Lok Sabha Election 2024 bank holiday: ಕೇಂದ್ರ ಚುನಾವಣಾ ಆಯೋಗದ (ECI) ವೇಳಾಪಟ್ಟಿಯ ಪ್ರಕಾರ 7 ಹಂತದ ಲೋಕಸಭಾ ಚುನಾವಣೆಯ ಪೈಕಿ 4ನೇ ಸುತ್ತಿನ ಮತದಾನ ಸೋಮವಾರ ಅಂದರೆ ನಾಳೆ(ಮೇ 13) ನಡೆಯಲಿದೆ. ಜೂನ್‌ 4 ರಂದು ಸಾರ್ವತ್ರಿಕ ಚುನಾವಣೆಯ ಫಲಿತಾಂಶವು ಹೊರಬೀಳಲಿದೆ. ತಡೆರಹಿತ ಮತದಾನ ಪ್ರಕ್ರಿಯೆಗಾಗಿ ಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಶಾಲೆಗಳು ಮತ್ತು ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿರುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ರಜಾ ಪಟ್ಟಿಯ ಪ್ರಕಾರ, ಮತದಾನ ನಿಗದಿಯಾಗಿರುವ ಕ್ಷೇತ್ರಗಳಲ್ಲಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.


COMMERCIAL BREAK
SCROLL TO CONTINUE READING

ಈ ನಗರಗಳ ಬ್ಯಾಂಕ್‌ಗಳು ಬಂದ್!: ಮೇ 13ರ ಸೋಮವಾರ ಮತದಾನದ ಅಂಗವಾಗಿ ಆಂಧ್ರ ಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ‌ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಹೈದರಾಬಾದ್ (ಆಂಧ್ರಪ್ರದೇಶ ಮತ್ತು ತೆಲಂಗಾಣ), ಕಾನ್ಪುರ ಮತ್ತು ಶ್ರೀನಗರದಲ್ಲಿ ಬ್ಯಾಂಕ್‌ಗಳು ಕ್ಲೋಸ್‌ ಆಗಿರಲಿವೆ. 4ನೇ ಹಂತದಲ್ಲಿ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ (UT) 96 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.


ಇದನ್ನೂ ಓದಿ: Air India: ಸಿಬ್ಬಂದಿ ಕೊರತೆಯಿಂದ ಏರ್‌ ಇಂಡಿಯಾದ 75 ವಿಮಾನಗಳ ಹಾರಾಟ ಬಂದ್!


4ನೇ ಹಂತದ ಮತದಾನ: ಆಂಧ್ರಪ್ರದೇಶ, ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರದಲ್ಲಿ 4ನೇ ಹಂತದ ಮತದಾನ ನಡೆಯಲಿದೆ. 


5ನೇ ಹಂತದ ಮತದಾನ: ಮೇ 20ರಂದು 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ 5ನೇ ಹಂತದ ಮತದಾನ ನಡೆಯಲಿದೆ.


ಮೇ ಬ್ಯಾಂಕ್ ರಜಾದಿನಗಳು: ಮೇ 13ರ ಸೋಮವಾರ ಮತದಾನದ ನಿಮಿತ್ತ ಆಂಧ್ರಪ್ರದೇಶದ ರಾಜ್ಯ ಸರ್ಕಾರವು ಎಲ್ಲಾ ವಲಯಗಳಲ್ಲಿನ ಎಲ್ಲಾ ಉದ್ಯೋಗಿಗಳಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಈ ಸರ್ಕಾರದ ನಿರ್ದೇಶನವು ಸ್ಥಳೀಯ ಸರ್ಕಾರಗಳು, ಪಂಚಾಯತ್ ಕಚೇರಿಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಏಜೆನ್ಸಿಗಳು ಮತ್ತು ಖಾಸಗಿ ವಲಯದ ವ್ಯವಹಾರಗಳನ್ನು ಒಳಗೊಂಡಿದೆ. ಅಂದಹಾಗೆ ಭಾರತೀಯ ರಿಸರ್ವ್ ಬ್ಯಾಂಕ್ Negotiable Instruments Act Holiday, Real Time Gross Settlement Holiday ಮತ್ತು bank account closures ಎಂಬ 3 ವಿಭಾಗಗಳಲ್ಲಿ ಬ್ಯಾಂಕ್ ರಜಾದಿನಗಳನ್ನು ಘೋಷಿಸುತ್ತದೆ.


ಮೇ ತಿಂಗಳಲ್ಲಿ ಬ್ಯಾಂಕ್ ರಜೆ: ಇನ್ನು ಮೇ ತಿಂಗಳಿನಲ್ಲಿ ಮಹಾರಾಷ್ಟ್ರ ದಿನ/ಮೇ ದಿನ (ಕಾರ್ಮಿಕ ದಿನ), ಲೋಕಸಭೆ ಸಾರ್ವತ್ರಿಕ ಚುನಾವಣೆ, ರವೀಂದ್ರನಾಥ ಟ್ಯಾಗೋರ್ ಜನ್ಮದಿನ, ಬಸವ ಜಯಂತಿ/ಅಕ್ಷಯ ತೃತೀಯ, State Day, ಬುದ್ಧ ಪೂರ್ಣಿಮಾ & ನಜ್ರುಲ್ ಜಯಂತಿ ಅಂಗವಾಗಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.


  • ಮೇ 13ರ ಮಂಗಳವಾರ: ಲೋಕಸಭೆ ಸಾರ್ವತ್ರಿಕ ಚುನಾವಣೆ ನಿಮಿತ್ತ ಶ್ರೀನಗರದಲ್ಲಿ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ

  • ಮೇ 16ರ ಗುರುವಾರ: State Day ಅಂಗವಾಗಿ ಸಿಕ್ಕಿಂನಲ್ಲಿ ಬ್ಯಾಂಕುಗಳು ಬಂದ್‌ ಆಗಿರಲಿವೆ

  • ಮೇ 20ರ ಸೋಮವಾರ: ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ಮಹಾರಾಷ್ಟ್ರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗಿದೆ.

  • ಮೇ 23ರ ಗುರುವಾರ: ಬುದ್ಧ ಪೌರ್ಣಿಮಾ ಅಂಗವಾಗಿ ತ್ರಿಪುರಾ, ಮಿಜೋರಾಂ, ಮಧ್ಯಪ್ರದೇಶ, ಚಂಡೀಗಢ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ಜಮ್ಮು, ಲಕ್ನೋ, ಬಂಗಾಳ, ನವದೆಹಲಿ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಶ್ರೀನಗರದಲ್ಲಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. 


ಇದನ್ನೂ ಓದಿ: Gold Rate Today: ಅಕ್ಷಯ ತೃತೀಯ ಕಾರಣಕ್ಕೆ ಅಧಿಕ ಮಟ್ಟ ತಲುಪಿದ ಚಿನ್ನದ ಬೆಲೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.