ನವದೆಹಲಿ: ತಿಂಗಳು ಪ್ರಾರಂಭವಾಗುತ್ತಿದ್ದಂತೆ, ಎಲ್ಲಾ ಬ್ಯಾಂಕ್ ಗ್ರಾಹಕರು ತಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಯೋಜಿಸಲು ಆರಂಭಿಸುತ್ತಾರೆ. ಡಿಸೆಂಬರ್ ತಿಂಗಳಲ್ಲಿ ಬ್ಯಾಂಕ್ ರಜೆಗಳ (Bank Holidays in December) ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. 


COMMERCIAL BREAK
SCROLL TO CONTINUE READING

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಹೊರಡಿಸಿದ ಬ್ಯಾಂಕ್ ರಜೆ ಪಟ್ಟಿಯ ಪ್ರಕಾರ, ವಾರಾಂತ್ಯವನ್ನು (ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ) ಹೊರತುಪಡಿಸಿ ಡಿಸೆಂಬರ್‌ನಲ್ಲಿ 7 ದಿನಗಳವರೆಗೆ ಬ್ಯಾಂಕ್ ರಜೆ ಇರುತ್ತವೆ.  


ಇದನ್ನೂ ಓದಿ : Pension : ಈಗ ಕಾರ್ಮಿಕರಿಗೂ ಸಿಗಲಿದೆ ಪಿಂಚಣಿ : ₹36000 ಪಿಂಚಣಿಗೆ ₹2 ಠೇವಣಿ!


ಹಬ್ಬಗಳು ಮತ್ತು ಮುಂಬರುವ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳ ದೃಷ್ಟಿಯಿಂದ, ಮುಂದಿನ ತಿಂಗಳು ಭಾನುವಾರ ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳನ್ನು ಹೊರತುಪಡಿಸಿ ಒಟ್ಟು ಏಳು ರಜಾದಿನಗಳನ್ನು ಘೋಷಿಸಲಾಗಿದೆ. ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಮತ್ತು ಕೆಲವು ಖಾಸಗಿ ಬ್ಯಾಂಕುಗಳಲ್ಲಿ ಭಿನ್ನವಾಗಿರುತ್ತವೆ ಎಂಬುದನ್ನು ಸಹ ಗಮನಿಸಬೇಕು.  ಈ ವರ್ಷ, ಕ್ರಿಸ್ಮಸ್ ರಜಾದಿನವು ಡಿಸೆಂಬರ್ ತಿಂಗಳ ನಾಲ್ಕನೇ ಶನಿವಾರದಂದು ಬಂದಿದೆ.


ಬ್ಯಾಂಕ್ ಗ್ರಾಹಕರು ರಜೆಯ ಕಾರಣ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ಹಿಂಪಡೆಯಲು ಮತ್ತು ಠೇವಣಿ ಮಾಡಲು ಸಾಧ್ಯವಾಗುವುದಿಲ್ಲ ಆದರೆ ಅವರು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು, ಎಟಿಎಂಗಳು, ಮೊಬೈಲ್ ಬ್ಯಾಂಕಿಂಗ್ (online banking) ಇತ್ಯಾದಿಗಳನ್ನು ಬಳಸಬಹುದು.


ಇದನ್ನೂ ಓದಿ : 25 ಪೈಸೆ ನಾಣ್ಯ ನಿಮ್ಮ ಬಳಿಯಿದ್ದರೆ ಬರೀ ಒಂದು ಕ್ಲಿಕ್ ಮೂಲಕ ಆಗಬಹುದು ಲಕ್ಷಾಧಿಪತಿ


ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ ನೋಡಿ :


ಡಿಸೆಂಬರ್ 3 (ಶುಕ್ರವಾರ): ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ; ಗೋವಾದಲ್ಲಿ ಬ್ಯಾಂಕ್ ರಜೆ 


ಡಿಸೆಂಬರ್ 18 (ಶನಿವಾರ): ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಹಬ್ಬ; ಮೇಘಾಲಯದಲ್ಲಿ ಬ್ಯಾಂಕ್ ರಜೆ
 
ಡಿಸೆಂಬರ್ 24 (ಶುಕ್ರವಾರ): ಕ್ರಿಸ್ಮಸ್ ಈವ್; ಮಿಜೋರಾಂ ಮತ್ತು ಮೇಘಾಲಯದಲ್ಲಿ ಬ್ಯಾಂಕ್ ರಜೆ 


ಡಿಸೆಂಬರ್ 25 (ಶನಿವಾರ): ಕ್ರಿಸ್ಮಸ್; ದೇಶಾದ್ಯಂತ ಬ್ಯಾಂಕ್ ರಜೆ 


ಡಿಸೆಂಬರ್ 27 (ಸೋಮವಾರ): ಮಿಜೋರಾಂನಲ್ಲಿ ಕ್ರಿಸ್ಮಸ್ ಸೆಲೆಬ್ರೇಷನ್ ಬ್ಯಾಂಕ್ ರಜೆ 


ಡಿಸೆಂಬರ್ 30 (ಗುರುವಾರ): ಯು ಕಿಯಾಂಗ್ ನಂಗ್ಬಾ; ಮೇಘಾಲಯದಲ್ಲಿ ಬ್ಯಾಂಕ್ ರಜೆ 


ಡಿಸೆಂಬರ್ 31 (ಶುಕ್ರವಾರ): ಹೊಸ ವರ್ಷದ ಮುನ್ನಾದಿನ; ಮಿಜೋರಾಂನಲ್ಲಿ ಬ್ಯಾಂಕ್ ರಜೆ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.