RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ

Inflation Rate - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ (Coronavirus Second Wave) ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಹಾಗೂ ಲಾಕ್ ಡೌನ್ (Lockdown) ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ.

Written by - Nitin Tabib | Last Updated : Apr 27, 2021, 01:09 PM IST
  • ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳ ಹಿನ್ನೆಲೆ RBI ಎಚ್ಚರಿಕೆ.
  • ಕೊರೊನಾ ಲಾಕ್ ಡೌನ್ ಹಿನ್ನೆಲೆ ಸಪ್ಲೈ ಚೈನ್ ಕುಂಠಿತಗೊಳ್ಳುವ ಸಾಧ್ಯತೆ ಇದೆ.
  • ಇದರಿಂದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಹಣದುಬ್ಬರ ವಿಪರೀತ ಹೆಚ್ಚಾಗಲಿದೆ.
RBI Alert! ದೇಶಾದ್ಯಂತ ಹಣದುಬ್ಬರ ಹೆಚ್ಚಾಗಲಿದೆ, ಕಾರಣ ಇಲ್ಲಿದೆ title=
Inflation Rate (File Photo)

ನವದೆಹಲಿ :  Inflation Rate - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ (Covid-19 Second Wave)ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆ ಹಾಗೂ ಲಾಕ್ ಡೌನ್ (Lockdown) ಹಿನ್ನೆಲೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ಇದೇ ರೀತಿ ದೇಶಾದ್ಯಂತ ಒಂದು ವೇಳೆ ಕೊರೊನಾ ಪ್ರಕರಣಗಳು ಹೆಚ್ಚಾದರೆ, ಇಡೀ ದೇಶ ಲಾಕ್ ಡೌನ್ ಆಗಲಿದೆ ಹಾಗೂ ಸಪ್ಲೈ ಚೈನ್ ಇದರಿಂದ ಪ್ರಭಾವಿತಗೊಳ್ಳಲಿದೆ ಹಾಗೂ ದೇಶಾದ್ಯಂತ ಹಣದುಬ್ಬರ (Inflation) ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಇದನ್ನೂ ಓದಿ- Corona ರೋಗಿಗಳು ಅಪ್ಪಿ-ತಪ್ಪಿಯೂ ಇಂತಹ ಆಹಾರ ಸೇವಿಸಬೇಡಿ, ನಿಮ್ಮ ಡಯಟ್ ಹೀಗಿರಲಿ

RBI ಹೇಳಿದ್ದೇನು?
ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಸಮಯ ಇರುವಾಗಲೇ ಒಂದು ವೇಳೆ ಕೊರೊನಾ ಪ್ರಕರಣಗಳ (Coronavirus Case In India) ಮೇಲೆ ಹತೋಟಿ ಸಾಧಿಸದೆ ಹೋದಲ್ಲಿ, ಸರಕುಗಳ ಸಾಗಾಣಿಕೆ ಮೇಲೆ ದೀರ್ಘಕಾಲದ ನಿರ್ಬಂಧ ಬೀಳಲಿದ್ದು, ಇದರಿಂದ ಸಪ್ಲೈ ಚೈನ್ ಹಾಳಾಗಲಿದೆ. ಫ್ಯುಯೆಲ್ ಇನಫ್ಲೇಶನ್ (Fuel Inflation)ಕೂಡ ಹೆಚ್ಚಾಗಲಿದ್ದು ಇಡೀ ದೇಶ ಹಣದುಬ್ಬರ ಅಪಾಯ ಎದುರಿಸುವ ಸಾಧ್ಯತೆ ಇದೆ. RBI ಅಂಕಿ-ಅಂಶಗಳ ಪ್ರಕಾರ ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (Consumer Price Index) ಆಧರಿಸಿರುವ ಹಣದುಬ್ಬರ ಮಾರ್ಚ್ ನಲ್ಲಿ ಶೇ.5.5 ರಷ್ಟಾಗಿದ್ದು, ಫೆಬ್ರುವರಿ ತಿಂಗಳಿನಲ್ಲಿ ಇದು ಶೇ.5 ರಷ್ಟಿತ್ತು. ಇನ್ನೊಂದೆಡೆ ಖಾದ್ಯ ಹಾಗೂ ಇಂಧನದ ಬೆಲೆಯೂ ಕೂಡ ವಿಪರೀತ ಏರಿಕೆ ಕಂಡಿವೆ ಎನ್ನಲಾಗಿದೆ.

ಇದನ್ನೂ ಓದಿ- ಮನೆಗಳಲ್ಲಿಯೂ Face Mask ಧರಿಸುವ ಕಾಲ ಬಂದಿದೆ, ನೀತಿ ಆಯೋಗದ ಸದಸ್ಯ ವಿ.ಕೆ ಪಾಲ್ ಎಚ್ಚರಿಕೆ!

ಮೇ ತಿಂಗಳಿನಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ
ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಸೇರಿದಂತೆ ಹಲವು ನಿರ್ಬಂಧನೆಗಳನ್ನು ವಿಧಿಸಲಾಗಿದೆ. ಈ ಕಾರಣದಿಂದ ಔಟ್ ಲುಕ್ ನಲ್ಲಿ ಭಾರಿ ಅನಿಶ್ಚಿತತೆಯ ವಾತಾವರಣ ನಿರ್ಮಾಣಗೊಂಡಿದೆ. ಇದರಿಂದ ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಹಣದುಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಕೊರೊನಾ ಪ್ರಕರಣಗಳ ಏರಿಕೆಯ ಹಿನ್ನೆಲೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ 15 ದಿನಗಳಿಂದ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇನ್ನೊಂದೆಡೆ ಮಹಾರಾಷ್ಟ್ರದಂತಹ ವಿಶಾಲ ರಾಜ್ಯದಲ್ಲಿ ಲಾಕ್ ಡೌನ್ ಇರುವ ಕಾರಣ ಸಪ್ಲೈ ಚೈನ್ ಕುಂಠಿತಗೊಳ್ಳುತ್ತಿದೆ. ಉಳಿದ ಕೆಲ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ನಿರ್ಬಂಧನೆಗಳು ಇರುವ ಕಾರಣ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಕಾಣಲು ಸಿಗಲಿದೆ.

ಇದನ್ನೂ ಓದಿ-ರಾಜ್ಯ ಸರ್ಕಾರದಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ 'ಉಚಿತ ಕೊರೋನಾ ಲಸಿಕೆ'..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News