Bank Alert: ಮೇ 23 ರಂದು ಬ್ಯಾಂಕುಗಳ ಈ ಸೇವೆ ಬಂದ್ ಇರಲಿದೆ, ಇಲ್ಲಿದೆ ಡೀಟೇಲ್ಸ್
Bank Alert: ನೀವೂ ಕೂಡ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಒಂದು ಕೆಲಸ ಮಾಡುವವರಿದ್ದರೆ, ಅದನ್ನು ಈ ವಾರದ ಶನಿವಾರದವರೆಗೆ ಪೂರ್ಣಗೊಳಿಸಿ. ಏಕೆಂದರೆ ಮೇ 23ರಂದು 14 ಗಂಟೆಗಳ ಕಾಲ ಬ್ಯಾಂಕ್ NEFT ಸೇವೆ ಸ್ಥಗಿತಗೊಳಿಸಲಾಗುತ್ತಿದೆ.
Bank Alert: ನೀವೂ ಕೂಡ ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಒಂದು ಕೆಲಸ ಮಾಡುವವರಿದ್ದರೆ, ಅದನ್ನು ಈ ವಾರದ ಶನಿವಾರದವರೆಗೆ ಪೂರ್ಣಗೊಳಿಸಿ. ಏಕೆಂದರೆ ಮೇ 23ರಂದು 14 ಗಂಟೆಗಳ ಕಾಲ ಬ್ಯಾಂಕ್ NEFT ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಮಾಹಿತಿಯನ್ನು ಹಂಚಿಕೊಂಡಿದೆ.
ಮೇ 23, 2021 ರಂದು NEFT ಕಾರ್ಯನಿರ್ವಹಿಸುವುದಿಲ್ಲ (RBI Alert)
ಭಾರತೀಯ ರಿಸರ್ವ್ ಬ್ಯಾಂಕ್ ಪ್ರೆಸ್ ರಿಲೀಸ್ ಹಾಗೂ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. ತಾಂತ್ರಿಕ ಅಪ್ಗ್ರೇಡ್ ಕೆಲಸವಿರುವ ಕಾರಣ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (National Electronic Fund Transfer) ಮೇ 23, 2021ರ ರಾತ್ರಿ 12 ಗಂಟೆಯಿಂದ ಮಾರನೆಯ ದಿನ 2 ಗಂಟೆಯವರೆಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಅದಲ್ಲದೆ ಗ್ರಾಹಕರು ಮದಲೆ NEFT ಸೇವೆಯ ಮೂಲಕ ಹಣವನ್ನು ವರ್ಗಾಯಿಸಿಕೊಳ್ಳಲು ಪ್ಲಾನ್ ಪೂರ್ಣಗೊಳಿಸಬೇಕು ಎಂದು ಕೇಂದ್ರೀಯ ಬ್ಯಾಂಕ್ ಸೂಚಿಸಿದೆ.
Alert! ಇಂದು ರಾತ್ರಿ 12 ಗಂಟೆಯ ಬಳಿಕ ಬ್ಯಾಂಕ್ ಗಳ ಈ ಸೇವೆ ಸ್ಥಗಿತಗೊಳ್ಳಲಿದೆ: RBI
ಮೊದಲೇ ನಿಮ್ಮ ಕೆಲಸ ಪೂರ್ಣಗೊಳಿಸಿ
ಈ ಕುರಿತು ಎಲ್ಲ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮೊದಲೇ ಸೂಚನೆ ನೀಡಬೇಕು ಇದರಿಂದ ಗ್ರಾಹಕರಿಗಾಗುವ ಅನಾನುಕೂಲತೆಯನ್ನು ತಪ್ಪಿಸಬೇಕು ಎಂದು ಸೂಚಿಸಿದೆ. ಇಂತಹುದೇ ಒಂದು ತಾಂತ್ರಿಕ ಅಪ್ಗ್ರೇಡ್ (RTGS) ಏಪ್ರಿಲ್ 18ರಂದು ನಡೆಸಲಾಗಿತ್ತು. NEFT ಸದಸ್ಯರಿಗೆ NEFT ಸಿಸ್ಟಮ್ ಬ್ರಾಡ್ಕಾಸ್ಟ್ ಮೂಲಕ ಅಪ್ಗ್ರೇಡ್ ಕುರಿತುಮಾಹಿತಿ ಸಿಗಲಿದೆ.
ಇದನ್ನೂ ಓದಿ-RBI Monetary Policy : ಇನ್ನು ಅಗ್ಗವಾಗುವುದಿಲ್ಲ ಹೋಂ ಲೋನ್, ಬಡ್ಡಿದರದಲ್ಲಿ ಬದಲಾವಣೆ ಇಲ್ಲ
NEFT ಹೇಗೆ ಕಾರ್ಯನಿರ್ವಹಿಸುತ್ತದೆ?
NEFT ಸಂಪೂರ್ಣ ದೇಶಾದ್ಯಂತ ನಡೆಸಲಾಗುವ ಹಣ ಪಾವತಿ ವ್ಯವಸ್ಥೆಯಾಗಿದೆ. ಇದರಿಂದ ಬ್ಯಾಂಕ್ ನ ಒಂದು ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು (Online Banking). ಕೇವಲ ಕೆಲವೇ ನಿಮಿಷಗಳಲ್ಲಿ ಗ್ರಾಹಕರು NEFT ಸೇವೆ ಬಳಸಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಒಂದು ವೇಳೆ ನೀವೂ ಕೂಡ ಖಾತೆಯನ್ನು ಹೊಂದಿದ್ದರೆ, ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ (DigitalBanking) ಮೂಲಕ NEFT ವರ್ಗಾವಣೆ ಮಾಡಬಹುದು.
ಇದನ್ನೂ ಓದಿ-ATMನಿಂದ ಹಣ ವಿತ್ ಡ್ರಾ ಮಾಡಿದಾಗ ಹರಿದ ನೋಟು ಸಿಕ್ಕಿದರೆ ಚಿಂತೆಬಿಟ್ಟು ಈ ಕೆಲಸ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.