Bank Locker: ನಿಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿಡುವ ಸ್ಕೀಮ್ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ
Bank Locker: ಚಿನ್ನಾಭರಣಗಳ ಕಳ್ಳತನದ ಬಗ್ಗೆ ನಿಮ್ಮ ಮನಸ್ಸಿನಲ್ಲಿರುವ ಭಯವನ್ನು ಹೋಗಲಾಡಿಸುವ ಮತ್ತು ಬ್ಯಾಂಕ್ ಲಾಕರ್ ಇಲ್ಲದಿದ್ದರೂ ನಿಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿಡುವ ಯೋಜನೆಯ ಬಗ್ಗೆ ಈ ಲೇಖನದಲ್ಲಿ ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ.
ಚಿನ್ನಾಭರಣ ಸುರಕ್ಷಿತ ಸಲಹೆ: ಭಾರತೀಯ ಸ್ತ್ರೀಯರಿಗೆ ಚಿನ್ನಾಭರಣಗಳ ಬಗ್ಗೆ ಬಹಳ ವ್ಯಾಮೋಹವಿದೆ. ಅದರಲ್ಲೂ, ಹಬ್ಬ ಹರಿದಿನಗಳಲ್ಲಂತೂ ಜನರು ಸಾಕಷ್ಟು ಆಭರಣಗಳನ್ನೂ ಖರೀದಿಸುತ್ತಾರೆ. ಆದರೆ, ಆಭರಣಗಳ ಖರೀದಿಯೊಂದಿಗೆ ಅವುಗಳ ಸುರಕ್ಷತೆಯ ಬಗ್ಗೆಯೂ ಜನರಲ್ಲಿ ಕಾಳಜಿ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಚಿನ್ನಾಭರಣಗಳ ಕಳ್ಳತನದ ಬಗ್ಗೆ ಭಯ ಹೆಚ್ಚಾಗಿದೆ. ವಾಸ್ತವವಾಗಿ, ಅನುಕೂಲ ಇರುವವರು ತಮ್ಮ ಚಿನ್ನಾಭರಣಗಳನ್ನು ಸುರಕ್ಷಿತವಾಗಿಡಲು ಬ್ಯಾಂಕ್ ಲಾಕರ್ ಗಳನ್ನು ಕೊಳ್ಳುತ್ತಾರೆ. ಆದರೆ, ಎಲ್ಲರಿಗೂ ಇದು ಸಾಧ್ಯವಿಲ್ಲ. ಹಾಗಾಗಿಯೇ, ಹೆಚ್ಚಿನವರು ತಮ್ಮ ಆಭರಣಗಳನ್ನು ತಮ್ಮ ಮನೆಯ ಲಾಕರ್ ಗಳಲ್ಲಿಯೇ ಇಡುತ್ತಾರೆ. ಆದಗ್ಯೂ, ಮನೆಗಳಲ್ಲಿ ಆಭರಣಗಳನ್ನು ಇಡುವುದನ್ನು ಸುರಕ್ಷಿತ ಎಂದು ಪರಿಗಣಿಸಲಾಗುವುದಿಲ್ಲ. ಇಂದು ನಾವು ನಿಮಗೆ, ನಿಮ್ಮ ಆಭರಣಗಳನ್ನು ಸುರಕ್ಷಿತವಾಗಿಡುವ ಮಾರ್ಗವನ್ನು ತಿಳಿಸಲಿದ್ದೇವೆ. ಇದರಲ್ಲಿ ನಿಮ್ಮ ಆಭರಣಗಳು ಕಳ್ಳತನವಾದರೆ ಆಭರಣದ ಮೌಲ್ಯ ಎಷ್ಟಿದೆಯೋ ಅಷ್ಟು ಹಣವನ್ನು ಪಡೆಯಬಹುದು.
ವಾಸ್ತವವಾಗಿ, ನೀವು ಖರೀದಿಸುವ ಆಭರಣಗಳಿಗೆ ವಿಮಾ ರಕ್ಷಣೆಯನ್ನು ತೆಗೆದುಕೊಳ್ಳುವ ಮೂಲಕ ಚಿನ್ನಾಭರಣಗಳ ಕಳ್ಳತನದ ಬಗೆಗಿನ ನಿಮ್ಮ ಭಯವನ್ನು ಹೋಗಲಾಡಿಸಬಹುದು. ವಿಮಾ ಕಂಪನಿಗಳು ಆಭರಣಗಳ ರಕ್ಷಣೆಗಾಗಿ ಎರಡು ರೀತಿಯ ಯೋಜನೆಗಳನ್ನು ನೀಡುತ್ತವೆ. ಈ ಎರಡು ವಿಧದ ಪಾಲಿಸಿಗಳಲ್ಲಿ ಒಂದು ಗೃಹ ವಿಮಾ ಪಾಲಿಸಿ ಮತ್ತು ಇನ್ನೊಂದು ಸ್ಟ್ಯಾಂಡ್ ಅಲೋನ್ ಜ್ಯುವೆಲ್ಲರಿ ಪಾಲಿಸಿ.
