Change Bank Branch: ಈ ವಿಧಾನವನ್ನು ಅನುಸರಿಸಿ ಕುಳಿತಲ್ಲೇ ಬ್ಯಾಂಕ್ ಬ್ರಾಂಚ್ ಬದಲಾಯಿಸಬಹುದು

ಬ್ಯಾಂಕ್ ಶಾಖೆಯನ್ನು ಬದಲಾಯಿಸುವ ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರುತ್ತವೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  ಅಥವಾ PNBಯ ಗ್ರಾಹಕರಾಗಿದ್ದರೆ ಮನೆಯಿಂದಲೇ ಈ ಕೆಲಸವನ್ನು ಮಾಡಬಹುದು.

Written by - Ranjitha R K | Last Updated : Nov 1, 2021, 03:26 PM IST
  • ಬ್ಯಾಂಕ್ ಶಾಖೆ ಬದಲಾಯಿಸುವುದು ಈಗ ಸುಲಭ
  • ಕುಳಿತಲ್ಲಿಂದಲೇ ಬದಲಾಯಿಸಬಹುದು ಬ್ಯಾಂಕ್ ಬ್ರಾಂಚ್
  • ಸಂಪೂರ್ಣ ವಿಧಾನ ತಿಳಿಯಿರಿ
Change Bank Branch:  ಈ ವಿಧಾನವನ್ನು ಅನುಸರಿಸಿ ಕುಳಿತಲ್ಲೇ ಬ್ಯಾಂಕ್ ಬ್ರಾಂಚ್  ಬದಲಾಯಿಸಬಹುದು  title=
ಬ್ಯಾಂಕ್ ಶಾಖೆ ಬದಲಾಯಿಸುವುದು ಈಗ ಸುಲಭ (file photo)

ನವದೆಹಲಿ : ಅನೇಕ ಬಾರಿ ಉದ್ಯೋಗ ಅಥವಾ ವ್ಯಾಪಾರ ಮಾಡುವವರು ತುರ್ತು ಕೆಲಸ ಅಥವಾ ವರ್ಗಾವಣೆಯ ಕಾರಣದಿಂದಾಗಿ ಸ್ಥಳಗಳನ್ನು ಬದಲಾಯಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್ ನ ಹೋಂ ಬ್ರಾಂಚ್ ಗೆ (Home branch) ಪದೇ ಪದೇ ಭೇಟಿ ನೀಡುವುದು ಸಾಧ್ಯವಾಗುವುದಿಲ್ಲ. ನೀವು ಸಹ ಯಾವುದೋ ಕಾರಣಕ್ಕಾಗಿ ಬೇರೆಡೆ ನೆಲೆಸಿದ್ದರೆ ಮತ್ತು ನಿಮ್ಮ ಬ್ಯಾಂಕ್‌ನ ಹೋಮ್ ಬ್ರಾಂಚ್ ಬದಲಾಯಿಸಬೇಕಿದ್ದರೆ (Change Bank Branch), ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ಮನೆಯಿಂದಲೇ ಈ ಕೆಲಸವನ್ನು ಮಾಡಿ ಮುಗಿಸಬಹುದು. 

ಹೋಂ ಬ್ರಾಂಚ್ ಬದಲಾಯಿಸುವ ಪ್ರಕ್ರಿಯೆ : 
ಬ್ಯಾಂಕ್ ಶಾಖೆಯನ್ನು ಬದಲಾಯಿಸುವ ನಿಯಮಗಳು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಭಿನ್ನವಾಗಿರುತ್ತವೆ. ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಅಥವಾ PNB ಯ ಗ್ರಾಹಕರಾಗಿದ್ದರೆ ಮನೆಯಿಂದಲೇ ಈ ಕೆಲಸವನ್ನು ಮಾಡಬಹುದು. ಇದಕ್ಕಾಗಿ ನಿಮ್ಮ ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಆಕ್ಟಿವ್ ಆಗಿರಬೇಕು. ಒಂದು ವೇಳೆ ಇಂಟರ್ನೆಟ್ ಬ್ಯಾಂಕಿಂಗ್ ಆಕ್ಟಿವ್  ಇರದಿದ್ದರೆ, ಮೊದಲು ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ನೋಂದಾಯಿಸಿಕೊಳ್ಳಬೇಕು. 

ಇದನ್ನೂ ಓದಿ : 7th Pay Commission: ಸರ್ಕಾರಿ ನೌಕರರಿಗೆ ಸಂತಸದ ಸುದ್ದಿ! ವೇರಿಯೇಬಲ್ ತುಟ್ಟಿಭತ್ಯೆಯಲ್ಲಿ ಭಾರಿ ಏರಿಕೆ, ವೇತನದಲ್ಲಿ ಎಷ್ಟು ಹೆಚ್ಚಳ?

