ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಗಸ್ಟ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಕ್ಯಾಲೆಂಡರ್ ಪ್ರಕಾರ, ತಿಂಗಳಲ್ಲಿ ಒಟ್ಟು 13 ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಿರುತ್ತವೆ.


COMMERCIAL BREAK
SCROLL TO CONTINUE READING

ಗೆಜೆಟ್ ರಜಾದಿನಗಳು, ಶಾಸನಬದ್ಧ ರಜಾದಿನಗಳು ಮತ್ತು ಭಾನುವಾರದಂದು ಖಾಸಗಿ ಮತ್ತು ಸಾರ್ವಜನಿಕ ಬ್ಯಾಂಕ್‌ಗಳು ಕ್ಲೋಸ್ ಆಗಿರಲಿವೆ. ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರದಂದು ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ. ಈ ರಜಾದಿನಗಳನ್ನು ಹೊರತುಪಡಿಸಿ ರಾಜ್ಯಗಳಾದ್ಯಂತ ಆಚರಿಸಲು ಹಲವಾರು ಪ್ರಾದೇಶಿಕ ಹಬ್ಬಗಳಿವೆ. ಇಂತಹ ಸಂದರ್ಭದಲ್ಲಿ ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್‌ಗಳ ಸ್ಥಳೀಯ ಶಾಖೆಗಳು ಸಹ ಮುಚ್ಚಲ್ಪಡುತ್ತವೆ.


ಇದನ್ನೂ ಓದಿ: DRDO Recruitment 2022 : ಡಿಆರ್‌ಡಿಒದಲ್ಲಿ 630 ಹುದ್ದೆಗಳಿಗೆ ಅರ್ಜಿ : ವಿವರಗಳಿಗೆ ಇಲ್ಲಿ ನೋಡಿ 


ಬ್ಯಾಂಕ್‌ಗಳು ಆಗಸ್ಟ್‌ನಲ್ಲಿ ಅರ್ಧದಷ್ಟು ತಿಂಗಳು ಕಾರ್ಯನಿರ್ವಹಿಸುವುದಿಲ್ಲ. ಹೀಗಾಗಿ ಈ ಅನಾನುಕೂಲತೆ ತಪ್ಪಿಸಲು ನಿಮ್ಮ ಎಲ್ಲಾ ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸವನ್ನು ಮೊದಲೇ ಮಾಡಿಕೊಳ್ಳುವುದು ಉತ್ತಮ. ಆದರೆ, ರಜಾದಿನಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.


ಆಗಸ್ಟ್ 2022ರ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:


ಆಗಸ್ಟ್ 1: ಭಾನುವಾರ


ಆಗಸ್ಟ್ 8: ಭಾನುವಾರ


ಆಗಸ್ಟ್ 14: 2ನೇ ಶನಿವಾರ


ಆಗಸ್ಟ್ 15: ಭಾನುವಾರ


ಆಗಸ್ಟ್ 22: ಭಾನುವಾರ


ಆಗಸ್ಟ್ 28: 4ನೇ ಶನಿವಾರ


ಆಗಸ್ಟ್ 29: ಭಾನುವಾರ


ಇದನ್ನೂ ಓದಿ: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆ!


ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜಾದಿನಗಳು:


ಆಗಸ್ಟ್ 1: ದ್ರುಕ್ಪಾ ತ್ಶೆ-ಜಿ (ಸಿಕ್ಕಿಂ)


ಆಗಸ್ಟ್ 8 & 9: ಮೊಹರಂ


ಆಗಸ್ಟ್ 11 & 12: ರಕ್ಷಾ ಬಂಧನ


ಆಗಸ್ಟ್ 13: ದೇಶಪ್ರೇಮಿಗಳ ದಿನ


ಆಗಸ್ಟ್ 15: ಸ್ವಾತಂತ್ರ್ಯ ದಿನ


ಆಗಸ್ಟ್ 16: ಪಾರ್ಸಿ ಹೊಸ ವರ್ಷ (ಶಾಹೆನ್‌ಶಾಹಿ)


ಆಗಸ್ಟ್ 18: ಜನ್ಮಾಷ್ಟಮಿ


ಆಗಸ್ಟ್ 19: ಶ್ರಾವಣ ವದ/ಕೃಷ್ಣ ಜಯಂತಿ


ಆಗಸ್ಟ್ 20: ಶ್ರೀಕೃಷ್ಣ ಅಷ್ಟಮಿ


ಆಗಸ್ಟ್ 29: ಶ್ರೀಮಂತ ಶಂಕರದೇವರ ತಿಥಿ


ಆಗಸ್ಟ್ 31: ಸಂವತ್ಸರಿ (ಚತುರ್ಥಿ ಪಕ್ಷ)/ಗಣೇಶ ಚತುರ್ಥಿ/ ವರಸಿದ್ಧಿ ವಿನಾಯಕ ವ್ರತ / ವಿನಾಯಕ ಚತುರ್ಥಿ


ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಮಾತ್ರ ದೇಶದಾದ್ಯಂತ ಬ್ಯಾಂಕುಗಳು ಕ್ಲೋಸ್ ಆಗಿರಲಿವೆ. ಇತರ ಪ್ರಾದೇಶಿಕ ರಜಾದಿನಗಳಲ್ಲಿ ಗಣೇಶ ಚತುರ್ಥಿ, ಜನ್ಮಾಷ್ಟಮಿ, ಶಹೆನ್‌ಶಾಹಿ ಮತ್ತು ಮೊಹರಂ ಸೇರಿವೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.