SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್

ಕೊರೊನಾವೈರಸ್  ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ತನ್ನ ಗ್ರಾಹಕರಿಗೆ ಕಾಂಟಾಕ್ಟ್ ಲೆಸ್ ಸೇವೆಯನ್ನು ಒದಗಿಸುತ್ತಿದೆ. ಈಗ ಗ್ರಾಹಕರು ಮನೆಯಲ್ಲೇ ಕುಳಿತು ಬ್ಯಾಂಕಿಗೆ ಸಂಬಂಧಪಟ್ಟ ಬಹಳಷ್ಟು ಕೆಲಸಗಳನ್ನು ಪೂರೈಸಿಕೊಳ್ಳಬಹುದು.   

Written by - Ranjitha R K | Last Updated : May 20, 2021, 10:24 AM IST
  • ಗ್ರಾಹಕರಿಗೆ ಹೊಸ ಹೊಸ ಸೌಲಭ್ಯ ಒದಗಿಸುತ್ತಿದೆ ಎಸ್ ಬಿಐ
  • ಕುಳಿತಲ್ಲಿಂದಲೇ ಡೆಬಿಟ್ ಕಾರ್ಡ್‌ನ ಪಿನ್ ಜನರೇಟ್ ಮಾಡಬಹುದು
  • IVR ಮೂಲಕ ಪಿನ್ ಜನರೇಟ್ ಮಾಡಬಹುದು
SBI Debit Card PIN: ಕುಳಿತಲ್ಲೇ ಜನರೇಟ್ ಮಾಡಬಹುದು ಎಸ್ ಬಿಐ ಡೆಬಿಟ್ ಕಾರ್ಡ್ ಪಿನ್  title=
ಗ್ರಾಹಕರಿಗೆ ಹೊಸ ಹೊಸ ಸೌಲಭ್ಯ ಒದಗಿಸುತ್ತಿದೆ ಎಸ್ ಬಿಐ (file photo)

ನವದೆಹಲಿ : ಅತಿದೊಡ್ಡ ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹೊಸ ಸೌಲಭ್ಯಗಳನ್ನು ಒದಗಿಸುತ್ತಿದೆ. ಎಸ್‌ಬಿಐ ತನ್ನ ಗ್ರಾಹಕರಿಗೆ ಕುಳಿತಲ್ಲಿಂದಲೇ ಡೆಬಿಟ್ ಕಾರ್ಡ್‌ನ ಪಿನ್ ಜನರೇಟ್ ಮಾಡುವ ಸೌಲಭ್ಯವನ್ನು ನೀಡುತ್ತಿದೆ.

ಕೊರೊನಾವೈರಸ್ (Coronavirus) ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಕಾಂಟಾಕ್ಟ್ ಲೆಸ್ ಸೇವೆಯನ್ನು (Contactless Service) ಒದಗಿಸುತ್ತಿದೆ. ಈಗ ಗ್ರಾಹಕರು ಮನೆಯಲ್ಲೇ ಕುಳಿತು ಬ್ಯಾಂಕಿಗೆ ಸಂಬಂಧಪಟ್ಟ ಬಹಳಷ್ಟು ಕೆಲಸಗಳನ್ನು ಪೂರೈಸಿಕೊಳ್ಳಬಹುದು. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಬಿಟ್ ಕಾರ್ಡ್ (Debit card) ಹೊಂದಿದ್ದರೆ,  ಅದರ ಪಿನ್ ಅನ್ನು ಮನೆಯಲ್ಲಿ ಕುಳಿತೇ ಜನರೇಟ್ ಮಾಡಬಹುದು. ಈ ಪಿನ್ ಅನ್ನು ಗ್ರೀನ್ ಪಿನ್ ಎಂದು ಕರೆಯುತ್ತಾರೆ. ಈ ಪಿನ್ ಅನ್ನು IVR  ಸಿಸ್ಟಮ್ ನಿಂದಲೂ ಜನರೇಟ್ ಮಾಡಬಹುದು. ಎಸ್‌ಬಿಐ ಟ್ವೀಟ್ (Tweet) ಮಾಡುವ ಮೂಲಕ ಈ ಪ್ರೊಸೇಸ್ ಅನ್ನು ಶೇರ್ ಮಾಡಿದೆ.  ಹಂಚಿಕೊಂಡಿದೆ.