SBI ನಲ್ಲಿ ಬ್ಯಾಂಕ್ ಶಾಖೆಯನ್ನು ಬದಲಾಯಿಸುವ ಪ್ರಕ್ರಿಯೆ : 
1.ಮೊದಲಿಗೆ www.onlinesbi.com ವೆಬ್‌ಸೈಟ್‌ಗೆ ಹೋಗಿ. 
2. ನೀವು ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಬಳಸುತ್ತಿದ್ದರೆ, ವೈಯಕ್ತಿಕ ಬ್ಯಾಂಕಿಂಗ್ ಆಯ್ಕೆಗೆ ಹೋಗಿ ಲಾಗಿನ್ ಮಾಡಿ.
3. ನೀವು ಈಗಾಗಲೇ ನೋಂದಾಯಿಸದಿದ್ದರೆ, ಮೊದಲು ನಿಮ್ಮ ಐಡಿಯನ್ನು ನೋಂದಾಯಿಸಿ. 
4. ಈಗ 'ಇ-ಸರ್ವಿಸ್ ' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 
5. ಟ್ರಾನ್ಸ್ಫರ್ ಆಫ್ ಸೇವಿಂಗ್ ಅಕೌಂಟ್ ಗೆ ಹೋಗಿ. 
6. ಎಸ್‌ಬಿಐನಲ್ಲಿ (SBI) ಖಾತೆ ಇದ್ದರೆ, ವರ್ಗಾಯಿಸಬೇಕಾದ ಖಾತೆಯನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗುತ್ತದೆ.
ಈಗ ನೀವು ಖಾತೆಯನ್ನು ವರ್ಗಾಯಿಸಲು ಬಯಸುವ ಶಾಖೆಯ ಶಾಖೆಯ ಕೋಡ್ ಅನ್ನು ನಮೂದಿಸಿ. 
7. ನಂತರ ಶಾಖೆಯ ಹೆಸರಿನ್ ಆಯ್ಕೆ ಇರುತ್ತದೆ. ಇದರಲ್ಲಿ ಹೊಸ ಶಾಖೆಯನ್ನು ಆಯ್ಕೆಮಾಡಿ. 
8. ಈಗ ಹೊಸ ಶಾಖೆಯ ಹೆಸರನ್ನು ನಮೂದಿಸಿ, ಸಬ್ಮಿಟ್ ಮಾಡಿ 
9. ಸಬ್ಮಿಟ್ ಮಾಡಿದ ನಂತರ ಬ್ಯಾಂಕ್ ಶಾಖೆ ಬದಲಾವಣೆಯ ವಿನಂತಿಯನ್ನು ನೋಂದಾಯಿಸಲಾಗುತ್ತದೆ.

ಇದನ್ನೂ ಓದಿ :   PM Mudra Loan : 1999 ರೂ. ಜಮಾ ಮಾಡಿದರೆ ಸಿಗಲಿದೆಯಾ 10 ಲಕ್ಷಗಳವರೆಗೆ ಲೋನ್ ? ಸರ್ಕಾರ ಹೇಳಿದ್ದೇನು ?

PNB ಯಲ್ಲಿ ಬ್ಯಾಂಕ್ ಶಾಖೆಯನ್ನು ಬದಲಾಯಿಸುವ ಪ್ರಕ್ರಿಯೆ : 
1.ಇದರಲ್ಲಿ ನೀವು ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಲಾಗಿನ್ ಆಗುತ್ತೀರಿ
2.ಇದರ ನಂತರ ಅದರ್ ಸರ್ವಿಸಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ಚೇಂಜ್ ಹೋಂ ಬ್ರಾಂಚ್ (Home branch) ಆಯ್ಕೆಯನ್ನು ಆರಿಸಿ
3. ಈಗ ಖಾತೆಯನ್ನು ವರ್ಗಾಯಿಸಬೇಕಾದ ಶಾಖೆಯ ಐಡಿಯನ್ನು ಆಯ್ಕೆಮಾಡಿ
4. ಶಾಖೆಯ ಐಡಿಯನ್ನು ನಮೂದಿಸಿದ ನಂತರ ಪಾಸ್‌ವರ್ಡ್ ಅನ್ನು ನಮೂದಿಸಿ. 
5. ಸಂಪೂರ್ಣ ಪ್ರಕ್ರಿಯೆಯ ನಂತರ ನಿಮ್ಮ ವಿನಂತಿಯನ್ನು ನೋಂದಾಯಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News