Bank Fraud: ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಇಂತಹ ಪಠ್ಯ ಸಂದೇಶಗಳ ಬಗ್ಗೆ ಇರಲಿ ಎಚ್ಚರ
Bank Fraud: ತಂತ್ರಜ್ಞಾನ ಮುಂದುವರೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗುತ್ತಿವೆ. ಇಂತಹ ವಂಚನೆಗಳಿಂದ ನೀವು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಬಯಸಿದರೆ ಇದಕ್ಕಾಗಿ ಆರ್‌ಬಿಐನ ಈ ಮಾರ್ಗಸೂಚಿಗಳನ್ನು ಅನುಸರಿಸುವುದು ತುಂಬಾ ಅಗತ್ಯ.
Bank Fraud: ಸ್ಮಾರ್ಟ್‌ಫೋನ್ ಬಂದ ಮೇಲೆ ನಮ್ಮ ಸಾಕಷ್ಟು ಕೆಲಸಗಳು ತುಂಬಾ ಸುಲಭವಾಗಿವೆ. ತಂತ್ರಜ್ಞಾನ ಮುಂದುವರೆದಂತೆ ಅನುಕೂಲತೆಗಳು ಹೆಚ್ಚಾದಂತೆ ಅಪಾಯಗಳೂ ಕೂಡ ಅಧಿಕವಾಗಿದೆ. ಇತ್ತೀಚಿನ ದಿನಗಳಲ್ಲಿ ಆನ್ಲೈನ್, ಡಿಜಿಟಲ್ ಬ್ಯಾಂಕಿಂಗ್ ಪ್ರವೃತ್ತಿ ಹೆಚ್ಚಾಗಿದೆ. ಇದು ನಮ್ಮ ಕೆಲಸವನ್ನು ಅಕ್ಷರಶಃ ಸುಲಭಗೊಳಿಸಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಆದರೆ, ಬ್ಯಾಂಕ್ ಕೊಡುಗೆಗಳು, ಲೋನ್ ಕೊಡುಗೆಗಳ ಹೆಸರಿನಲ್ಲಿ ಬರುವ ಕರೆಗಳು, ಸಂದೇಶಗಳ ಬಗ್ಗೆ ಕೊಂಚ ನಿರ್ಲಕ್ಷ್ಯ ವಹಿಸಿದರೂ ಸಹ ಬ್ಯಾಂಕ್ ಖಾತೆ ಖಾಲಿಯಾಗುವುದು ನಿಶ್ಚಿತ. ಇಂತಹ ಅಪಾಯಗಳನ್ನು ತಪ್ಪಿಸಲು ಬ್ಯಾಂಕ್ ಖಾತೆಯನ್ನು ವಂಚನೆಯಿಂದ ರಕ್ಷಿಸಲು ಕೆಲವು ಪಠ್ಯ ಸಂದೇಶಗಳ ಬಗ್ಗೆ ಎಚ್ಚರಿಕೆ ಬಹಳ ಅಗತ್ಯ.
ವಾಸ್ತವವಾಗಿ, ಬ್ಯಾಂಕಿಂಗ್ ಹೆಸರಿನಲ್ಲಿ ಬರುವ ಕೆಲವು ಸಂದೇಶಗಳು ನಮ್ಮನ್ನು ಅಪಾಯಕ್ಕೆ ದೂಡಬಹುದು. ಇಂತಹ ವಂಚನೆಗಳಿಂದ ನೀವು ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಬಯಸಿದರೆ ಇದಕ್ಕಾಗಿ ಆರ್‌ಬಿಐನ ಈ ಮಾರ್ಗಸೂಚಿಗಳನ್ನು ಅನುಸರಿಸುವುದು ತುಂಬಾ ಅಗತ್ಯ. ಅವುಗಳೆಂದರೆ...
ಪ್ರೀ ಅಪ್ರೂವ್ಡ್ ಲೋನ್ (ಪೂರ್ವ ಅನುಮೋದಿತ ಸಾಲ):
ಸಾಮಾನ್ಯವಾಗಿ, ನಿರ್ದಿಷ್ಟ ಬ್ಯಾಂಕ್‌ನಿಂದ ನಿಮಗೆ ಸಾಲ ಲಭ್ಯವಾಗಲಿದೆ. ಇದಕ್ಕಾಗಿ ನಿಮಗೆ ಯಾವುದೇ ಡಾಕ್ಯುಮೆಂಟ್ ನೀಡುವ ಅಗತ್ಯವಿಲ್ಲ ಎಂಬಂತಹ ಸಂದೇಶಗಳನ್ನು ನೀವು ಹಲವು ಬಾರಿ ಸ್ವೀಕರಿಸಿರಬಹುದು. ನಿಮ್ಮ ಫೋನ್‌ನಲ್ಲಿ ಬರುವ ಇಂತಹ ಸಂದೇಶಗಳನ್ನು ನೀವು ನಿರ್ಲಕ್ಷಿಸುವುದು ಉತ್ತಮ. ಇಲ್ಲದಿದ್ದರೆ ಮೋಸ ಹೋಗಬಹುದು.
