Bank Fraud in India: ದೇಶದ ಮತ್ತೊಂದು ಅತಿ ದೊಡ್ಡ ಬ್ಯಾಂಕ್ ಹಗರಣ ಬಯಲಾಗಿದೆ. ಸುಮಾರು 34 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಈ ಹಗರಣದಲ್ಲಿ ದೀವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿ ಮತ್ತು ಅದರ ಸಹವರ್ತಿ ಕಂಪನಿಗಳ ವಿವಿಧ ಕ್ರಿಮಿನಲ್ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವ ಮೂಲಕ ಸಿಬಿಐ ದೇಶಾದ್ಯಂತ 10 ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ದಾಳಿಯ ವೇಳೆ ಹಲವು ಆಕ್ಷೇಪಾರ್ಹ ಮತ್ತು ಮಹತ್ವಪೂರ್ಣ ದಾಖಲೆಗಳ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ. ತಡ ರಾತ್ರಿಯವರೆಗೆ ಈ ದಾಳಿ ಮುಂದುವರೆದಿದೆ. ಇದಕ್ಕೂ ಮೊದಲು 22 ಸಾವಿರ ಕೋಟಿ ರೂ.ಗಳ ಬ್ಯಾಂಕ್ ಹಗರಣವೊಂದು ಬೆಳಕಿಗೆ ಬಂದಿದ್ದು, ಅದು ಇದುವರೆಗಿನ ಅತಿ ದೊಡ್ಡ ಬ್ಯಾಂಕ್ ಹಗರಣವಾಗಿತ್ತು. 

COMMERCIAL BREAK
SCROLL TO CONTINUE READING

ಸಿಬಿಐ ವಕ್ತಾರ ಆರ್‌ಸಿ ಜೋಶಿ ಪ್ರಕಾರ, ಈ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಉಪ ಪ್ರಧಾನ ವ್ಯವಸ್ಥಾಪಕ ವಿಪಿನ್ ಕುಮಾರ್ ಶುಕ್ಲಾ ಅವರು ಸಿಬಿಐಗೆ ಲಿಖಿತ ದೂರು ನೀಡಿದ್ದಾರೆ. ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಅದರ ಸಹವರ್ತಿ ಕಂಪನಿಗಳು ಮತ್ತು ಸಹಚರರು, 17 ಬ್ಯಾಂಕ್‌ಗಳ ಒಕ್ಕೂಟವನ್ನು ಮುನ್ನಡೆಸುತ್ತಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 34,615 ಕೋಟಿ ರೂ.ಗೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. 2010 ರಿಂದ 2019 ರ ನಡುವೆ ಬ್ಯಾಂಕ್ ಗೆ ಈ ಪಂಗನಾಮ ಹಾಕಲಾಗಿದೆ ಎಂದು ಹೇಳಲಾಗಿದೆ.

42 ಸಾವಿರಕ್ಕೂ ಕೋಟಿಗೂ ಅಧಿಕ ಮೊತ್ತದ ಸಾಲ
ಸಿಬಿಐಗೆ ನೀಡಿರುವ ದೂರಿನಲ್ಲಿ, ಡಿಎಚ್‌ಎಫ್‌ಎಲ್ ಕಂಪನಿಯು ದೀರ್ಘಕಾಲದವರೆಗೆ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕಂಪನಿಯು ಬ್ಯಾಂಕ್ ಆಫ್ ಬರೋಡಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರದ ಐಡಿಬಿಐ, ಯುಕೊ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸೇರಿದಂತೆ ದೆಹಲಿ, ಮುಂಬೈ, ಅಹಮದಾಬಾದ್, ಕೋಲ್ಕತ್ತಾ, ಕೊಚ್ಚಿನ್, ಮುಂತಾದ ಸ್ಥಳಗಳಲ್ಲಿ 17 ಬ್ಯಾಂಕ್‌ಗಳ ಗುಂಪಿನಿಂದ ಸಾಲ ಸೌಲಭ್ಯವನ್ನು ಪಡೆದುಕೊಂಡಿದೆ. ಈ ಕಂಪನಿಯು ಬ್ಯಾಂಕ್‌ಗಳಿಂದ ಒಟ್ಟು 42 ಸಾವಿರ ಕೋಟಿಗೂ ಅಧಿಕ ಸಾಲವನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ, ಆದರೆ ಒಟ್ಟು ಸಾಲದ ಮೊತ್ತದಲ್ಲಿ 34 615 ಸಾವಿರ ಕೋಟಿ ಸಾಲವನ್ನು ಹಿಂತಿರುಗಿಸಲಿಲ್ಲ ಮತ್ತು ಆದರ ಒಂದು ಖಾತೆಯು 31 ಜುಲೈ 2020 ರಂದು ಎನ್‌ಪಿಎ ಆಗಿ ಮಾರ್ಪಟ್ಟಿದೆ.


ಇದನ್ನೂ ಓದಿ-Gold Price Today : ಇಂದು ಸ್ವಲ್ಪ ಇಳಿಕೆಯಾಯಿತು ಚಿನ್ನದ ಬೆಲೆ, ಬೆಳ್ಳಿ ಬೆಲೆ ಎಷ್ಟು ?


