರೆ, ನೀವು ಯಾವುದೇ ರೀತಿಯ ಟ್ಯಾಕ್ಸ್ ಪಾವತಿಸಬೇಕಾಗಿಲ್ಲ ನೆನಪಿರಲಿ.

10 ಲಕ್ಷಕ್ಕಿಂತ ಹೆಚ್ಚಿನ ಕ್ಯಾಶ್ ಡಿಪಾಸಿಟ್
ಕೇಂದ್ರ ನೇರ ತೆರಿಗೆ ಮಂಡಳಿ (CBDT) ಆದೇಶಾನುಸಾರ, ಯಾವುದೇ ಓರ್ವ ವ್ಯಕ್ತಿ ಕಮರ್ಷಿಯಲ್ ಅಥವಾ ಸಹಕಾರಿ ಬ್ಯಾಂಕ್ (Bank Transaction) ನಲ್ಲಿ ಒಂದು ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣ ಡಿಪಾಸಿಟ್ ಮಾಡಿದರೆ, ಅದರ ಮಾಹಿತಿ ಕೂಡ ಆದಾಯ ತೆರಿಗೆ ಇಲಾಖೆಗೆ ನೀಡಬೇಕು. ಏಕೆಂದರೆ, ಇದೂ ಕೂಡ ಒಂದು ಅಗ್ರಿಗೇಟ್ ಲಿಮಿಟ್ ಆಗಿದ್ದು, ಅದರ ಮೇಲೆ ತೆರಿಗೆ ಬೀಳುತ್ತದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ನೀವು ತೆರಿಗೆ ಉಳಿತಾಯ ಮಾಡಲು ಬಯಸುತ್ತಿದ್ದರೆ, ಒಂದು ಆರ್ಥಿಕ ವರ್ಷದಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಕ್ಯಾಶ್ ಡಿಪಾಸಿಟ್ ಮಾಡಬೇಡಿ.

1 ಲಕ್ಷಕ್ಕಿಂತ ಮೇಲಿನ ಕ್ರೆಡಿಟ್ ಕಾರ್ಡ್ ಬಿಲ್
1 ಲಕ್ಷ ರೂ.ಗಳಿಗಿಂತ ಹೆಚ್ಚಿನ ಕ್ರೆಡಿಟ್ ಕಾರ್ಡ್ (Credit Card) ಬಿಲ್ ಅನ್ನು ಕ್ಯಾಶ್ ರೂಪದಲ್ಲಿ ನೀವು ಬ್ಯಾಂಕ್ ಗೆ ಪಾವತಿಸಿದರೆ (Cash Payment). ಬ್ಯಾಂಕ್ ಈ ಮಾಹಿತಿಯನ್ನು ಆದಾಯ ತೆರಿಗೆ ವಿಭಾಗಕ್ಕೆ ನೀಡಬೇಕು. ಏಕೆಂದರೆ ಇದು ಟ್ಯಾಕ್ಸ್ ಪರಧಿಗೆ ಒಳಪಡುತ್ತದೆ. ಇನ್ನೊಂದೆಡೆ ಒಂದು ಆರ್ಥಿಕ ವರ್ಷದಲ್ಲಿ ನೀವು ಕ್ರೆಡಿಟ್ ಕಾರ್ಡ್ ಮೂಲಕ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಖರ್ಚು ಮಾಡಿದರೂ (Maximum Cash Transaction Limit) ಕೂಡ ಆದಾಯ ತೆರಿಗೆ ಇಲಾಖೆ ನಿಮ್ಮ ಮೇಲೆ ತೆರಿಗೆ ಕ್ರಮ ಕೈಗೊಳ್ಳಬಹುದು.

ಇದನ್ನೂ ಓದಿ-PMSBY Scheme : ಈ ಯೋಜನೆಯಡಿ ವರ್ಷಕ್ಕೆ ಬರೀ ₹ 12 ಠೇವಣಿ ಇಡೀ : ₹ 2 ಲಕ್ಷ ವಿಮಾ ರಕ್ಷಣೆ ಪಡೆಯಿರಿ!

30 ಲಕ್ಷ ರೂ.ಗಳಿಗಿಂತ ಹೆಚ್ಚಿನ ಮೊತ್ತದ ಆಸ್ತಿ ಖರೀದಿ
30 ಲಕ್ಷ ರೂ.ಗಳು ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಪ್ರಾಪರ್ಟಿ ಖರೀದಿಸಿದರೆ (Cash Transaction) ಅದರ ಮೇಲೆ ನೀವು ತೆರಿಗೆ ಪಾವತಿಸಬೇಕು. ಹೀಗಾಗಿ ಯಾವುದೇ ಓರ್ವ ವ್ಯಕ್ತಿ ದುಬಾರಿ ಆಸ್ತಿಯನ್ನು ಖರೀದಿಸಿದರೆ, ರಜಿಸ್ಟ್ರಾರ್ ಅದರ ಮಾಹಿತಿಯನ್ನು ಆದಾಯ ತೆರಿಗೆ ವಿಭಾಗಕ್ಕೆ ವರ್ಗಾಯಿಸುತ್ತಾರೆ.

ಇದನ್ನೂ ಓದಿ-Good News: 7th Pay Commission - ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಸಿಗಲಿದೆ ಹೆಚ್ಚುವರಿ ಸ್ಯಾಲರಿ! ಎಷ್ಟು ತಿಳಿಯಲು ಈ ಸುದ್ದಿ ಓದಿ

10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಬಾಂಡ್ ಗಳ ಮೇಲೆ ತೆರಿಗೆ
ಒಂದು ಆರ್ಥಿಕ ವರ್ಷದಲ್ಲಿ ಯಾವುದೇ ಒಂದು ಕಂಪನಿ 10 ಲಕ್ಷ ರೂ.ಗಿಂತ ಅಧಿಕ ಬಾಂಡ್ ಅಥವಾ ಡಿಬೆಂಚರ್ ಜಾರಿಗೊಳಿಸಿದರೆ, ಅದನ್ನು ಪಡೆದುಕೊಳ್ಳುವ ವ್ಯಕ್ತಿ ತೆರಿಗೆ ನೀಡಬೇಕು. ಷೇರು ಹಾಗೂ ಮ್ಯೂಚವಲ್ ಫಂಡ್ ಗಳ ಖರೀದಿಯ ಮೇಲೆ ಇದೇ ರೀತಿಯ ಮಿತಿ ನಿರ್ಧರಿಸಲಾಗಿದೆ. ಇವುಗಳ ಮಾಹಿತಿಯನ್ನು ಕೂಡ ಆದಾಯ ತೆರಿಗೆ ಇಲಾಖೆಯ ಜೊತೆಗೆ ಹಂಚಿಕೊಳ್ಳಲಾಗುತ್ತದೆ. 

ಇದನ್ನೂ ಓದಿ-Taxpayer : ಆದಾಯ ತೆರಿಗೆದಾರರಿಗೊಂದು ಮಹತ್ವದ ಮಾಹಿತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News