ಇದನ್ನೂ ಓದಿ- ಈ ದಿನ ರೈತರ ಖಾತೆ ಸೇರುವುದು ಪಿಎಂ ಕಿಸಾನ್‌ನ 12 ನೇ ಕಂತು .!
ಒಂದು ಗೃಹ ವಿಮಾ ಪಾಲಿಸಿ:
ಹೋಮ್ ಇನ್ಶೂರೆನ್ಸ್ ಪಾಲಿಸಿಯಲ್ಲಿ, ಮನೆಯಲ್ಲಿ ಇರಿಸಲಾಗಿರುವ ಆಭರಣಗಳ ಮೇಲೆ ರಕ್ಷಣೆ ನೀಡಲಾಗುತ್ತದೆ. ಆದರೆ ಆಭರಣಗಳು ಕಳುವಾದಾಗ ಅಥವಾ ಕಾಣೆಯಾದ ಸಂದರ್ಭದಲ್ಲಿ ನೀವು ಪೂರ್ಣ ಮೊತ್ತವನ್ನು ಪಡೆಯುವುದಿಲ್ಲ.
ಸ್ಟ್ಯಾಂಡ್ ಅಲೋನ್ ಜ್ಯುವೆಲ್ಲರಿ ಪಾಲಿಸಿ:
ನೀವು ಆಭರಣದ ಸಂಪೂರ್ಣ ರಕ್ಷಣೆಯನ್ನು ಬಯಸಿದರೆ, ನೀವು ಕಂಪನಿಯಿಂದ ಸ್ವತಂತ್ರ ಆಭರಣ ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದರಲ್ಲಿ 10 ಲಕ್ಷ ರೂ.ವರೆಗಿನ ಆಭರಣಗಳ ಮೇಲೆ ತಿಂಗಳಿಗೆ 1 ಸಾವಿರ ರೂ.ವರೆಗೆ ಪ್ರೀಮಿಯಂ ಕಟ್ಟಬೇಕಾಗುತ್ತದೆ. ಇದರೊಂದಿಗೆ, ಆಭರಣಗಳ ಕಳ್ಳತನ ಅಥವಾ ಕಣ್ಮರೆಯಾದ ಸಂದರ್ಭದಲ್ಲಿ, ನೀವು ಆಭರಣಕ್ಕೆ ಸಮನಾದ ಪೂರ್ಣ ಮರುಪಾವತಿಯನ್ನು ಪಡೆಯುತ್ತೀರಿ.
ಇದನ್ನೂ ಓದಿ- Finance Minister: ಸರ್ಕಾರಿ ಬ್ಯಾಂಕುಗಳ ಮುಖ್ಯಸ್ಥರ ಭೇಟಿಗೆ ಮುಂದಾದ ಸೀತಾರಾಮನ್, ಕಾರಣ ಇಲ್ಲಿದೆ
ಆಭರಣಗಳ ರಕ್ಷಣೆಗಾಗಿ ಯಾವುದೇ ರೀತಿಯ ಯೋಜನೆಯ ಪ್ರಯೋಜನವನ್ನು ಪಡೆಯುವ ಮೊದಲು, ಆಭರಣದ ಮಾರುಕಟ್ಟೆ ಮೌಲ್ಯ ಎಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ, ನೀವು ಹತ್ತಿರದ ಅಧಿಕೃತ ಆಭರಣ ಅಂಗಡಿಯನ್ನು ಸಂಪರ್ಕಿಸಬೇಕು. ಆಭರಣಕಾರರು ಅದರ ನಿಖರವಾದ ಬೆಲೆಯನ್ನು ನಿಮಗೆ ತಿಳಿಸುತ್ತಾರೆ. ಕೆಲವೊಮ್ಮೆ ವಿಮಾ ಕಂಪನಿಯು ವಿಮಾ ಕ್ಲೈಮ್ ಮಾಡುವಾಗ ಆಭರಣದ ಬೆಲೆಯನ್ನು ಹಾಕುತ್ತದೆ. ಅಂತಹ ಪಾಲಿಸಿಯನ್ನು ತೆಗೆದುಕೊಳ್ಳಲು ತಯಾರಿ ಮಾಡುವಾಗ, ಕಂಪನಿಯ ಮರುಪಾವತಿ ನಿಯಮಗಳ ಬಗ್ಗೆ ಸರಿಯಾದ ಮಾಹಿತಿಯನ್ನು ತೆಗೆದುಕೊಳ್ಳಿ. ಸ್ವತಂತ್ರ ಆಭರಣ ವಿಮೆಯನ್ನು ಆಯ್ಕೆಮಾಡುವಾಗ, ನೈಸರ್ಗಿಕ ವಿಪತ್ತಿನ ವಿಭಾಗದ ಮೇಲೆ ಕಣ್ಣಿಡಿ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.