ಅಕೌಂಟ್ ಬುಕ್ ನಲ್ಲಿ ವಂಚನೆ ಎಸಗಲಾಗಿದೆ
ಈ ಕಂಪನಿಯು ಬ್ಯಾಂಕ್‌ನಿಂದ ಪಡೆದ ಹಣವನ್ನು ಕಾಮಗಾರಿಗೆ ಬಳಸದೆ, ಬ್ಯಾಂಕ್‌ಗಳಿಂದ ಪಡೆದ ಹಣವನ್ನು ತಿಂಗಳ ಕಡಿಮೆ ಅವಧಿಯಲ್ಲಿ ಬೇರೆ ಕಂಪನಿಗಳಿಗೆ ರವಾನಿಸಿದೆ ಎಂದು ಆರೋಪಿಸಲಾಗಿದೆ. ಸುಧಾಕರ ಶೆಟ್ಟಿ ಎಂಬವರ ಕಂಪನಿಗಳಿಗೂ ಸಾಲದ ಹಣ ರವಾನೆಯಾಗಿದ್ದು, ಈ ಹಣವನ್ನು ಬೇರೆ ಕಂಪನಿಗಳ ಜಂಟಿ ಸಹಭಾಗಿತ್ವದಲ್ಲಿ ಹೂಡಿಕೆ ಮಾಡಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಅಲ್ಲದೇ 65ಕ್ಕೂ ಹೆಚ್ಚು ಕಂಪನಿಗಳಿಗೆ ಸಾಲದ ಹಣ ರವಾನೆಯಾಗಿದ್ದು, ಇದಕ್ಕಾಗಿ ಖಾತೆ ಪುಸ್ತಕದ ಮೂಲಕ ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್, ಅದರ ನಿರ್ದೇಶಕ ಕಪಿಲ್ ವಾಧವನ್, ಧೀರಜ್ ವಾಧವನ್ ಮತ್ತೊಬ್ಬ ವ್ಯಕ್ತಿ ಸುಧಾಕರ್ ಶೆಟ್ಟಿ, ಇತರ ಕಂಪನಿಗಳಾದ ಗುಲ್ಮಾರ್ಗ್ ರಿಲೇಟರ್ಸ್, ಸ್ಕೈಲಾರ್ಕ್ ಬಿಲ್ಡ್‌ಕಾನ್, ದರ್ಶನ್ ಡೆವಲಪರ್ಸ್, ಟೌನ್‌ಶಿಪ್ ಡೆವಲಪರ್ಸ್ ಸೇರಿದಂತೆ ಒಟ್ಟು 13 ಜನರ ವಿರುದ್ಧ ಸಿಬಿಐ ವಿವಿಧ ಕ್ರಿಮಿನಲ್ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದೆ. 


ಇದನ್ನೂ ಓದಿ-ಪಿಎಂ ಕಿಸಾನ್ 12 ನೇ ಕಂತು ಕೈ ಸೇರುವ ಮುನ್ನವೇ ರೈತರಿಗೆ ಶುಭ ಸುದ್ದಿ, ಈ ಯೋಜನೆಯನ್ನು ಪುನರಾರಂಭಿಸುತ್ತಿದೆ ಸರ್ಕಾರ


ಕಂಪನಿಯ ಉದ್ಯೋಗಿಗಳ ಮೇಲೆ ಸಿಬಿಐ ಶಂಕೆ
ಎಫ್‌ಐಆರ್‌ನಲ್ಲಿ ಅಪರಿಚಿತರ ವಿರುದ್ಧವೂ ಕೂಡ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಹಗರಣದಲ್ಲಿ ಪ್ರಸ್ತುತ ತನ್ನ ಯಾವುದೇ ಉದ್ಯೋಗಿಗಳು ಭಾಗಿಯಾಗಿಲ್ಲ ಎಂದು ಬ್ಯಾಂಕ್ ಆರಂಭಿಕ ಹೇಳಿಕೆಯಲ್ಲಿ ತಿಳಿಸಿದೆ ಎಂದು ಸಿಬಿಐ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಆದರೆ ಬ್ಯಾಂಕ್ ಉದ್ಯೋಗಿಗಳ ಸಹಕಾರವಿಲ್ಲದೆ ಇಂತಹ ದೊಡ್ಡ ಹಗರಣ ನಡೆಯಲು ಸಾಧ್ಯವಿಲ್ಲ ಎಂದು ಸಿಬಿಐ ಶಂಕಿಸಿದೆ. ಹೀಗಾಗಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಸಿಬಿಐ ಇಂದು ಮುಂಬೈ ಸೇರಿದಂತೆ ಹಲವು ನಗರಗಳ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ತಡರಾತ್ರಿಯವರೆಗೂ ನಡೆದ ದಾಳಿಯಲ್ಲಿ ಹಲವು ಆಕ್ಷೇಪಾರ್ಹ ಹಾಗೂ ಮಹತ್ವದ ದಾಖಲೆಗಳ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಡರಾತ್ರಿಯವರೆಗೂ ದಾಳಿ ನಡೆದಿದೆ. ಈ ವಿಚಾರದಲ್ಲಿ ಕೆಲ ರಾಜಕಾರಣಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯಬಹುದಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.