Bank Alert: ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಬಾಕಿ ಇದ್ದರೆ, ಅದನ್ನು ಶನಿವಾರದ ಒಳಗೆ ಮುಗಿಸಿಕೊಳ್ಳಿ. ಏಕೆಂದರೆ ಶನಿವಾರ ಮಧ್ಯರಾತ್ರಿಯಿಂದ ಎಲ್ಲಾ ಬ್ಯಾಂಕುಗಳ NEFT ಸೇವೆ ನಿಂತುಹೋಗಲಿದೆ. ಅಂದರೆ ಸುಮಾರು 14 ಗಂಟೆಗಳ ಕಾಲ ನ್ಯಾಷನಲ್ ಎಲೆಕ್ಟ್ರಾನಿಕ್ ಫಂಡ್ ಟ್ರಾನ್ಸ್ಫರ್ (NEFT) ಸೇವೆ ಬಂದ್ ಇರಲಿದೆ.


COMMERCIAL BREAK
SCROLL TO CONTINUE READING

ಮೇ 23ರಿಂದ ಪುನಃ ಕಾರ್ಯಾರಂಭ
ರಿಸರ್ ಬ್ಯಾಂಕ್ ನೀಡಿರುವ ಮಾಧ್ಯಮ ಪ್ರಕಟಣೆಯ ಜೊತೆಗೆ ಟ್ವೀಟ್ ಮಾಹಿತಿಯ ಪ್ರಕಾರ ತಾಂತ್ರಿಕ ಉನ್ನತಿಕರಣದ ಹಿನ್ನೆಲೆ  NEFT (National Electronic Funds Transfer) ಕಾರ್ಯನಿರ್ವಹಿಸುವುದಿಲ್ಲ . ಹೀಗಾಗಿ ಗ್ರಾಹಕರು NEFT ಮೂಲಕ ಹಣ ವರ್ಗಾವಣೆಯ ಯೋಜನೆಯನ್ನು ಮೊದಲೇ ಪೂರ್ಣಗೊಳಿಸಬೇಕು ಎಂದು ಹೇಳಿದೆ.


ಈ ಕುರಿತು ಹೇಳಿಕೆ ನೀಡಿರುವ  RBI, NEFT ಸೇವೆಯ ಪರ್ಫಾರ್ಮೆನ್ಸ್ ಹಾಗೂ ರಿಜಿಲಿಯನ್ಸ್ ಅನ್ನು ಉತ್ತಮಗೊಳಿಸಲು ತಾಂತ್ರಿಕವಾಗಿ ಉನ್ನತ ದರ್ಜೆಗೆ ಏರಿಸಲಾಗುತ್ತಿದೆ ಎಂದಿದೆ. ಈ ಉನ್ನತೀಕರಣ ಮೇ 22, 2021ರ ದಿನದ ವಹಿವಾಟುಗಳು ಪೂರ್ಣಗೊಂಡ ಬಳಿಕ ನಡೆಸಲಾಗುವುದು. ಇದೆ ಕಾರಣದಿಂದ ಮೇ 22 ರಂದು ರಾತ್ರಿ 12 ಗಂಟೆಗೆ ಈ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡು, ಮೇ 23, 2021 ರ ಮಧ್ಯಾಹ್ನ 2 ಗಂಟೆಯವರೆಗೆ ಬಂದ್ ಇರಲಿದೆ ಎಂದು ಹೇಳಿದೆ. ಆದರೆ ಈ ಅವಧಿಯಲ್ಲಿ RTGS (Real Time Gross Settlement) ಸೇವೆ ಅಬಾಧಿತವಾಗಿರಲಿದೆ ಎಂದು RBI ಸ್ಪಷ್ಟಪಡಿಸಿದೆ. 


ಇದನ್ನೂ ಓದಿ- ITR Filing : ತೆರಿಗೆದಾರರಿಗೆ ಗುಡ್ ನ್ಯೂಸ್: IT ರಿಟರ್ನ್ಸ್ ದಿನಾಂಕ 2 ತಿಂಗಳು ವಿಸ್ತರಣೆ!


ಮೊದಲೇ ನಿಮ್ಮ ಕೆಲಸ ಪೂರ್ಣಗೊಳಿಸಿ
ಈ ಕುರಿತು ಎಲ್ಲ  ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮೊದಲೇ ಸೂಚನೆ ನೀಡಬೇಕು ಇದರಿಂದ ಗ್ರಾಹಕರಿಗಾಗುವ ಅನಾನುಕೂಲತೆಯನ್ನು ತಪ್ಪಿಸಬೇಕು ಎಂದು ಸೂಚಿಸಿದೆ. ಇಂತಹುದೇ ಒಂದು ತಾಂತ್ರಿಕ ಅಪ್ಗ್ರೇಡ್ (RTGS) ಏಪ್ರಿಲ್ 18ರಂದು ನಡೆಸಲಾಗಿತ್ತು. NEFT ಸದಸ್ಯರಿಗೆ NEFT ಸಿಸ್ಟಮ್ ಬ್ರಾಡ್ಕಾಸ್ಟ್ ಮೂಲಕ ಅಪ್ಗ್ರೇಡ್ ಕುರಿತುಮಾಹಿತಿ ಸಿಗಲಿದೆ.


ಇದನ್ನೂ ಓದಿ-Bank Alert‌ : 3 ದಿನ 'SBI ಇಂಟರ್ನೆಟ್ ಬ್ಯಾಂಕಿಂಗ್ UPI, YONO ಬಂದ್ : ಇಲ್ಲಿದೆ ಸಂಪೂರ್ಣ ಮಾಹಿತಿ


NEFT ಹೇಗೆ ಕಾರ್ಯನಿರ್ವಹಿಸುತ್ತದೆ?
NEFT ಸಂಪೂರ್ಣ ದೇಶಾದ್ಯಂತ ನಡೆಸಲಾಗುವ ಹಣ ಪಾವತಿ ವ್ಯವಸ್ಥೆಯಾಗಿದೆ. ಇದರಿಂದ ಬ್ಯಾಂಕ್ ನ ಒಂದು ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಹುದು (Online Banking). ಕೇವಲ ಕೆಲವೇ ನಿಮಿಷಗಳಲ್ಲಿ ಗ್ರಾಹಕರು NEFT ಸೇವೆ ಬಳಸಿ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಒಂದು ವೇಳೆ ನೀವೂ ಕೂಡ ಖಾತೆಯನ್ನು ಹೊಂದಿದ್ದರೆ, ನೀವು ಬ್ಯಾಂಕ್ ಶಾಖೆಗೆ ಭೇಟಿ ನೀಡದೆ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ (Digital Banking) ಮೂಲಕ NEFT ವರ್ಗಾವಣೆ ಮಾಡಬಹುದು. 


ಇದನ್ನೂ ಓದಿ- Work from home ನಿಂದ ಬೇಸತ್ತಿದ್ದರೆ IRCTC ನೀಡುತ್ತಿದೆ ವರ್ಕ್ ಫ್ರಮ್ ಹೊಟೇಲ್ ಆಫರ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.