ಬೆಂಗಳೂರು : ಇನ್ನೇನು ಜುಲೈ ತಿಂಗಳು ಮುಗಿಯಲಿದೆ. ಆಗಸ್ಟ್  ಮೊದಲ ದಿನದಿಂದ ಪ್ರತಿ ತಿಂಗಳಿನಂತೆ ಈ ಬಾರಿಯೂ ಕೆಲವು ಬದಲಾವಣೆಗಳು ಆಗಲಿವೆ. ಈ ನಿಯಮಗಳಲ್ಲಿ ಆಗುವ ಬದಲಾವಣೆಗಳು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತವೆ. ಇದಲ್ಲದೆ, ಈ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಪ್ರತಿ ತಿಂಗಳಿಗಿಂತ ಹೆಚ್ಚಿನ ರಜೆಗಳು ಇರುತ್ತವೆ. 


COMMERCIAL BREAK
SCROLL TO CONTINUE READING

ಬ್ಯಾಂಕ್ ಆಫ್ ಬರೋಡಾ ಚೆಕ್ ಪಾವತಿ ವ್ಯವಸ್ಥೆ :
ಆಗಸ್ಟ್ 1 ರಿಂದ, ಬ್ಯಾಂಕ್ ಆಫ್ ಬರೋಡಾದ ಚೆಕ್ ಮೂಲಕ ಪಾವತಿಯ ನಿಯಮಗಳು ಬದಲಾಗಲಿವೆ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್ ಆಫ್ ಬರೋಡಾ ಗ್ರಾಹಕರಿಗೆ ಆಗಸ್ಟ್ 1 ರಿಂದ 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಚೆಕ್‌ಗಳಿಗೆ  ಪೊಸಿಟಿವ್ ಪೆ ಸಿಸ್ಟಮ್ ಅನ್ನು ಜಾರಿಗೆ ತರಲಿದೆ. ಇದರ ಅಡಿಯಲ್ಲಿ, ಬ್ಯಾಂಕ್ ಎಸ್‌ಎಂಎಸ್, ನೆಟ್ ಬ್ಯಾಂಕಿಂಗ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಚೆಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ನೀಡಬೇಕು.


ಇದನ್ನೂ ಓದಿ : Bank Holiday : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಆಗಸ್ಟ್‌ನಲ್ಲಿ 13 ದಿನ ಬಂದ್..!


ಎಲ್‌ಪಿಜಿ ಬೆಲೆಗಳು : 
ಈ ಬಾರಿಯೂ ಆಗಸ್ಟ್ 1ರಿಂದ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಬದಲಾಗುವ ಸಾಧ್ಯತೆ ಇದೆ. ಈ ಬಾರಿ ಕಂಪನಿಗಳು ಗೃಹೋಪಯೋಗಿ ಮತ್ತು ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಬಹುದು. ಈ ಬಾರಿ ಒಂದು ಸಿಲಿಂಡರ್ ದರ 20ರಿಂದ 30 ರೂಪಾಯಿವರೆಗೆ ಬದಲಾಗಬಹುದು ಎನ್ನುತ್ತವೆ ಮೂಲಗಳು. ಕಳೆದ ಬಾರಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಗ್ಗವಾಗಿದ್ದು, ಗೃಹಬಳಕೆಯ ಗ್ಯಾಸ್ ಸಿಲಿಂಡರ್ 50 ರೂ.ಗಳಷ್ಟು ದುಬಾರಿಯಾಗಿತ್ತು. 


18 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ : 
ಆಗಸ್ಟ್‌ನಲ್ಲಿ ಮೊಹರಂ, ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ ಮುಂತಾದ ಹಲವು ಹಬ್ಬಗಳು ಬರಲಿವೆ. ಈ ಕಾರಣಕ್ಕೆ ಈ ಬಾರಿ ವಿವಿಧ ರಾಜ್ಯಗಳು ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಆಗಲಿವೆ. ಆಗಸ್ಟ್‌ನಲ್ಲಿ ಹಲವಾರು ದಿನಗಳವರೆಗೆ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ ಎಂದು . ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಿಸಿದೆ. ಈ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ನಾಲ್ಕು ಭಾನುವಾರ ಸೇರಿದಂತೆ ಒಟ್ಟು 18 ದಿನಗಳ ಕಾಲ ಬ್ಯಾಂಕ್‌  ರಜೆ ಇರಲಿವೆ. 


ಇದನ್ನೂ ಓದಿ : Arecanut Price: ಇಂದಿನ ಅಡಿಕೆ ದರ, ಯಾವ ಮಾರುಕಟ್ಟೆಯಲ್ಲಿ ಎಷ್ಟು ಬೆಲೆ ಇದೆ..?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.