ನವದೆಹಲಿ : Bank Holidays in November 2021: ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸ ಬಾಕಿ ಉಳಿದಿದ್ದರೂ, ಇಂದೇ ಪೂರೈಸಿಕೊಳ್ಳಿ. ನಾಳೆಯಿಂದ ಸತತ 5 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ದೀಪಾವಳಿ, ಛತ್ ಪೂಜೆ, ಗುರುನಾನಕ್ ಜಯಂತಿಯಂತಹ ಹಬ್ಬಗಳು ಈ ತಿಂಗಳಲ್ಲಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನವೆಂಬರ್  ತಿಂಗಳಲ್ಲಿ ಒಟ್ಟು 17 ದಿನಗಳವರೆಗೆ ಬ್ಯಾಂಕ್ ರಜೆ (Bank Holidays November) ಇರಲಿದೆ. ಅದರಲ್ಲೂ ಕೆಲ ರಜೆಗಳು ನಿರಂತರವಾಗಿ ಬರಲಿವೆ. 


COMMERCIAL BREAK
SCROLL TO CONTINUE READING

ಇಂದಿನಿಂದ ಸತತ 5 ದಿನಗಳ ಕಾಲ ಬ್ಯಾಂಕ್ ಬಂದ್ :  
ನವೆಂಬರ್ ಹಬ್ಬದ ತಿಂಗಳಿನಲ್ಲಿ ಇಂದಿನಿಂದ ಸತತ 5 ದಿನಗಳ ಕಾಲ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಬ್ಯಾಂಕ್  ರಜಾದಿನಗಳು (Bank holidays) ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆಯಾಗಿರುತ್ತವೆ. ಆರ್‌ಬಿಐ ನೀಡಿರುವ ರಜೆಗಳ ಪ್ರಕಾರ ನಾಳೆ ಅಂದರೆ ನವೆಂಬರ್ 3 ರಂದು ನರಕ ಚತುರ್ದಶಿಗೆ ಕರ್ನಾಟಕದಲ್ಲಿ ಬ್ಯಾಂಕ್‌ಗಳು ಮುಚ್ಚಿರುತ್ತವೆ. ನವೆಂಬರ್ 4 ರಂದು, ದೀಪಾವಳಿಗೆ (Diwali) ದೇಶಾದ್ಯಂತ ಬ್ಯಾಂಕ್ ರಜೆ ಇರಲಿದೆ. ಈ ದಿನ ಕರ್ನಾಟಕ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇದಾದ ನಂತರ, ನವೆಂಬರ್ 5 ರಂದು, ಅನೇಕ ರಾಜ್ಯಗಳಲ್ಲಿ ಬ್ಯಾಂಕಿಗೆ ರಜೆ ಇರಲಿದೆ. ಇದಾದ ನಂತರ ನವೆಂಬರ್ 6 ರಂದು ಭಾಯಿ ದೂಜ್ ಹಬ್ಬವನ್ನು ಆಚರಿಸಲಾಗುತ್ತದೆ. ನಂತರ ನವೆಂಬರ್ 7 ಭಾನುವಾರದ ರಜೆ.  


ಇದನ್ನೂ ಓದಿ :  Change Bank Branch: ಈ ವಿಧಾನವನ್ನು ಅನುಸರಿಸಿ ಕುಳಿತಲ್ಲೇ ಬ್ಯಾಂಕ್ ಬ್ರಾಂಚ್ ಬದಲಾಯಿಸಬಹುದು


17 ದಿನಗಳ ಕಾಲ ಬ್ಯಾಂಕ್‌ ರಜೆ  :
ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ ತಿಂಗಳ ಅಧಿಕೃತ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ನವೆಂಬರ್ ತಿಂಗಳಲ್ಲಿ 17 ರಜೆಗಳಿವೆ. ಈ ಸಮಯದಲ್ಲಿ, ಭಾರತದ ಅನೇಕ ನಗರಗಳಲ್ಲಿ ಬ್ಯಾಂಕ್ ಗಳಿಗೆ ನಿರಂತರವಾಗಿ ರಜೆ ಇರುತ್ತದೆ. ಈ 17 ದಿನಗಳ ರಜೆಯಲ್ಲಿ ಸಾಪ್ತಾಹಿಕ ರಜಾದಿನಗಳನ್ನು ಸಹ ಸೇರಿಸಲಾಗಿದೆ.  


ಆರ್‌ಬಿಐ (Reserve Bank of India) ಮಾರ್ಗಸೂಚಿಗಳ ಪ್ರಕಾರ, ಭಾನುವಾರ ಮತ್ತು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ. ನೆಗೋಷಿಯೇಬಲ್ ಇನ್‌ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ, ಆರ್‌ಬಿಐ ನವೆಂಬರ್ 1, 3, 4, 5, 6, 10, 11, 12, 19, 22 ಮತ್ತು 23 ರಂದು ರಜಾದಿನಗಳನ್ನು ಘೋಷಿಸಿದೆ. ಇದಲ್ಲದೆ, ತಿಂಗಳಲ್ಲಿ ನಾಲ್ಕು ಭಾನುವಾರಗಳು ಮತ್ತು ಎರಡನೇ ಮತ್ತು ನಾಲ್ಕನೇ ಶನಿವಾರಗಳು ಸಹ ರಜಾದಿನಗಳಾಗಿವೆ.


ಇದನ್ನೂ ಓದಿ :  7th Pay Commission: ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ವೇರಿಯೇಬಲ್ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆ, ವೇತನದಲ್ಲಿ ಎಷ್ಟು ಹೆಚ್ಚಳ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.