Nirmala Sitharaman: ವಂಚನೆಗಳನ್ನು ತಡೆಗಟ್ಟಲು ಬ್ಯಾಂಕ್ ಗಳಿಗೆ ಸಲಹೆ ನೀಡಿದ ವಿತ್ತ ಸಚಿವೆ

Cyber Crime in India: ಭಾರತದಲ್ಲಿ ಲಕ್ಷಾಂತರ ಜನರು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಇದೇ ವೇಳೆ, ಬ್ಯಾಂಕಿಂಗ್‌ಗೆ ಸಂಬಂಧಿಸಿದ ಯಾವುದೇ ವಂಚನೆ ಅಥವಾ ಸಮಸ್ಯೆ ಮುಂಚೂಣಿಗೆ ಬಂದಾಗ, ಜನರು ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

Written by - Nitin Tabib | Last Updated : Sep 17, 2022, 04:55 PM IST
  • ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಗಳು ಪರಸ್ಪರ ಹೊಂದಿಕೆಯಾಗುತ್ತವೆ ಮತ್ತು ಪರಸ್ಪರ ಪೂರಕ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು.
  • ಇದರಿಂದ ಸಾಮಾನ್ಯ ಜನರು ವಿವಿಧ ಬ್ಯಾಂಕ್‌ಗಳೊಂದಿಗೆ ವಹಿವಾಟು ನಡೆಸುವಂತಾಗಬಾರರು ಎಂದು ಅವರು ಹೇಳಿದ್ದಾರೆ.
  • ಇದಲ್ಲದೆ, ಗ್ರಾಹಕರಿಗೆ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಅವರ ಭಾಷೆಯಲ್ಲಿ ಮಾತನಾಡುವುದು ಸಹ ಮುಖ್ಯವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.
Nirmala Sitharaman: ವಂಚನೆಗಳನ್ನು ತಡೆಗಟ್ಟಲು ಬ್ಯಾಂಕ್ ಗಳಿಗೆ ಸಲಹೆ ನೀಡಿದ ವಿತ್ತ ಸಚಿವೆ title=
Nirmala Sitharaman

Banking Fraud: ಇತ್ತೀಚಿನ ದಿನಗಳಲ್ಲಿ ಬ್ಯಾಂಕಿಂಗ್ ಗೆ ಸಂಬಂಧಿಸಿದ ಹಲವಾರು ವಂಚನೆಯ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸಿತಾರಾಮನ್ ಮಾತನಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಿತಾರಾಮನ್, ತಮ್ಮ ವ್ಯವಸ್ಥೆಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿವೆಯೇ ಅಥವಾ ಇಲ್ಲವೇ ಎಂಬುದನ್ನು ಬ್ಯಾಂಕುಗಳು ಖಚಿತಪಡಿಸಿಕೊಳ್ಳಲು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ. ಭಾರತೀಯ ಬ್ಯಾಂಕುಗಳ ಸಂಘದ 75ನೇ ವಾರ್ಷಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿರುವ ಸಿತಾರಾಮನ್, ಹಲವು ಬಾರಿ ಗ್ರಾಹಕರಿಗೆ ವಿವಿಧ ಬ್ಯಾಂಕುಗಳ ಜೊತೆಗೆ ವ್ಯವಹರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕುಗಳು ತಮ್ಮ ರಕ್ಷಣೆಯನ್ನು ಸುನಿಶ್ಚಿತಗೊಳಿಸಲು ಕೃತಕ ಗೋಡೆಗಳನ್ನು ನಿರ್ಮಿಸಿವೆ ಎಂದಿದ್ದಾರೆ.

ಪರಸ್ಪರ ಹೊಂದಾಣಿಕೆ
ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಗಳು ಪರಸ್ಪರ ಹೊಂದಿಕೆಯಾಗುತ್ತವೆ ಮತ್ತು ಪರಸ್ಪರ ಪೂರಕ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇದರಿಂದ ಸಾಮಾನ್ಯ ಜನರು ವಿವಿಧ ಬ್ಯಾಂಕ್‌ಗಳೊಂದಿಗೆ ವಹಿವಾಟು ನಡೆಸುವಂತಾಗಬಾರರು ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಗ್ರಾಹಕರಿಗೆ ಉತ್ತಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಅವರ ಭಾಷೆಯಲ್ಲಿ ಮಾತನಾಡುವುದು ಸಹ ಮುಖ್ಯವಾಗಿದೆ ಎಂದು ಸೀತಾರಾಮನ್ ಹೇಳಿದ್ದಾರೆ.

ಇದನ್ನೂ ಓದಿ-ವೃದ್ಧಾಪ್ಯದಲ್ಲಿ ಖಚಿತ ಆದಾಯ: 1000 ರೂ. ಹೂಡಿಕೆಯಿಂದ ಪ್ರತಿ ತಿಂಗಳು 20 ಸಾವಿರ ಪಿಂಚಣಿ!

ವಂಚನೆಗೆ ಕಡಿವಾಣ
ಸೈಬರ್ ವಂಚನೆಗಳ ಮೇಲೆ ಕಡಿವಾಣ ಹಾಕಲು ಬ್ಯಾಂಕುಗಳು ಇತ್ತೀಚಿನ ಇಂಟರ್ನೆಟ್ ತಂತ್ರಜ್ಞಾನ ಮತ್ತು AI ನಲ್ಲಿ ಹೂಡಿಕೆ ಮಾಡುವುದು ಅವಶ್ಯಕ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಕಾಲಾನಂತರದಲ್ಲಿ ತಂತ್ರಜ್ಞಾನ ಆಧಾರಿತ ನಿಯಂತ್ರಕ ಮೇಲ್ವಿಚಾರಣೆಯ ಪರಿಚಯವು ಹೆಚ್ಚಿನ ಪ್ರಮಾಣದಲ್ಲಿ ವಂಚನೆಗಳನ್ನು ತಡೆಯಲು ಬ್ಯಾಂಕ್‌ಗಳಿಗೆ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-TATA SUV: ಮತ್ತೊಂದು ಅದ್ಭುತ SUV ಬಿಡುಗಡೆ ಮಾಡಿದ ಟಾಟಾ, ಬೆಲೆ & ವೈಶಿಷ್ಟ್ಯ ತಿಳಿಯಿರಿ

ಸೈಬರ್ ಸುರಕ್ಷೆ
ಇದಲ್ಲದೆ, ಯಾವುದೇ ರೀತಿಯ ಅವ್ಯವಹಾರಗಳನ್ನು ಮೊದಲೇ ಪತ್ತೆ ಹಚ್ಚಲು ಸೈಬರ್ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ. 2047 ರ ವೇಳೆಗೆ ದೇಶವು ಅಭಿವೃದ್ಧಿ ಹೊಂದಿದ ಆರ್ಥಿಕತೆಯಾಗುವತ್ತ ಹೆಜ್ಜೆ ಇಟ್ಟಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚು ದೊಡ್ಡ ಪಾತ್ರವನ್ನು ವಹಿಸಲು ಬ್ಯಾಂಕ್‌ಗಳು ಸಿದ್ಧವಾಗಿರಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News