ಇದನ್ನೂ ಓದಿ : LPG Discount: 809 ರೂ. ಎಲ್‌ಪಿಜಿ ಸಿಲಿಂಡರ್ ಅನ್ನು ಕೇವಲ 9 ರೂಪಾಯಿಗೆ ಖರೀದಿಸಿ! ಆಫರ್ ಮೇ 31 ರವರೆಗೆ ಮಾತ್ರ

IVR  ಮೂಲಕ ಪಿನ್ ಜನರೇಟ್ ಮಾಡಬಹುದು (Generate PIN through IVR): 

ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಟೋಲ್ ಫ್ರೀ ಸಂಖ್ಯೆ 1800 112 211 ಅಥವಾ 1800 425 3800 ಗೆ ಕರೆ ಮಾಡಿ. ಕರೆ ಮಾಡುವ ವೇಳೆ ನಿಮ್ಮ ಎಟಿಎಂ ಕಾರ್ಡ್ ಮತ್ತು ಖಾತೆ ಸಂಖ್ಯೆಯನ್ನು ತೆಗೆದಿಟ್ಟುಕೊಳ್ಳಿ. ಅಗತ್ಯವಿದ್ದರೆ ಇವುಗಳನ್ನು ತಕ್ಷಣ ನಮೂದಿಸಬಹುದು. 

ಗ್ರೀನ್ ಪಿನ್ ಜನರೇಟ್ ಮಾಡುವ ವಿಧಾನ (Process to generate Green PIN) : 
ನಿಮ್ಮ ಕಾಲ್ ಕನೆಕ್ಟ್ ಆದ ಕೂಡಲೇ ಎಟಿಎಂ / ಡೆಬಿಟ್ ಕಾರ್ಡ್ ಸೇವೆಗಳಿಗಾಗಿ 2 ಒತ್ತಿರಿ.
ಐವಿಆರ್ ಮೆನುವಿನಿಂದ ಪಿನ್ ಜನರೇಟ್ ಮಾಡಲು 1 ಒತ್ತಿರಿ.
- ನೋಂದಾಯಿತ ಮೊಬೈಲ್ (Mobile) ಸಂಖ್ಯೆಯಿಂದ ಕರೆ ಮಾಡುವಾಗ, ಐವಿಆರ್ ನಿಮ್ಮನ್ನು 1 ಒತ್ತುವಂತೆ ಕೇಳುತ್ತದೆ ಅಥವಾ ಕಸ್ಟಮರ್ ಏಜೆಂಟ್ ಜೊತೆ ಮಾತನಾಡಲು 2 ನಂಬರ್ ಅನ್ನು ಒತ್ತುವಂತೆ ಹೇಳಲಾಗುತ್ತದೆ. .
- ನೀವು ಯಾವ ATMನ ಗ್ರೀನ್ ಪಿನ್ ಜನರೇಟ್ ಮಾಡಲು ಬಯಸುತ್ತೀರೋ, ಅದರ ಕೊನೆಯ 5 ಅಂಕೆಗಳನ್ನು ಡಯಲ್ ಮಾಡಿ.
- ಈ ಐದು 5 ಅಂಕೆಗಳನ್ನು ಖಚಿತಪಡಿಸಲು ಮತ್ತೆ 1 ನ್ನು ಒತ್ತಿರಿ.
- ಕೊನೆಯ 5 ಅಂಕೆಗಳನ್ನು ಮತ್ತೆ ನಮೂದಿಸಲು 2 ನಂಬರ್ ಅನ್ನು ಒತ್ತಬೇಕು.
-ಈಗ ನೀವು ಹುಟ್ಟಿದ ದಿನಾಂಕವನ್ನು ನಮೂದಿಸಬೇಕು.

ಇದನ್ನೂ ಓದಿ : Free Service Offer: ಈ Automobile ಕಂಪನಿಯ ಗ್ರಾಹಕರಿಗೊಂದು ಸಂತಸದ ಸುದ್ದಿ, ಜುಲೈ 31 ರವೆರೆಗೆ ಎಲ್ಲಾ ವಾಹನ ಮಾಡೆಲ್ ಗಳ ಉಚಿತ ಸರ್ವಿಸ್

ಇಷ್ಟಾದ ನಂತರ ನಿಮ್ಮ ಗ್ರಿನ್ ಪಿನ್ (Green PIN) ಜನರೇಟ್ ಆಗುತ್ತದೆ. ಇದನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಎಸ್‌ಬಿಐನ ಯಾವುದೇ ಎಟಿಎಂಗೆ 24 ಗಂಟೆಗಳ ಒಳಗೆ ಭೇಟಿ ನೀಡುವ ಮೂಲಕ ನೀವು ಈ ಪಿನ್ ಅನ್ನು ಬದಲಾಯಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News