Vinod Kambli And Sachin Tendulkar: ತಮ್ಮ ಕ್ರಿಕೆಟ್ ಗುರು ರಮಾಕಾಂತ್ ಅಚ್ರೇಕರ್ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಚಿಕು ಗೆಳಯ ವಿನೋದ್ ಕಾಂಬ್ಳಿಯನ್ನು ಮಾಸ್ಟರ್ ಬ್ಲ್ಯಾಸ್ಟರ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಭೇಟಿಯಾಗಿದ್ದಾರೆ.
ಗುರುಗಳ ಸ್ಮರಣಾರ್ಥ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ವಿನೋದ್ ಕಾಂಬ್ಳಿ ವೇದಿಕೆಯಲ್ಲಿ ಕೂತಿದ್ದರು. ಈ ವೇಳೆ ವೇದಿಕೆ ಮೇಲೆ ಆಮಿಸಿದ ಸಚಿನ್ ತೆಂಡೂಲ್ಕರ್ ವಿನೋದ್ ಕಾಂಬ್ಳಿಯವರ ಕುಶಲೋಪರಿ ವಿಚಾರಿಸಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಪಕ್ಕದಲ್ಲಿರುವ ಲೇಡಿ ಕಮಾಂಡೋ ನಿಜಕ್ಕೂ ಯಾರು ಗೊತ್ತೇ? ಅಸಲಿ ವಿಚಾರ ಗೊತ್ತಾದರೇ ಶಾಕ್ ಆಗುತ್ತೀರಾ!!
ವಿಪರಿತ ಕುಡಿತದಿಂದಲೇ ತಮ್ಮ ವೃತ್ತಿ ಜೀವನವನ್ನ ಹಾಳುಮಾಡಿಕೊಂಡಿರುವ ವಿನೋದ್ ಕಾಂಬ್ಳಿಗೆ ಇತ್ತೀಚೆಗೆ ಎದ್ದು ಓಡಾಡಲೂ ಆಗದಂತಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅವರಿಗೆ ಮರೆವಿನ ಕಾಯಿಲೆಯೂ ಇದೆ. ಹೀಗಾಗಿಯೇ ವೇದಿಕೆ ಮೇಲೆ ಬಂದ ಸಚಿನ್‌ರನ್ನು ಗುರುತಿಸಲು ಮೊದಲು ಅವರಿಗೆ ಸಾಧ್ಯವಾಗಿರಲಿಲ್ಲ.
Sachin somehow escaped Kambli 🤣
Guy bitched about him on live TV, became an alcoholic, fought with neighbors, wife left him. Yet somehow Sachin was responsible. Tendulkar still has grace to visit him. pic.twitter.com/qNlW6ndkIp
— Gabbar (@GabbbarSingh) December 3, 2024
ಕಾರ್ಯಕ್ರಮದ ವೇದಿಕೆಗೆ ನಂತರ ಬಂದ ಸಚಿನ್ ಅವರು ವಿನೋದ್ ಕೂತಿರುವುದನ್ನು ನೋಡಿ ತಾವೇ ಅವರ ಬಳಿ ಹೋಗಿ ಮಾತನಾಡಿಸಿದ್ದಾರೆ. ಆದರೆ ಸಚಿನ್‌ರನ್ನು ಗುರುತಿಸಲು ಅವರಿಗೆ ಕಷ್ಟವಾಯಿತು. ಬಳಿಕ ತನ್ನ ಕುಚಿಕು ಗೆಳೆಯ ಎಂಬುದು ಗೊತ್ತಾಗಿ ಸಚಿನ್‌ರನ್ನು ಕೈ ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಸಚಿನ್‌ಗೆ ಬೇರೆ ಕಡೆ ಹೋಗದೆ ತನ್ನ ಪಕ್ಕವೇ ಕುಳಿತುಕೊಳ್ಳುವಂತೆ ವಿನೋದ್ ಎಳೆದಾಡಿದ್ದಾರೆ. ಗೆಳೆಯ ಎಳೆದಾಡುತ್ತಿರುವಾಗ ಸಚಿನ್ ಕೊಂಚ ಗಲಿಬಿಲಿಯಾಗಿದ್ದಾರೆ. ಬಳಿಕ ಪಕ್ಕದಲ್ಲಿದ್ದವರು ಸಚಿನ್ ನೆರವಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಕರೋನಾ ಮೊದಲು ಹುಟ್ಟಿದ್ದು ಈ ದೇಶದಲ್ಲಿಯೇ !ಕೊನೆಗೂ ಬುಡದಿಂದಲೇ ಸತ್ಯ ಹೊರ ಹಾಕಿದ ಅಮೆರಿಕಾ
ಗೆಳೆಯ ವಿನೋದ್ ಹಿಡಿತದಿಂದ ತಪ್ಪಿಸಿಕೊಳ್ಳಲು ಒದ್ದಾಡಿದ ಸಚಿನ್, ವೇದಿಕೆಯ ಇನ್ನೊಂದು ಬದಿಯ ಕುರ್ಚಿಯಲ್ಲಿ ಹೋಗಿ ಕುಳಿತುಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ವಿನೋದ್‌ರನ್ನು ಸಚಿನ್ ಆತ್ಮೀಯವಾಗಿಯೇ ಮಾತನಾಡಿಸಿದ್ದಾರೆ. ಆದರೆ ಸಚಿನ್ ಅವರನ್ನ ವಿನೋದ್ ಎಳೆದಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಕೆಲವರು ವಿನೋದ್ ಮಾಡಿದ್ದು ತಪ್ಪು ಅಂತಾ ವಾದಿಸಿದರೆ, ಇನ್ನೂ ಕೆಲವರು ಗೆಳೆಯನ ಜೊತೆಗೆ ಸಚಿನ್ ಅವರು ಈ ರೀತಿ ವರ್ತಿಸಬಾರದಿತ್ತು ಅಂತಾ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.