Income Tax Return: ಜುಲೈ 31ರೊಳಗೆ ಈ ಕೆಲಸ ಮುಗಿಸಲು ಮರೆಯಬೇಡಿ, ಇಲ್ದಿದ್ರೆ ದಂಡ ಗ್ಯಾರಂಟಿ

Income Tax Return Update: ಒಂದು ವೇಳೆ ನೀವೂ ಕೂಡ ಆದಾಯ ತೆರಿಗೆ ರಿಟರ್ನ್ ಪಾವತಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಹಣಕಾಸು ವರ್ಷ 2021-22 ಮತ್ತು ಮೌಲ್ಯಮಾಪನ ವರ್ಷ 2022-23ರ ಆದಾಯ ತೆರಿಗೆ ರಿಟರ್ ಸಲ್ಲಿಕೆ ಜೂನ್ 15, 2022 ರಿಂದ ಆರಂಭಗೊಂಡಿದೆ. ಒಂದು ವೇಳೆ ನೀವೂ ಕೂಡ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ಅದನ್ನು ತಕ್ಷಣವೇ ಸಲ್ಲಿಸಿ.  

Written by - Nitin Tabib | Last Updated : Jun 21, 2022, 08:26 PM IST
  • ಆದಾಯ ತೆರಿಗೆ ರಿಟರ್ ಸಲ್ಲಿಕೆ ಜೂನ್ 15, 2022 ರಿಂದ ಆರಂಭಗೊಂಡಿದೆ.
  • ಒಂದು ವೇಳೆ ನೀವೂ ಕೂಡ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ಅದನ್ನು ಅಂತಿಮ ಗಡುವಿನ ಮೊದಲು ಫೈಲ್ ಮಾಡಿ.
  • ಇಲ್ಲದಿದ್ದರೆ ಬಡ್ಡಿಯ ಜೊತೆಗೆ ದಂಡ ಕೂಡ ಭರಿಸಬೇಕಾಗುತ್ತದೆ
Income Tax Return: ಜುಲೈ 31ರೊಳಗೆ ಈ ಕೆಲಸ ಮುಗಿಸಲು ಮರೆಯಬೇಡಿ, ಇಲ್ದಿದ್ರೆ ದಂಡ ಗ್ಯಾರಂಟಿ title=
Income Tax Return

Income Tax Return AY 2022-23: ಒಂದು ವೇಳೆ ನೀವು ಆದಾಯ ತೆರಿಗೆಯ ವ್ಯಾಪ್ತಿಯಲ್ಲಿ ಬರದೆ ಇದ್ದರೂ ಕೂಡ ITR ಖಂಡಿತ ದಾಖಲಿಸಿ. ಹಣಕಾಸು ವರ್ಷ 2021-22 ಮತ್ತು ಮೌಲ್ಯಮಾಪನ ವರ್ಷ 2022-23ರ ಆದಾಯ ತೆರಿಗೆ ರಿಟರ್ ಸಲ್ಲಿಕೆ ಜೂನ್ 15, 2022 ರಿಂದ ಆರಂಭಗೊಂಡಿದೆ. ಒಂದು ವೇಳೆ ನೀವೂ ಕೂಡ ರಿಟರ್ನ್ ಸಲ್ಲಿಸಿಲ್ಲ ಎಂದಾದಲ್ಲಿ ಅದನ್ನು ಅಂತಿಮ ಗಡುವಿನ ಮೊದಲು ಫೈಲ್ ಮಾಡಿ.

