Retail Payments: ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರ ಪ್ರಕಾರ ಕೆಲವು ಬ್ಯಾಂಕ್‌ಗಳ UPI, IPMS ಮತ್ತು ಇತರ ಪಾವತಿ ವ್ಯವಸ್ಥೆಗಳು ಕೆಲವು ಸಮಯದವರೆಗೆ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ.ಅನೇಕ ಬ್ಯಾಂಕ್‌ಗಳಿಗೆ ಸೇವೆಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಸಿಸ್ಟಮ್‌ನ ಮೇಲೆ 'ರಾನ್ಸಮ್‌ವೇರ್' ದಾಳಿಯ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ಮೂಲಗಳ ಪ್ರಕಾರ,ಈ ದಾಳಿಯಿಂದ 300 ಸಣ್ಣ ಬ್ಯಾಂಕ್‌ಗಳ ವಹಿವಾಟು ಮೇಲೆ ಪರಿಣಾಮ ಬೀರಿದೆ.


COMMERCIAL BREAK
SCROLL TO CONTINUE READING

ನಿನ್ನೆ ಸಂಜೆ ನೋಟಿಸ್ ಜಾರಿ : 
ಪಾವತಿ ವ್ಯವಸ್ಥೆಯಲ್ಲಿ ಹೆಚ್ಚಿನ ದುಷ್ಪರಿಣಾಮವನ್ನು ತಪ್ಪಿಸಲು, NPCI ಕೆಲವು ಸಮಯದವರೆಗೆ C-Edge Technologies ಅನ್ನು ಬಳಸುವುದನ್ನು ನಿಲ್ಲಿಸಿದೆ. ಸಿ-ಎಡ್ಜ್ ಟೆಕ್ನಾಲಜೀಸ್ ಮೂಲಕ ಸೇವೆಗಳನ್ನು ಪಡೆಯುವ ಬ್ಯಾಂಕ್ ಗ್ರಾಹಕರು, ಈ ಅವಧಿಯಲ್ಲಿ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ NPCI ಜುಲೈ 31, 2024 ರಂದು ಸಂಜೆ 6:39 ಕ್ಕೆ ಸಾಮಾಜಿಕ ಮಾಧ್ಯಮ ಸೂಚನೆಯನ್ನು ನೀಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದೆ. 


ಇದನ್ನೂ ಓದಿ: Arecanut Price in Karnataka August 1: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ


ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆ :
C-Edge Technologies Limited ಒಂದು ತಂತ್ರಜ್ಞಾನ ಕಂಪನಿಯಾಗಿದೆ. ಇದು ಸಹಕಾರ ಮತ್ತು ಗ್ರಾಮೀಣ ಬ್ಯಾಂಕುಗಳಿಗೆ ಸೇವೆಗಳನ್ನು ಒದಗಿಸುತ್ತದೆ.ಸೀ-ಎಡ್ಜ್ ಟೆಕ್ನಾಲಜೀಸ್‌ನ ಕೆಲವು ಸಿಸ್ಟಮ್‌ಗಳ ಮೇಲೆ ransomware ದಾಳಿ ನಡೆದಿರುವುದು  ಗಮನಕ್ಕೆ ಬಂದಿದೆ ಎಂದು NPCI ಹೇಳಿದೆ.ಈ ಮೂಲಕ ಬಹುತೇಕ ಸಹಕಾರಿ ಮತ್ತು ಗ್ರಾಮೀಣ ಬ್ಯಾಂಕ್‌ಗಳಿಗೆ ಸೇವೆ ಒದಗಿಸಲಾಗುತ್ತದೆ.


ಗುಜರಾತ್‌ನ 17 ಬ್ಯಾಂಕ್‌ಗಳು ಬಾಧಿತ :
ವರದಿಯೊಂದರ ಪ್ರಕಾರ,ಗುಜರಾತ್‌ನ 17 ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಇದರಿಂದ ಪ್ರಭಾವಿತವಾಗಿವೆ ಎನ್ನಲಾಗಿದೆ. ಅಮ್ರೇಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿಬಿ) ಕೂಡ ಈ ಪಟ್ಟಿಯಲ್ಲಿ ಸೇರಿದೆ, 'ಸಿ-ಎಡ್ಜ್' ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಯಿಂದಾಗಿ ಬ್ಯಾಂಕ್‌ನ ಆನ್‌ಲೈನ್ ವಹಿವಾಟು ಮೇಲೆ ಪರಿಣಾಮ ಬೀರಿದೆ.


ಇದನ್ನೂ ಓದಿ: ಟೊಮೇಟೊಗಿಂತ ಅಗ್ಗವಾಯಿತು ಬಾದಾಮಿ !ಟೊಮೇಟೊ ಬೆಲೆ ಕೆ.ಜಿಗೆ 85 ಆದರೆ ಬಾದಾಮಿ ಬೆಲೆ 45ರಿಂದ 50ರೂಪಾಯಿ ಅಷ್ಟೇ !


ಸಿ-ಎಡ್ಜ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಶೀಘ್ರವಾಗಿ ಸಂಪರ್ಕವನ್ನು ಮರುಸ್ಥಾಪಿಸಲಾಗುವುದು ಮತ್ತು ಅಗತ್ಯ ಭದ್ರತಾ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎನ್‌ಪಿಸಿಐ ಹೇಳಿದೆ. ಬಾಧಿತ ಬ್ಯಾಂಕ್‌ಗಳ ಸಂಪರ್ಕವನ್ನು ಶೀಘ್ರದಲ್ಲೇ ಮರುಸ್ಥಾಪಿಸಲಾಗುವುದು.ಸೀ-ಎಡ್ಜ್ ಟೆಕ್ನಾಲಜೀಸ್‌ನ ವೆಬ್‌ಸೈಟ್ ಪ್ರಕಾರ, ಇದು TCS ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಜಂಟಿ ಉದ್ಯಮವಾಗಿದೆ.


Ransomware ದಾಳಿ ಎಂದರೇನು? : 
Ransomware ದಾಳಿಯು ಒಂದು ರೀತಿಯ ಸೈಬರ್ ದಾಳಿಯಾಗಿದೆ.ಇದರಲ್ಲಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್ ಅಥವಾ ನೆಟ್‌ವರ್ಕ್ ಗೆ ಅಕ್ಸೆಸ್ ಪಡೆದು  ಪ್ರಮುಖ ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡುತ್ತಾರೆ. ಎನ್‌ಕ್ರಿಪ್ಟ್ ಮಾಡುವುದು ಎಂದರೆ ಆ ಫೈಲ್‌ಗಳು ನಿಷ್ಪ್ರಯೋಜಕವಾಗುತ್ತವೆ, ಮತ್ತೆ ನೀವು ಅವುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ನಂತರ ಹ್ಯಾಕರ್‌ಗಳು ನಿಮ್ಮಿಂದ ಹಣವನ್ನು ಕೇಳುತ್ತಾರೆ, ಅದನ್ನು ರಾನ್ಸಮ್ ಎಂದು ಕರೆಯಲಾಗುತ್ತದೆ. ನೀವು ಹಣ ಪಾವತಿಸಿದರೆ ಮಾತ್ರ ನಿಮ್ಮ ಫೈಲ್‌ಗಳನ್ನು ಡೀಕ್ರಿಪ್ಟ್ ಮಾಡುವುದಾಗಿ ಹೇಳುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.