7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳವಾಗಲಿದೆ : ಈ ದಿನ ಸಿಗಲಿದೆ ಸಿಹಿ ಸುದ್ದಿ! 

ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆ(DA Hike)ಯಲ್ಲಿ ಭಾರಿ ಹೆಚ್ಚಳ ಮಾಡಬಹುದು. ಈ ಅರ್ಥದಲ್ಲಿ, ಹೋಳಿ ಹಬ್ಬದ ಆಸುಪಾಸಿನಲ್ಲಿ ನೌಕರರ ಸಂಬಳದಲ್ಲಿ ದೊಡ್ಡ ಹೆಚ್ಚಳವಾಗಬಹುದು.

Written by - Channabasava A Kashinakunti | Last Updated : Feb 8, 2022, 03:43 PM IST
  • ಪಿಂಚಣಿದಾರರಿಗೆ ಹೆಚ್ಚಿನ ಲಾಭ ಸಿಗಲಿದೆ
  • ತುಟ್ಟಿಭತ್ಯೆ ಎಷ್ಟು ಹೆಚ್ಚಾಗಲಿದೆ?
  • ಪ್ರತಿ 6 ತಿಂಗಳಿಗೊಮ್ಮೆ DA ಹೆಚ್ಚಾಗುತ್ತದೆ
7th Pay Commission : ಕೇಂದ್ರ ನೌಕರರ ಸಂಬಳದಲ್ಲಿ ಭಾರಿ ಹೆಚ್ಚಳವಾಗಲಿದೆ : ಈ ದಿನ ಸಿಗಲಿದೆ ಸಿಹಿ ಸುದ್ದಿ!  title=

ನವದೆಹಲಿ : ಕೇಂದ್ರ ಸರ್ಕಾರದಿಂದ ಕೇಂದ್ರ ಉದ್ಯೋಗಿಗಳಿಗೆ ಸದ್ಯದಲ್ಲೇ ಭರ್ಜರಿ ಗಿಫ್ಟ್ ಸಿಗಲಿದೆ. ಕೇಂದ್ರ ಸರ್ಕಾರ ಶೀಘ್ರವೇ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಹೆಚ್ಚಳ ಮಾಡಲಿದೆ.

ಕೇಂದ್ರ ಸರ್ಕಾರ ನೌಕರರ(Central Govt Employees) ತುಟ್ಟಿ ಭತ್ಯೆ ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ನೌಕರರ ವೇತನದಲ್ಲಿ ಏರಿಕೆ ಕಾಣಬಹುದಾಗಿದೆ. ಹೋಳಿ ಹಬ್ಬದ ಮೊದಲು ಉದ್ಯೋಗಿಗಳು ಸಿಹಿ ಸುದ್ದಿ ಪಡೆಯಬಹುದು.

ಇದನ್ನೂ ಓದಿ : PM Awas Yojanaಯ ಹೊಸ ನಿಯಮದ ಪ್ರಕಾರ ಹಂಚಿಕೆಯಾದ ಮನೆಯು ರದ್ದಾಗಬಹುದು..!

ಪಿಂಚಣಿದಾರರಿಗೆ ದೊರೆಯಲಿದೆ ಹೆಚ್ಚಿನ ಲಾಭ 

ಕೇಂದ್ರ ಸರ್ಕಾರವು ಮಾರ್ಚ್ ತಿಂಗಳಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆ(DA Hike)ಯಲ್ಲಿ ಭಾರಿ ಹೆಚ್ಚಳ ಮಾಡಬಹುದು. ಈ ಅರ್ಥದಲ್ಲಿ, ಹೋಳಿ ಹಬ್ಬದ ಆಸುಪಾಸಿನಲ್ಲಿ ನೌಕರರ ಸಂಬಳದಲ್ಲಿ ದೊಡ್ಡ ಹೆಚ್ಚಳವಾಗಬಹುದು.

