Bank Holiday February 2022: ಈ ತಿಂಗಳಲ್ಲಿ 9 ದಿನಗಳವರೆಗೆ ಬಂದ್ ಇರಲಿದೆ ಬ್ಯಾಂಕ್
Bank Holiday February 2022:2022 ರ ಎರಡನೇ ತಿಂಗಳು ಅಂದರೆ ಫೆಬ್ರವರಿ ನಡೆಯುತ್ತಿದೆ. ಆರ್‌ಬಿಐ ಬಿಡುಗಡೆ ಮಾಡಿದ ಫೆಬ್ರುವರಿ ಬ್ಯಾಂಕ್ ರಜಾದಿನಗಳ ಪ್ರಕಾರ, ಈ ತಿಂಗಳು ಒಟ್ಟು 9 ದಿನಗಳವರೆಗೆ ಬ್ಯಾಂಕುಗಳು ರಜಾ ಇರಲಿವೆ .
ನವದೆಹಲಿ : Bank Holiday February 2022 : 2022 ರ ಎರಡನೇ ತಿಂಗಳು ಅಂದರೆ ಫೆಬ್ರವರಿ ನಡೆಯುತ್ತಿದೆ. ಆರ್‌ಬಿಐ ಬಿಡುಗಡೆ ಮಾಡಿದ ಫೆಬ್ರುವರಿ ಬ್ಯಾಂಕ್ ರಜಾದಿನಗಳ ಪ್ರಕಾರ, ಈ ತಿಂಗಳು ಒಟ್ಟು 9 ದಿನಗಳವರೆಗೆ ಬ್ಯಾಂಕುಗಳು ರಜಾ ಇರಲಿವೆ (Bank Holidays in February). ಈ ರಜಾದಿನಗಳು ಎರಡನೇ, ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜಾದಿನಗಳನ್ನು ಕೂಡಾ ಒಳಗೊಂಡಿರುತ್ತವೆ. . ಫೆಬ್ರವರಿ ತಿಂಗಳ ಈ ರಜೆಗಳು ದೇಶದ ಎಲ್ಲಾ ಕಡೆ ಬ್ಯಾಂಕ್ ರಜೆ (Bank holiday) ಇರುವುದಿಲ್ಲ. ಯಾವ ಯಾವ ಶಾಖೆಗಳಿಗೆ ರಜೆ ಇರಲಿದೆ ಎನ್ನುವ ಪಟ್ಟಿ ಇಲ್ಲಿದೆ.
9 ದಿನ ಬ್ಯಾಂಕ್ ರಜೆ ಇರಲಿದೆ :
ದೇಶದ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳು ಬೇರೆ ಬೇರೆಯಾಗಿರುತ್ತದೆ (Bank holiday). ಒಂದು ನಿರ್ದಿಷ್ಟ ರಾಜ್ಯ ಅಥವಾ ಪ್ರದೇಶಕ್ಕೆ ಸಂಬಂಧಿಸಿದಂತೆ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಹಾಗಾಗಿ, ಬ್ಯಾಂಕ್ ರಜೆಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸದ ಕಾರಣದಿಂದಾಗಿ ಬ್ಯಾಂಕ್ ಗೆ (Bank) ಹೊರಡುವುದಾದರೆ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಿಕೊಳ್ಳಿ .
ಇದನ್ನೂ ಓದಿ : PPF Account Benefits: SBI ಗ್ರಾಹಕರು PPF ಖಾತೆ ತೆರೆದರೆ ತೆರಿಗೆಯಲ್ಲಿ ಬಂಪರ್ ವಿನಾಯಿತಿ!
ಇನ್ನು 9 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ :
ಬ್ಯಾಂಕ್ ರಜಾದಿನಗಳು :
12 ಫೆಬ್ರವರಿ: ತಿಂಗಳ ಎರಡನೇ ಶನಿವಾರ
13 ಫೆಬ್ರವರಿ: ಭಾನುವಾರ
15 ಫೆಬ್ರವರಿ: ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನಿ (ಇಂಫಾಲ್, ಕಾನ್ಪುರ್, ಲಕ್ನೋದಲ್ಲಿ ಬ್ಯಾಂಕ್ ರಜೆ)
16 ಫೆಬ್ರವರಿ: ಗುರು ರವಿದಾಸ್ ಜಯಂತಿ (ಚಂಡೀಗಢದಲ್ಲಿ ಬ್ಯಾಂಕ್ ರಜೆ )
18 ಫೆಬ್ರವರಿ: ಡೋಲ್ ಜಾತ್ರಾ (ಕೋಲ್ಕತ್ತಾದಲ್ಲಿ ಬ್ಯಾಂಕ್ ರಜೆ )
ಫೆಬ್ರವರಿ 19: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೆಲಾಪುರ, ಮುಂಬೈ, ನಾಗ್ಪುರದಲ್ಲಿ ಬ್ಯಾಂಕ್ ರಜೆ )
20 ಫೆಬ್ರವರಿ: ಭಾನುವಾರ
26 ಫೆಬ್ರವರಿ: ತಿಂಗಳ ನಾಲ್ಕನೇ ಶನಿವಾರ
27 ಫೆಬ್ರವರಿ: ಭಾನುವಾರ
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳವಾಗಲಿದೆ : ಈ ದಿನ ಸಿಗಲಿದೆ ಸಿಹಿ ಸುದ್ದಿ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.