ಇದನ್ನೂ ಓದಿ- ಚಳಿಗಾಲದಲ್ಲಿ ರೈಲು ವಿಳಂಬವಾಗಿ ಚಲಿಸುತ್ತಿದೆಯೇ? ಕೇವಲ ರೂ.25ಕ್ಕೆ ಈ ರೀತಿ ಎಸಿ ರೂಂ ಬುಕ್ ಮಾಡಿ!
ಬ್ಯಾಂಕ್ ಆಫರ್ಸ್:
ಈ ಬ್ಯಾಂಕ್‌ನಲ್ಲಿ ಖಾತೆ ತೆರೆಯುವ ಮೂಲಕ ಹೆಚ್ಚಿನ ಪ್ರಯೋಜನ ಲಭ್ಯವಾಗಲಿದೆ ಎಂಬ ಮಾಹಿತಿಯನ್ನು ನೀಡುವಂತಹ ಸಂದೇಶಗಳನ್ನು ನೀವು ನಿರ್ಲಕ್ಷಿಸುವುದು ಒಳ್ಳೆಯದು.
ತ್ವರಿತ ನಗದು ಸಾಲ:
ಪ್ರಿಯ ಬ್ಯಾಂಕ್ ಗ್ರಾಹಕರೆ ನಿಮಗಾಗಿ ಬ್ಯಾಂಕ್‌ನಿಂದ ತ್ವರಿತ ನಗದು ಸಾಲ ನೀಡಲಾಗುತ್ತಿದೆ. ಅದೂ ಕೂಡ ತುಂಬಾ ಸುಲಭ ಪ್ರಕ್ರಿಯೆಗಳಲ್ಲಿ ನೀವು ತ್ವರಿತವಾಗಿ ನಗದು ಸಾಲ ಪಡೆಯಬಹುದು ಎಂಬ ಸಂದೇಶಗಳನ್ನು ನೀವು ಸ್ವೀಕರಿಸುತ್ತಿದ್ದರೆ ಇದನ್ನು ನಿರ್ಲಕ್ಷಿಸಿ. ಈ ರೀತಿಯ ಸಂದೇಶವು ಯಾವುದೇ ಪರಿಶೀಲಿಸಿದ ಮಾಧ್ಯಮದ ಮೂಲಕ ಬಂದಿರಬಹುದು. ಹಾಗಾಗಿ ಇದನ್ನು ನಿರ್ಲಕ್ಷಿಸುವುದು ಉತ್ತಮ.
ಇದನ್ನೂ ಓದಿ- ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, 4500 ರೂಪಾಯಿ ಕಡಿಮೆ.. 10 ಗ್ರಾಂ ಬಂಗಾರದ ದರ ಎಷ್ಟಿದೆ?
OTP ಹಂಚಿಕೊಳ್ಳುವುದು:
ಯಾವುದೇ ಸಂದೇಶದಲ್ಲಿ ನೀವು ಓಟಿಪಿ ಶೇರ್ ಮಾಡುವಂತೆ ಕೇಳಿದ್ದರೆ ಖಂಡಿತವಾಗಿಯೂ ಅಂತಹ ಸಂದೇಶಕ್ಕೆ ಮನಸೋಲಬೇಡಿ. ಜೊತೆಗೆ ಅದನ್ನು ತಕ್ಷಣವೇ ಡಿಲೀಟ್ ಮಾಡಿ. ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಿದರೆ ನಿಮ್ಮ ಬ್ಯಾಂಕ್ ಖಾತೆ ಕ್ಷಣ ಮಾತ್ರದಲ್ಲಿ ಖಾಲಿಯಾಗಬಹುದು.
ಯಾವುದೇ ಬ್ಯಾಂಕ್, ಹಣಕಾಸು ಸಂಸ್ಥೆ ಫೋನ್ ಕರೆ, ಸಂದೇಶದ ಮೂಲಕ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳುವುದಿಲ್ಲ. ಹಾಗಾಗಿ ಯಾರೊಂದಿಗೂ ಸಹ ನಿಮ್ಮ ವೈಯಕ್ತಿಕ ಮಾಹಿತಿ, ಓಟಿಪಿಗಳನ್ನು ಹಂಚಿಕೊಳ್ಳುವ ತಪ್ಪನ್ನು ಎಂದಿಗೂ ಮಾಡಬೇಡಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.