ಉದ್ಯೋಗಿಗಳು ಮತ್ತು ಪಿಂಚಣಿದಾರರು ಮಾರ್ಚ್ ತಿಂಗಳಲ್ಲಿ ಭಾರಿ ಪ್ರಯೋಜನಗಳನ್ನು ಪಡೆಯಬಹುದು. ತುಟ್ಟಿಭತ್ಯೆ ಹೆಚ್ಚಳದಿಂದ ಪಿಂಚಣಿ ಕೂಡ ಹೆಚ್ಚಾಗುತ್ತದೆ.

ಜಾಸ್ತಿ ಹೆಚ್ಚಾಗುತ್ತದೆ ತುಟ್ಟಿಭತ್ಯೆ 

ಕೇಂದ್ರ ಸರ್ಕಾರವು 2022 ರ ಜನವರಿಗೆ ತುಟ್ಟಿಭತ್ಯೆ(Dearnes Allowance)ಯನ್ನು ಶೀಘ್ರದಲ್ಲೇ ಹೆಚ್ಚಿಸಬಹುದು ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಬಿತ್ತರಿಸುತ್ತಿವೆ. ಸರ್ಕಾರ ತುಟ್ಟಿಭತ್ಯೆಯನ್ನು ಶೇ. 3ರಷ್ಟು ಹೆಚ್ಚಿಸಲಿದೆ.

ತುಟ್ಟಿಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವಾಗಿರುವುದರಿಂದ ಅದು ಶೇ.31ರಿಂದ ಶೇ.34ಕ್ಕೆ ಏರಿಕೆಯಾಗಲಿದೆ. ಇದರ ನೇರ ಪರಿಣಾಮ ನೌಕರರ ವೇತನದ ಮೇಲೆ ಬೀಳಲಿದೆ. ಮಾರ್ಚ್ ತಿಂಗಳಿನಿಂದ ಉದ್ಯೋಗಿಗಳು ಹೆಚ್ಚಿನ ಸಂಬಳವನ್ನು ಪಡೆಯಬಹುದು.

ಇದನ್ನೂ ಓದಿ : Retirement Planning : ನಿವೃತ್ತಿ ಹೂಡಿಕೆಗೆ PPF ಅಥವಾ NPS ಯಾವುದು ಉತ್ತಮ? ಲೆಕ್ಕಾಚಾರ ಇಲ್ಲಿದೆ

ಪ್ರತಿ 6 ತಿಂಗಳಿಗೊಮ್ಮೆ DA ಹೆಚ್ಚಾಗುತ್ತದೆ

ನೌಕರರ ಆರ್ಥಿಕ ಜೀವನವನ್ನು ಸುಧಾರಿಸಲು, ಎಲ್ಲಾ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ(Employees) ತುಟ್ಟಿಭತ್ಯೆಯನ್ನು ನೀಡುತ್ತವೆ. ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ನೌಕರರಿಗೆ ಈ ಭತ್ಯೆ ಲಭ್ಯವಿದೆ.

ತುಟ್ಟಿಭತ್ಯೆಯನ್ನು 6 ತಿಂಗಳ ಮಧ್ಯಂತರದಲ್ಲಿ ಪ್ರತಿ ವರ್ಷ ಎರಡು ಬಾರಿ ಪರಿಗಣಿಸಲಾಗುತ್ತದೆ ಮತ್ತು ತಕ್ಷಣದ ಪರಿಸ್ಥಿತಿಯ ದೃಷ್ಟಿಯಿಂದ ಅದನ್ನು ಹೆಚ್ಚಿಸಲಾಗುತ್ತದೆ.

ಪ್ರತಿ ವರ್ಷ ಜನವರಿ ಮತ್ತು ಜುಲೈ ತಿಂಗಳಲ್ಲಿ ತುಟ್ಟಿಭತ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 2022 ರಲ್ಲಿ, ಜನವರಿ ತಿಂಗಳ ತುಟ್ಟಿಭತ್ಯೆಯನ್ನು ಮಾರ್ಚ್ ತಿಂಗಳವರೆಗೆ ಹೆಚ್ಚಿಸಬಹುದು. ಡಿಎ ಹೆಚ್ಚಿಸಿದರೆ ಮಾತ್ರ ಜನರಿಗೆ ವರ್ಷದಲ್ಲಿ 90 ಸಾವಿರ ರೂಪಾಯಿ ಲಾಭ ಸಿಗಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News