ಒಂದು ವೇಳೆ ನಿಮಗೆ ನಿಮ್ಮ ಕಚೇರಿಯ ವತಿಯಿಂದ ಫಾರ್ಮ್ 16 ಸಿಕ್ಕಿದೆ ಎಂದಾದಲ್ಲಿ, ಅದನ್ನು ತಡಮಾಡದೆಯೇ ಭರ್ತಿ ಮಾಡಿ. ಅಂತಿಮ ದಿನಾಂಕದ ಮೊದಲು ಅದನ್ನು ನೀವು ಭರ್ತಿ ಮಾಡದೆ ಹೋದರೆ, ನಿಮಗೆ ದಂಡ ಬೀಳಲಿದೆ. ಇದಲ್ಲದೆ ಇನ್ಕಂ ಟ್ಯಾಕ್ಸ್ ಇ-ಫೈಲಿಂಗ್ ವೆಬ್ ಸೈಟ್ ಮೇಲೆ ತೆರಿಗೆ ಪಾವತಿದಾರರು ರಿಟರ್ನ್ ಫೈಲ್ ಮಾಡಲು ಒಮ್ಮೆಲೇ ಮುಗಿಬಿದ್ದರೆ, ಸೈಟ್ ಮೇಲೆ ಲೋಡ್ ಹೆಚ್ಚಾಗುತ್ತದೆ. ಈ ಹಿನ್ನೆಲೆ ಒಂದು ವೇಳೆ ನೀವೂ ಕೂಡ ಇನ್ಕಂ ಟ್ಯಾಕ್ಸ್ ಫೈಲಿಂಗ್ ನಿಂದಾಗುವ ಅಡಚಣೆಗಳಿಂದ ಪಾರಾಗಲು ಬಯಸುತ್ತಿದ್ದರೆ, ಕೊನೆಯ ದಿನಾಂಕದವರೆಗೆ ಕಾಯಬೇಡಿ.

ಇದನ್ನೂ ಓದಿ-Mutual Funds ಗಳಿಗೆ ಅಂತಾರಾಷ್ಟ್ರೀಯ ಸ್ಟಾಕ್ ಗಳಲ್ಲಿ ಹೂಡಿಕೆಗೆ ಅನುಮತಿ ನೀಡಿದ SEBI, ಹೂಡಿಕೆದಾರರಿಗೇನು ಲಾಭ?

ಜುಲೈ 31ರ ಮೊದಲು ರಿಟರ್ನ್ ಫೈಲ್ ಮಾಡಿ
ಹಣಕಾಸು ವರ್ಷ 2021-22 ಮತ್ತು ಮೌಲ್ಯಮಾಪನ ವರ್ಷ 2022-23 ಕ್ಕೆ ಯಾವುದೇ ವಿಳಂಬ ಶುಲ್ಕವಿಲ್ಲದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನಾಂಕ ಜುಲೈ 31, 2022 ಆಗಿದೆ. ಗಡುವಿನ ನಂತರ ನೀವು ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದರೆ, ನೀವು ಸೆಕ್ಷನ್ 234A ಅಡಿಯಲ್ಲಿ ಮತ್ತು ಆದಾಯ ತೆರಿಗೆಯ ಸೆಕ್ಷನ್ 234F ಅಡಿಯಲ್ಲಿ ದಂಡದ ಜೊತೆಗೆ ತೆರಿಗೆಯ ಮೇಲಿನ ಬಡ್ಡಿಯನ್ನು ಪಾವತಿಸಬೇಕಾಗಲಿದೆ.

ಇದನ್ನೂ ಓದಿ-Costliest Tea: ಇದುವೇ ದೇಶದ ಅತ್ಯಂತ ದುಬಾರಿ ಟೀ, ಒಂದು ಕಿಲೋ ಬೆಲೆ ಐಫೋನ್ 13ಗೆ ಸಮ

ITR ಪಾವತಿಸಲು ವಿಸ್ತೃತ ಡೆಡ್ಲೈನ್
ವೈಯಕ್ತಿಕ HUF ಗಾಗಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ಜುಲೈ 31, 2022 ಆಗಿದೆ. ಇನ್ನೊಂದೆಡೆ ಮೌಲ್ಯಮಾಪನದ ಅವಶ್ಯಕತೆ ಇರುವವರಿಗೆ ಕೊನೆಯ ದಿನಾಂಕ ಅಕ್ಟೋಬರ್ 31, 2022 ಆಗಿದೆ. ಟಿಪಿ ರಿಪೋರ್ಟ್ ಅವಶ್ಯಕತೆ ಇರುವ ಬಿಸ್ನೆಸ್ ಗಳಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕ ನವೆಂಬರ್ 30, 2022 ಆಗಿದೆ. ಹೀಗಿರುವಾಗ ಒಂದು ವೇಳೆ ನೀವೂ ಕೂಡ ವೈಯಕ್ತಿಕ ರಿಟರ್ನ್ ದಾಖಲಿಸುತ್ತಿದ್ದರೆ, ತಡಮಾಡದೆ ಮೊದಲು ಆ ಕೆಲಸವನ್ನು ಪೂರ್ಣಗೊಳಿಸಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News